ಈ ಪುಟ್ಟ ಬಾಲಕಿಯ ಎಕ್ಸ್ಪ್ರೆಶನ್ ಮುಂದೆ ಎಲ್ಲಾ ನಟಿಯರು ಜೀರೋ, ಒಂದೇ ದಿನದಲ್ಲಿ ಫೇಮಸ್ ಆದ ಈ ಬಾಲಕಿಯ ವೀಡಿಯೋ ನೋಡಿ….!!!

ಮಕ್ಕಳು ದೇವರ ಸಮಾನ ಅಂತ ನಾವೆಲ್ಲಾ ಎಷ್ಟೋ ಸಲ ಕೇಳಿದ್ದೇವೆ. ಅದು ನಿಜವೂ ಸಹ ಏಕೆಂದರೆ ಮಕ್ಕಳ ಮನಸ್ಸು ಏನು ಅರಿಯದೆ ತುಂಬಾ ಮುಗ್ದವಾಗಿರುತ್ತದೆ. ಯಾವುದು ಸರಿ, ಯಾವುದು ತಪ್ಪು ಎಂಬುದು ಅವರಿಗೆ ಅಷ್ಟೊಂದು ಗೊತ್ತಾಗುವದಿಲ್ಲ ಹೀಗಾಗಿ ಮಕ್ಕಳು ಕೆಲವೊಮ್ಮೆ ಸರಿಯಾದ ಕೆಲಸ ಮಾಡಿದರೆ ಕೆಲವೊಮ್ಮೆ ತಪ್ಪು ಕಾರ್ಯ ಸಹ ಮಾಡುತ್ತಾರೆ. ಆದರೆ ಯಾವುದು ಸರಿ ಯಾವುದು ತಪ್ಪು ಎಂಬುದು ತಿಳಿಸಿ ಹೇಳುವದು ಇಂದಿನ ಪ್ರತಿಯೊಬ್ಬ ಪಾಲಕರ ಕರ್ತವ್ಯವಾಗಿದೆ. ಅವರ ಆಸೆ ಈಡೇರಿಸುವದು ಸಹ ಅವರ ಆದ್ಯ ಕರ್ತವ್ಯವಾಗಿದೆ. ಮಕ್ಕಳು ಸಮಾಜದಲ್ಲಿ ಬೆಳೆಯುವಾಗ ತಮಗಿಂತ ದೊಡ್ಡ ವ್ಯಕ್ತಿಗಳ ಅನುಕರಣೆ ಮಾಡಿ ಪ್ರತಿಯೊಂದು ವಿಷಯ ಕಲಿಯುತ್ತಾರೆ ಹೀಗಾಗಿ ಮನೆಯಲ್ಲಿ ಉತ್ತಮ ಸಂಸ್ಕಾರ ನೀಡಿ ಬೆಳಸಬೇಕು.

ಇಂದಿನ ಮಕ್ಕಳು ತಮ್ಮ ತಂದೆ ತಾಯಿಗಳು ಹೇಳಿದ ಹಾಗೆ ನಡೆದುಕೊಳ್ಳುತ್ತಾರೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ಇಂದಿನ ಜನರೇಷನ್ ಪಾಲಕರಿಗಿಂತ ತುಂಬಾ ಸ್ಪೀಡ್ ಆಗಿದೆ. ತಂದೆ-ತಾಯಿಯರಿಗೆ ಗೊತ್ತಿರದ ಕೆಲವೊಂದು ವಿಷಯ ಮಕ್ಕಳಿಗೆ ಗೊತ್ತಿರುತ್ತೆ. ನಾವೆಲ್ಲ ಎಷ್ಟೋ ಸಲ ನೋಡಿರಬಹುದು ಚಿಕ್ಕ ಮಗು ಅಳುತ್ತಿದ್ದರೆ ಆ ಮಗುವಿನ ತಾಯಿ ಅಳು ನಿಲ್ಲಿಸಲು ಎಷ್ಟೇ ಪ್ರಯತ್ನ ಮಾಡಿದರು ಕೆಲವೊಮ್ಮೆ ಮಗು ಅಳುವದನ್ನು ನಿಲ್ಲಿಸುವದಿಲ್ಲ ಆಗ ಅದರ ಕೈಯಲ್ಲಿ ಅಥವಾ ಅದರ ಎದುರುಗಡೆ ಮೊಬೈಲ್ ತೋರಿಸಿದರೆ ಸಾಕು ಥಟ್ಟನೆ ಅಳುವದನ್ನು ನಿಲ್ಲಿಸುತ್ತೆ. ಮಗುವಿಗೆ ಮೊಬೈಲ್ ಕುರಿತು ಏನು ಗೊತ್ತಿರದಿದ್ದರು ಸಹ ಅದು ತನಗೆ ಬೇಕಾದ ಹಾಗೆ ಮೊಬೈಲ್ ನಲ್ಲಿ ಕೈಯಾಡಿಸುತ್ತ ಮೊಬೈಲ್ ಉಪಯೋಗಿಸುವದನ್ನು ಕಲಿಯುತ್ತೆ.

ಸಾಮಾಜಿಕ ಜಾಲತಾಣಗಳಲ್ಲಿ ಸದ್ಯಕ್ಕೆ ಬೇರೆ ಬೇರೆಯಾದ ವಿಡಿಯೋಗಳು ತುಂಬಾನೇ ವೈರಲ್ ಆಗುತ್ತಿವೆ. ಆದರೆ ಅದರಲ್ಲಿ ಮಕ್ಕಳ ವೀಡಿಯೋ ಇದ್ದರೆ ಸಾಕು ಅದಕ್ಕೆ ನೆಟ್ಟಿಗರಿಂದ ತುಂಬಾನೇ ರೆಸ್ಪಾನ್ಸ್ ಸಿಗುತ್ತೆ. ಏಕೆಂದರೆ ಮಕ್ಕಳು ಮಾಡುವ ವೀಡಿಯೋ ತುಂಬಾನೇ ಇಷ್ಟಪಡುತ್ತಾರೆ. ಸದ್ಯಕ್ಕೆ ಅಂತಹದೇ ಒಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಒಂದು ಶಾಲೆಯಲ್ಲಿ ಊಟದ ಬಿಡುವಿನ ಸಮಯದಲ್ಲಿ ಕೆಲವು ಪುಟ್ಟ ಬಾಲಕಿಯರು ಕೂಡಿಕೊಂಡು ಊಟ ಮಾಡುತ್ತಿರುತ್ತಾರೆ. ಅಷ್ಟರಲ್ಲಿ ಯಾರೋ ಒಬ್ಬರು ಈ ಬಾಲಕಿಯರು ಊಟ ಮಾಡುವದನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡುತ್ತಿರುತ್ತಾರೆ ಆಗ ಕ್ಯಾಮೆರಾ ಎದುರುಗಡೆ ಕುಳಿತ ಬಾಲಕಿಯ ದೃಷ್ಟಿ ಒಮ್ಮೆಲೇ ಈ ಕ್ಯಾಮೆರಾ ಕಡೆಗೆ ಹೋಗುತ್ತದೆ. ಇದನ್ನು ನೋಡಿ ಆ ಬಾಲಕಿ ತುಂಬಾ ನಾಚಿಕೆ ಪಟ್ಟು ಮುಖವನ್ನು ಕೆಳಗಡೆ ಮಾಡುತ್ತಾಳೆ. ಅವಳು ನೀಡಿರುವ ಎಕ್ಸ್ಪ್ರೆಶನ್ ನೋಡಿದರೆ ನೀವು ಸಹ ಅವಳ ಸ್ಮೈಲ್ ಗೆ ಫಿದಾ ಆಗುವಿರಿ. ತಾನು ಊಟ ಮಾಡುತ್ತಿರುವ ವೀಡಿಯೋ ತಗೆಯುತ್ತಿದ್ದಾರೆ ಅಂದುಕೊಂಡು ತುಂಬಾ ವಿಭಿನ್ನವಾಗಿ ಸನ್ನೆ ನೀಡುತ್ತಾ ತನ್ನ ನಾಚಿಕೆಯನ್ನು ತೋರ್ಪಟ್ಟಿದ್ದಾಳೆ.

ವೀಡಿಯೋ ನೋಡಿ

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ unique._.beatzz ಎಂಬ ಹೆಸರಿನ ಯುಜರ್ಸ್ ಇದನ್ನು ಶೇರ್ ಮಾಡಿದ್ದಾರೆ. ಇದುವರೆಗೆ ಈ ವೀಡಿಯೋವನ್ನು ಹತ್ತು ಲಕ್ಷಕ್ಕಿಂತಾ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಲೈಕ್ಸ್ ಸಹ ಮಾಡಿದ್ದಾರೆ. ಈ ಬಾಲಕಿಯ ಎಕ್ಸ್ಪ್ರೆಶನ್ ತುಂಬಾ ಮುದ್ದಾಗಿದೆ.