ಈ ಪ್ರಸಿದ್ಧ ನಟಿ ‘ಯೋಗಾ’ ಮಾಡುತ್ತಿರುವ ವಿಡಿಯೋ ತುಂಬಾ ವೈರಲ್ ಆಗುತ್ತಿದೆ…ವಿಡಿಯೋ ನೋಡಿ!
ಇಂದಿನ ಯಾಂತ್ರಿಕ ಜೀವನ, ಆತಂತ್ರಜೀವನ ಶೈಲಿಗೆ ಸುಸೂತ್ರತೆ ತರುವ ನಿಟ್ಟಿನಲ್ಲಿ ಯೋಗ-ಆಸನ ಪ್ರಾಣಾಯಾಮಗಳು ಮುಖ್ಯ ಪಾತ್ರವಾಹಿಸುತ್ತವೆ. ಆಡುವ ವಯಸ್ಸಿನ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಒತ್ತಡದ ಬಲೆಯಲ್ಲಿ ಓಡಾಡುವ ಬಿಡುವಿಲ್ಲದ ಮನಸ್ಸು, ಶರೀರ ಒದ್ದಾಡುತ್ತಿದೆ. ಆದ್ದರಿಂದ ದೇಹ ಬಲಿಶಾಲಿಯಾಗಿರಬೇಕು. ಮನಸ್ಸನ್ನು ಹಗುರವಾಗಿಡಲು, ಆತ್ಮಬಲವನ್ನು ಗಟ್ಟಿಮುಟ್ಟು ಮಾಡಲು ಯೋಗಾಸನ, ಪ್ರಾಣಾಯಾಮದ ಸಾಧನೆಯನ್ನು ಪ್ರತಿನಿತ್ಯಮಾಡುವದು ಅವಶ್ಯಕವಾಗಿದೆ.
ಯೋಗಾಸನಕ್ಕೆ ಇಂದು ಇಡೀ ಜಗತ್ತಿನಾದ್ಯಂತ ಮಹತ್ವವನ್ನು ಕೊಡುತ್ತಿದ್ದಾರೆ. ಅಷ್ಟೇ ಏಕೆ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿವಸ ಎಂದು ಆಚರಿಸಲಾಗುತ್ತಿದೆ. ನಮ್ಮ ದೇಶದ ಯೋಗಗುರು ರಾಮದೇವ ಬಾಬಾ ಅವರು ಇಡೀ ದೇಶಕ್ಕೆ ಯೋಗ ಹೇಳಿ ಕೊಡುವ ಕಾರ್ಯ ಮಾಡಿದ್ದಾರೆ. ಯೋಗ ಮಾಡುವದರಿಂದ ನಮ್ಮ ಶರೀರಕ್ಕೆ ಅನೇಕ ಲಾಭಗಳು ದೊರೆಯುತ್ತವೆ ಅಲ್ಲದೆ ಶರೀರ ಸದೃಢವಾಗಿಡಲು ಸಹಾಯ ವಾಗುತ್ತದೆ.
ಇಂದು ಪ್ರತಿಯೊಬ್ಬರು ಯೋಗ ಕಲಿಯಲು ಬಯಸುತ್ತಾರೆ ಯೋಗದಿಂದ ತಮ್ಮ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸದ್ಯಕ್ಕೆ ಈ ಯೋಗಾಸನದ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ. ಪ್ರಸ್ತುತ ವಿಡಿಯೋದಲ್ಲಿ ಒಬ್ಬ ಪ್ರಸಿದ್ಧ ನಟಿ ಯೋಗಾಸನ ಹೇಗೆ ಮಾಡುವದು ಎಂಬುದನ್ನು ಹೇಳಿ ಕೊಡುತ್ತಿದ್ದಾರೆ ಅಂದರೆ ಪ್ರಾತ್ಯಕ್ಷಿಕವಾಗಿ ಯೋಗಾಸನ ಮಾಡಿ ತೋರಿಸುತ್ತಿದ್ದಾರೆ.

ಈ ವಿಡಿಯೋದಲ್ಲಿ ಯೋಗಾಸನ ಮಾಡುವುದನ್ನು ಹೇಳಿ ಕೊಡುತ್ತಿರುವ ನಟಿ ಯಾರೆಂದರೆ ಅವರ ಹೆಸರು ಯಾಮಿನಿ ಶರ್ಮಾ. ಯಾಮಿನಿ ಶರ್ಮಾ ಅವರು ಒಬ್ಬ ಸಪ್ರಸಿದ್ದ ನಟಿ ಹಾಗೂ ಯೋಗಾ ಟ್ರೆನರ್ ಆಗಿದ್ದಾರೆ. ಇವರು ತಮ್ಮ ಯೂಟ್ಯೂಬ್ ಚಾನೆಲ್ ಮುಖಾಂತರ ಯೋಗಾಸನದ ಅನೇಕ ವಿಡಿಯೋಗಳನ್ನು ಮಾಡಿ ಜನರಿಗೆ ಯೋಗಾಸನ ಹೇಗೆ ಮಾಡುವದನ್ನು ಹೇಳುತ್ತಾರೆ. ಯಾಮಿನಿ ಶರ್ಮಾ ಅವರು ಮೂಲ ಮುಂಬೈ ದವರಾಗಿದ್ದು ಅವರು ಅನೇಕ ಭಾಷೆಗಳ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ.
ಇವರು ‘ಇಂದಿರಾಲೋಹತಿಲ್ ನಾ ಅಜಗಪ್ಪನ್” ಎಂಬ ತಮಿಳು ಚಿತ್ರದ ಮುಖಾಂತರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರ ತುಂಬಾ ಹಿಟ್ ಕೂಡಾ ಆಯಿತು. ಅಲ್ಲದೆ ತೇಲಗುನಲ್ಲಿ ‘ಮಗನೇ ಏನು ಮುರುಮಗನೆ ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಸಹ ನಟನೆ ಮಾಡಿದ್ದಾರೆ ಕನ್ನಡದಲ್ಲಿ ‘ಕುಸುಮ, ಗಿಡ್ಡ, ಹಾಗೂ ಮಾಯಬಜಾರ್ ಇನ್ನೂ ಅನೇಕ ಚಿತ್ರಪಟಗಳಲ್ಲಿ ನಟನೆ ಮಾಡಿದ್ದಾರೆ. ಅವರಿಗೆ ಮೊದಲಿನಿಂದಲೂ ಯೋಗಾ ಅಂದರೆ ತುಂಬಾ ಇಷ್ಟವಾಗಿತ್ತು. ಯೋಗಾ ಕಲಿಯುತ್ತಾ ಕಲಿಯುತ್ತಾ ಈಗ ಅವರೇ ಒಬ್ಬ ಯೋಗಾ ಟ್ರೆನರ್ ಆಗಿದ್ದಾರೆ. ಅವರ ಯೋಗಾ ಮಾಡುವ ಅನೇಕ ವಿಡಿಯೋಗಳು ಯುಟ್ಯೂಟ್ ನಲ್ಲಿ ಲಭ್ಯವಿವೆ. ಅವರ ವಿಡಿಯೋಗಳು ಮನೋರಮಾ ಎಂಬ ಯುಟ್ಯೂಬ್ ಚಾನಲ್ ನಲ್ಲಿ ಅಪ್ಲೋಡ್ ಮಾಡುತ್ತಾರೆ. ಪ್ರಸ್ತುತ ಅವರ ಒಂದು ಯೋಗಾ ಮಾಡುವ ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಸುಮಾರು 10 ಲಕ್ಷಕ್ಕಿಂತ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಣೆ ಮಾಡಿದ್ದಾರೆ.
ಈ ವಿಡಿಯೋ ನೋಡಿ.