‘ಈ’ ಫೇಮಸ್ ಯುಟ್ಯೂಬರ್ ಜೊತೆ ಯುಜವೆಂದ್ರ ಚಹಲ್ ಮದುವೆ ಫಿಕ್ಸ್!
ಭಾರತ ಮತ್ತು ನಮ್ಮ ಫೇವರಿಟ್ RCB ತಂಡದ ಪ್ರಮುಖ ಸ್ಪಿನ್ ಮಾಂತ್ರಿಕ ಯಜುರ್ವೆಂದ್ರ ಚಹಲ್ ಅವರು ಪ್ರಸಿದ್ಧ ಯೂಟ್ಯೂಬರ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡ ವಿಷಯವನ್ನು ತಮ್ಮ ಟ್ವಿಟ್ಟರ್ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಈ ಟ್ವೀಟ್ ನಲ್ಲಿ ‘ನಮ್ಮ ಕುಟುಂಬದ ಸಮ್ಮತಿಯಿಂದ ನಾವು ಒಬ್ಬರನ್ನೊಬ್ಬರಿಗೆ yes ಎಂದಿದ್ದೇವೆ.
We said “Yes” along with our families❤️ #rokaceremony pic.twitter.com/Sf4t7bIgQt
— Yuzvendra Chahal (@yuzi_chahal) August 8, 2020
ಚಹಲ್ ವರಿಸಿದ ಕುವರಿ ಯಾರು?
ಚಹಲ್ ನಿಶ್ಚಿತಾರ್ಥ ಮಾಡಿಕೊಂಡ ಕುವರಿ ಯಾರು ಅಂದರೆ, ಧನಶ್ರೀ ವರ್ಮಾ. ಇವರು ಡಾಕ್ಟರ್, ಕೋರಿಯೋಗ್ರಾಫರ್ ಮತ್ತು ಯೂಟ್ಯೂಬರ್ ಆಗಿದ್ದಾರೆ. ಇವರು ನಡೆಸುವ ಯೂಟ್ಯೂಬ್ ಚಾನೆಲ್ಲಿ ಗೆ 1.5 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಹೀಗಾಗಿ ಇವರು ಯೂಟ್ಯೂಬರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.
ಇವರು ಯೂಟ್ಯೂಬ್ ನಲ್ಲಿ ಡ್ಯಾನ್ಸ್ ವಿಡಿಯೋಗಳನ್ನು ಶೇರ್ ಮಾಡುತ್ತಾ ಇರುತ್ತಾರೆ. ಜೊತೆಗೆ ಒಂದು ಡ್ಯಾನ್ಸ್ ಅಕ್ಯಾಡಮಿಯನ್ನು ಸಹಿತ ನಡೆಸುತ್ತಾರೆ.
ವ್ಯವಸಾಯಿಕವಾಗಿ ಧನಶ್ರೀ ಅವರು ಡೆಂಟಿಸ್ಟ್ ಡಿಗ್ರಿಯನ್ನು ಹೊಂದಿದ್ದಾರೆ. ಇವರು ನವಿಮುಂಬಯಿಯ D Y ಪಾಟೀಲ ಡೆಂಟಲ್ ಕಾಲೇಜ್ ನಿಂದ ಡಿಗ್ರಿ ಹೊಂದಿದ್ದಾರೆ.
ಇನ್ನು ಯಜುರ್ವೆಂದ್ರ ಚಹಲ್ ಬಗ್ಗೆ ಹೇಳುವದಾದರೆ ಭಾರತದ ಪ್ರಮುಖ ಲೆಗ್ ಸ್ಪಿನ್ನರ್ ಎಂದೇ ತಮ್ಮ ಹೆಸರನ್ನು ಖ್ಯಾತಿ ಮಾಡಿಕೊಂಡಿದ್ದಾರೆ. ಜೊತೆಗೆ RCB ಕಣದಿಂದಲೂ ಆಡುತ್ತಾರೆ.
2016 ರಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದ ಇವರು ತಮ್ಮ ಅಂತಾರಾಷ್ಟ್ರೀಯ ಕರಿಯರ್ ನಲ್ಲಿ T ಟ್ವೆಂಟಿಯ 42 ಪಂದ್ಯಗಳಲ್ಲಿ 55 ಹಾಗೂ 52 ಒನ್ ಡೇ ಪಂದ್ಯಗಳಲ್ಲಿ 91 ವಿಕೆಟ್ ಗಳನ್ನು ಕಬಳಿಸಿದ್ದಾರೆ.

ಒಟ್ಟಿನಲ್ಲಿ ಯಜುರ್ವೆಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಅವರ ನಿಶ್ಚಿತಾರ್ಥ ಸುದ್ದಿ ಎಲ್ಲರಿಗೂ ಸರ್ಪ್ರೈಸ್ ಆಗಿದೆ. ನಿನ್ನೆ ಶನಿವಾರ ತಮ್ಮ ಮನೆಯಲ್ಲಿಯೇ ಸರಳವಾಗಿ ಕಾರ್ಯಕ್ರಮವನ್ನು ಮಾಡಿಕೊಂಡ ಫೋಟೋ ಶೇರ್ ಮಾಡಿದ್ದಾರೆ. ಇಬ್ಬರಿಗೂ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ.