ಈ ಬಾಡಿಗಾರ್ಡ್ಸ್ ಮತ್ತು ಡ್ರೈವರ್ ಗಳ ಸಂಬಳ ಯಾವುದೇ IAS-IPS ಅಧಿಕಾರಿಗಳಿಗಿಂತಲೂ ಹೆಚ್ಚಿಗಿದೆ!
ಪ್ರತಿಯೊಂದು ವ್ಯಕ್ತಿ ಜೀವನದಲ್ಲಿ ಯಾವುದೇ ಕೆಲಸ ಮಾಡಲಿ ಕೆಲಸಕ್ಕೆ ತಕ್ಕ ಸಂಬಳ ದೊರೆಯಬೇಕು ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಗಳಿಸಬೇಕು ಎಂಬುದೇ ಆಸೆ ಇರುತ್ತದೆ. ಇದಕ್ಕಾಗಿ ಅನೇಕ ಯುವಕರು ಕಷ್ಟಪಟ್ಟು ಅಭ್ಯಾಸ ಮಾಡಿ ಬಡತನದ ಸಮಸ್ಯೆಗಳನ್ನು ಎದುರಿಸಿ ತುಂಬಾ ಒಳ್ಳೆಯ ಹುದ್ದೆಗಳ ಮೇಲೆ ಆಸೀನರಾಗುತ್ತಾರೆ. ಇಲ್ಲಿ ಓದಿ ನಿಮಗೆ ಆಶ್ಚರ್ಯವಾಗಬಹುದು ಏಕೆಂದರೆ ಇಲ್ಲಿ ನಮೂದಿಸಿರುವ ಬಾಡಿಗಾರ್ಡ್ ಗಳು ಮತ್ತು ಡ್ರೈವರ್ಗಳು ಯಾವುದೇ ಡಾಕ್ಟರ್ ಅಥವಾ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳಿಗಿಂತ ಸಂಬಳವನ್ನು ಹೆಚ್ಚಿಗೆ ಪಡೆಯುತ್ತಾರೆ. ಇವರ ಶಿಕ್ಷಣ ಕಡಿಮೆಯಾದರೂ ಸಹ ಇವರು ಕೆಲಸ ಮಾಡುತ್ತಿರುವ ಸ್ಥಳಗಳ ಮಾಲೀಕರು ತುಂಬಾ VVIP ಮತ್ತು VIP ಗಳು ಇರುವುದರಿಂದ ಯಾವುದೇ ಅತಿ ಸುಶಿಕ್ಷಿತ ಮತ್ತು ಉನ್ನತ ಹುದ್ದೆಯಲ್ಲಿ ಇರುವ ಅಧಿಕಾರಿಗಳಿಗಿಂತ ಸಂಬಳ ಹೆಚ್ಚಾಗಿದೆ. ಅಂಬಾನಿಯಿಂದ ಹಿಡಿದು ಬಾಲಿವುಡ್ ಮೇರುನಟ ಅಮಿತಾಬ್ ಬಚ್ಚನ್ ಅವರ ಮನೆಯಲ್ಲಿ ಕೆಲಸ ಮಾಡುವವರ ತಿಂಗಳ ಸಂಬಳ ಕೇಳಿದರೆ ಅಬ್ಬಾ ಎನ್ನದೆ ಇರಲಾರಿರಿ. ಅವರಿಗಿರುವ ಸಂಬಳದ ಬಗ್ಗೆ ಈ ಲೇಖನದಲ್ಲಿ ತಿಳಿಯುವ.
ಇಲ್ಲಿ ಮೊದಲು ಹೇಳುವ ವ್ಯಕ್ತಿ ಅಜಯ್ ಸಿಂಗ್. ಈತ ಬಾಲಿವುಡ್ ನಟ-ನಟಿಯರ ಅಂಗರಕ್ಷಕ ರಲ್ಲಿಯೇ ಅತಿ ಹೆಚ್ಚು ಸಂಬಳ ತೆಗೆದುಕೊಳ್ಳುವ ಬಾಡಿಗಾರ್ಡ್ ಆಗಿದ್ದಾನೆ. ಈತ ಬಾಲಿವುಡ್ ಬಾದಶಾಹ ಶಾರುಖ್ ಖಾನ್ ಅವರ ಬಾಡಿಗಾರ್ಡ್ ಆಗಿದ್ದಾನೆ. ಶಾರುಖ್ ಖಾನ್ ಅವರಿಗೆ ಮೊದಲಿನಿಂದಲೂ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಹೀಗಾಗಿ ಶಾರುಖ್ ಖಾನ್ ಅವರು ಅಜಯಸಿಂಗನಿಗೆ ವರ್ಷಕ್ಕೆ ಎರಡೂವರೆ ಕೋಟಿ ಸಂಬಳವನ್ನು ಕೊಡುತ್ತಾರಂತೆ.
ಇನ್ನು ಸಲ್ಮಾನ್ ಖಾನ್ ಅವರ ವಿಷಯಕ್ಕೆ ಬಂದಾಗ ಇವರ ಬಾಡಿಗಾರ್ಡ್ ಶೇರಾ ಹೆಸರು ಎಲ್ಲರಿಗೂ ಗೊತ್ತೇ ಇದೆ. ಮಾಧ್ಯಮ ಮೂಲಗಳ ಪ್ರಕಾರ ಸಲ್ಮಾನ್ ಖಾನ್ ಈ ಶೇರಾಗೆ ತಿಂಗಳಿಗೆ 16 ಲಕ್ಷ ರೂಪಾಯಿಗಳನ್ನು ಪಾವತಿಸುತ್ತಾರಂತೆ.

ಇನ್ನು ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬಚ್ಚನ್ ಅವರು ತಮ್ಮ ಬಾಡಿಗಾರ್ಡ್ ಆದ ಜಿತೇಂದ್ರ ಶಿಂಧೆ ಇವರಿಗೆ ವರ್ಷಕ್ಕೆ ಒಂದೂವರೆ ಕೋಟಿ ಹಣವನ್ನು ಸಂಬಳವಾಗಿ ಕೊಡುತ್ತಾರೆ
ಅಂಬಾನಿ ಕುಟುಂಬದವರ ಬಾಡಿಗಾರ್ಡ್ ಆಗುವುದು ಅಷ್ಟೊಂದು ಸುಲಭದ ಮಾತಲ್ಲ. ಇಲ್ಲಿ ಖಾಸಗಿ ಕಂಪನಿಯ ಕಡೆಯಿಂದ ಡ್ರೈವರ್ ಆಯ್ಕೆಮಾಡುವ ಕರಾರನ್ನು ಮಾಡಲಾಗುತ್ತದೆ. ಅಂಬಾನಿಯವರ ಡ್ರೈವರ್ ಆಗಬೇಕಾದರೆ ಅನೇಕ ಪರೀಕ್ಷೆಗಳನ್ನು ಕೊಡಬೇಕಾಗುತ್ತದೆ. ಒಂದು ಸುದೀರ್ಘವಾದ ಪ್ರಕ್ರಿಯೆ ಮುಖಾಂತರವೇ ಡ್ರೈವರ್ ನ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಇಲ್ಲಿ ಡ್ರೈವರ್ ಆಗುವವನ ಕೆಲಸ ಬರೀ ವಾಹನ ಚಲಾಯಿಸುವುದಕ್ಕಷ್ಟೇ ಸೀಮಿತವಾಗಿರುವುದಿಲ್ಲ. ಅದರ ಜೊತೆಗೆ ಆತ ಯಾವುದೇ ಸಮಸ್ಯೆಗಳನ್ನು ಯಾವ ಪ್ರಕಾರ ಹ್ಯಾಂಡಲ್ ಮಾಡುತ್ತಾನೆ ಅದನ್ನು ಸಹಿತ ನೋಡುತ್ತಾರೆ. ಆಯ್ಕೆಯಾದ ಚಾಲಕನಿಗೆ ಕಂಪನಿಯ ಮುಖಾಂತರ ಉತ್ಕೃಷ್ಟ ರೀತಿಯಲ್ಲಿ ಪ್ರಶಿಕ್ಷಣವನ್ನು ಕೊಡಲಾಗುತ್ತದೆ. ಏಷ್ಯಾದಲ್ಲಿಯೇ ಅತಿ ಶ್ರೀಮಂತರಾದ ಅಂಬಾನಿ ಕುಟುಂಬದವರ ಚಾಲಕರಿಗೆ ಸಂಬಳವೂ ಸಹಿತ ಹೆಚ್ಚೇ ಇದೆ. ಕೆಲವು ಮೀಡಿಯಾ ರಿಪೋರ್ಟ್ ಗಳ ಪ್ರಕಾರ ಅಂಬಾನಿ ಕುಟುಂಬದವರ ಚಾಲಕರಿಗೆ ಪ್ರತಿ ವರ್ಷ ಕೋಟಿ ಕೋಟಿ ರೂಪಾಯಿಗಳ ವರೆಗೆ ಸಂಬಳವನ್ನು ಕೊಡಲಾಗುತ್ತದೆ ಅಂತೆ.
ಇನ್ನು ಈ ಬಾಡಿಗಾರ್ಡ್ಸ್ ಮತ್ತು ಡ್ರೈವರ್ ಗಳ ಸಂಬಳ ಆಯ್ತು.ಈಗ ಒಬ್ಬಳು ಆಯಾ ತೆಗೆದುಕೊಳ್ಳುವ ಸಂಬಳ ಕೇಳಿದರೆ ಬೆಚ್ಚಿ ಬೀಳಬಹುದು. ಏಕೆಂದರೆ ಆಯಾಗೆ ಹೆಚ್ಚೆಂದರೆ ಎಷ್ಟಿರಬಹುದು ಸಂಬಳ ಅಂತ ವಿಚಾರ ಮಾಡಬಹುದು. ಬಾಲಿವುಡ್ ಸ್ಟಾರ್ ಸೈಫ್ ಅಲಿಖಾನ್ ಮತ್ತು ಕರೀನಾ ಕಪೂರ್ ದಂಪತಿಗಳ ಮಗನಾದ ತೈಮೂರನಿಗೆ ನೋಡಿಕೊಳ್ಳುವ ಆಯಾಳ ಹೆಸರು ಸವೀತಿ ಇದ್ದು ಆಕೆಗೆ ತಿಂಗಳೊಂದಕ್ಕೆ ಕರೀನಾಳು ತಿಂಗಳಿಗೆ ಒಂದುವರೆ ಲಕ್ಷ ರೂಪಾಯಿಗಳನ್ನು ಸಂಬಳದ ರೂಪದಲ್ಲಿ ಕೊಡುತ್ತಾಳೆ. ಒಂದು ವೇಳೆ ಓವರ್ ಟೈಮ್ ಕೆಲಸ ಮಾಡಿದರೆ ಅದರಲ್ಲಿ 25000 ರೂಪಾಯಿ ಹೆಚ್ಚಾಗುವುದು.