”ಈ ಬಾರೀ ಭಾರತದ ವಿರುದ್ಧ ಸೋತರೆ ಮನಗೆ ಬರಲು ಬಿಡುವದಿಲ್ಲ”. ಪಾಕಿಸ್ತಾನ ಕ್ಯಾಪ್ಟನ್ ಗೆ ಬೆದರಿಕೆ!
2021 ರ ಟಿ 20 ವಿಶ್ವಕಪ್ ಭಾನುವಾರ (ಅಕ್ಟೋಬರ್ 17) ಆರಂಭವಾಗಿದೆ. ಈ ಟಿ 20 ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಒಮಾನ್ನಲ್ಲಿ ನಡೆಯಲಿವೆ. ಭಾರತ ತನ್ನ ಮೊದಲನೆಯ ಪಂದ್ಯ ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ಆರಂಭಿಸಲಿದೆ. ಅಕ್ಟೋಬರ್ 24 ರಂದು ದುಬೈನಲ್ಲಿ ಈ ಪಂದ್ಯ ನಡೆಯಲಿದೆ. ಸಾಂಪ್ರದಾಯಿಕ ಪ್ರತಿಸ್ಪರ್ಧಿ ಎಂದು ಕರೆಯಲ್ಪಡುವ ಈ ತಂಡಗಳ ನಡುವಿನ ಪಂದ್ಯವು ಆಟಗಾರರ ಜೊತೆಗೆ, ಅಭಿಮಾನಿಗಳ ಭಾವನೆಗಳು ಕೂಡ ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ. ಇಂತಹ ಸಂದರ್ಭದಲ್ಲಿ ಒಂದು ವೇಳೆ ಈ ಪಂದ್ಯ ಸೋತರೆ ಆಟಗಾರರ ಪೋಸ್ಟರ್ಗಳನ್ನು ಸುಡುವುದು, ಅವರನ್ನು ಟೀಕಿಸುವುದು ಇಂತಹ ಅನೇಕ ಪ್ರಕರಣಗಳು ಸಂಭವಿಸುವುದನ್ನು ಕಾಣಬಹುದು.
ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ 20 ವಿಶ್ವಕಪ್ ಪಂದ್ಯಕ್ಕೂ ಮುನ್ನ ಒಂದು ವಿಚಿತ್ರ ಘಟನೆ ನಡೆದಿದೆ. ಅದೇನೆಂದರೆ ಪಂದ್ಯದ ಮೊದಲೇ ಪಾಕಿಸ್ತಾನದ ನಾಯಕ ಬಾಬರ್ ಅಜಮ್ಗೆ ಕೆಲವು ಬೆ#ದರಿಕೆಗಳು ಬಂದಿವೆ.
ಟಿ 20 ವಿಶ್ವಕಪ್ ಸ್ಪರ್ಧೆಗಾಗಿ ಪಾಕಿಸ್ತಾನ ತಂಡ ಯುಎಇಗೆ ತಲುಪಿದೆ. ತಂಡವು ಅಕ್ಟೋಬರ್ 15 ರಂದು ಪಾಕಿಸ್ತಾನದಿಂದ ಯುಎಇಗೆ ಹೊರಟಿದ್ದರು ಈ ಸಮಯದಲ್ಲಿ, ಪಾಕಿಸ್ತಾನದ ನಾಯಕ ಆಜಮ್ ವಿಮಾನ ಏರುವ ಮೊದಲು ತಂಡದ ಫೋಟೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು. ಈ ಬಾರಿ ಅವರು ಪಾಕಿಸ್ತಾನಿ ಅಭಿಮಾನಿಗಳಿಂದ ತಮ್ಮ ತಂಡಕ್ಕೆ ಬೆಂಬಲದ ಅಪೇಕ್ಷೆಯನ್ನು ಹೊಂದಿದ್ದಾರೆ.
“ನಾವು ಯುಎಇಗೆ ಹೊರಡುತ್ತಿದ್ದೇವೆ. ನಿಮ್ಮ ಬೆಂಬಲವೇ ನಮಗೆ ಎಲ್ಲವೂ. ನಮ್ಮ ಹಿಂದೆ ನಿಲ್ಲಿ’ ನಮ್ಮನ್ನು ಬೆಂಬಲಿಸುತ್ತಿರಿ, ನಮ್ಮ ಮೇಲೆ ನಂಬಿಕೆ ಇಟ್ಟುಕೊಳ್ಳಿ ಮತ್ತು ನಮ್ಮ ಗೆಲುವಿಗಾಗಿ ಪ್ರಾರ್ಥಿಸಿ “ಎಂದು ಆಜಮ್ ಪೋಸ್ಟ್ನಲ್ಲಿ ಬರೆದಿದ್ದಾರೆ.
24 October wala match jeeta dena warna gar annay nhi degay
— || Rahil Bhat || (@RahilBashir_) October 15, 2021
ಆದರೆ ಅವರ ಪೋಸ್ಟ್ ಅಡಿಯಲ್ಲಿ, ಕೆಲವು ಅಭಿಮಾನಿಗಳು ಅನಿರೀಕ್ಷಿತವಾಗಿ ಪ್ರತಿಕ್ರಿಯಿಸಿದ್ದಾರೆ. ಅದರಲ್ಲಿ ಒಬ್ಬ ಅಭಿಮಾನಿ ಅವರಿಗೆ ನೇರ ಬೆ#ದರಿಕೆ ಪ್ರತಿಕ್ರಿಯೆ ನೀಡಿದ್ದಾರೆ. “ಅಕ್ಟೋಬರ್ 24 ರಂದು ಪಾಕಿಸ್ತಾನವು ಪಂದ್ಯವನ್ನು ಗೆಲ್ಲಲೇಬೇಕು, ಇಲ್ಲದಿದ್ದರೆ ನಿಮ್ಮನ್ನು ಮನೆಗೆ ಬರಲು ಬಿಡುವುದಿಲ್ಲ”. ಎಂದು ಬರೆದಿದ್ದಾರೆ.
ಅಭಿಮಾನಿಗಳ ಬೆದರಿಕೆ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ. ಈ ಘಟನೆಯಿಂದ ಪಾಕಿಸ್ತಾನದ ಕ್ಯಾಪ್ಟನ್ ಆಜಮ್ ಅವರ ಚಿಂತೆ ಇನ್ನಷ್ಟು ಹೆಚ್ಚಾಗಿದೆ.
ಏಕೆಂದರೆ ಟಿ 20 ವಿಶ್ವಕಪ್ ನ ಅಂಕಿಅಂಶಗಳನ್ನು ನೋಡಿದರೆ, ಭಾರತ ತಂಡ ಪಾಕಿಸ್ತಾನಕ್ಕಿಂತ ಮುಂದಿದೆ. ಇಲ್ಲಿಯವರೆಗೆ ಟಿ 20 ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಐದು ಪಂದ್ಯಗಳು ನಡೆದಿವೆ. ಈ ಎಲ್ಲ ಪಂದ್ಯಗಳಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿದೆ.