ಈ ಮೂರು ಜಾತಿಯವರು ಮಾತ್ರ ಭಾರತದ ರಾಷ್ಟ್ರಪತಿಯ ಅಂಗರಕ್ಷಕರಾಗಲು ಸಾಧ್ಯ!

ಸ್ನೇಹಿತರೇ, ಎಂದಿನಂತೆ, ಇಂದು ಒಂದು ವಿಶೇಷವಾದ ಮಾಹಿತಿಯನ್ನು ಓದೋಣ. “ಈ ಜಾತಿಯ ಜನರು ಮಾತ್ರ ಭಾರತದ ರಾಷ್ಟ್ರಪತಿಗಳ ಅಂಗರಕ್ಷಕರಾಗಬಹುದು” ಈ ಕೆಳಗಿನ ಮಾಹಿತಿಯನ್ನು ಓದಿ.

ಇದು ಭಾರತದ ರಾಷ್ಟ್ರಪತಿಗೆ ಸಂಬಂಧಿಸಿದ ಸುದ್ದಿ. ಈ ಸುದ್ದಿ ಹೊಸ ವಿವಾದವನ್ನು ಹುಟ್ಟುಹಾಕಬಹುದು, ಆದರೆ ಪೂರ್ಣ ಮಾಹಿತಿಯನ್ನು ಓದದೆ ಈ ಬಗ್ಗೆ ಯಾವುದೇ ತಪ್ಪು ಅಭಿಪ್ರಾಯ ಗಳನ್ನು ಮಾಡಬಾರದೆಂದು ನಿಮ್ಮೆಲ್ಲರನ್ನೂ ಕೋರುತ್ತೇವೆ.

ಏನು ವಿಷಯ?

ಜುಲೈ 2017 ರಲ್ಲಿ ರಾಮನಾಥ್ ಕೋವಿಂದ್ ಅವರು ಭಾರತದ 14 ನೇ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡರು. ಅಧಿಕಾರ ವಹಿಸಿಕೊಂಡ ನಂತರ, ರಾಷ್ಟ್ರಪತಿಗಳ ಅಂಗರಕ್ಷಕರ ಹುದ್ದೆಗಾಗಿ ಸೆಪ್ಟೆಂಬರ್ 2017 ರಲ್ಲಿ ಜಾಹಿರಾತು ಪ್ರಕಟಿಸಲಾಯಿತು. ಕೇವಲ ಮೂರು ಜಾತಿಗಳನ್ನು ಮಾತ್ರ ಹುದ್ದೆಗೆ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿತ್ತು. ಆದರೆ ಹರಿಯಾಣ ಮೂಲದ ಗೌರವ್ ಯಾದವ್ ಎಂಬ ಯುವಕ ಇದರ ಮೇಲೆ ಆಕ್ಷೇಪ ವ್ಯಕ್ತಪಡಿಸಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. “ಅಂಗರಕ್ಷಕರಾಗಲು ಬೇಕಾದ ಎಲ್ಲಾ ಮಾನದಂಡಗಳನ್ನು ನಾನು ಪೂರೈಸುತ್ತೇನೆ, ಆದರೆ ನಾನು ಜಾತಿ ಮಾನದಂಡಗಳನ್ನು ಪೂರೈಸದ ಕಾರಣ ನಾನು ರಾಷ್ಟ್ರಪತಿಗಳ ಅಂಗರಕ್ಷಕರಾಗಲು ಸಾಧ್ಯವಾಗಲಿಲ್ಲ. ಇದು ಇತರ ಜಾತಿಗಳ ಮೇಲೆ ಅನ್ಯಾಯವಾಗಿದೆ ಏಕೆಂದರೆ ಕೆಲವು ಜಾತಿಗಳ ಜನರನ್ನು ಮಾತ್ರ ಹುದ್ದೆಗೆ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ,” ಎಂದು ವಾದ ಮಾಡಿದರು.

ರಾಷ್ಟ್ರಪತಿಗಳ ಅಂಗರಕ್ಷಕರಾಗಿ ಯಾವ ರೀತಿಯ ಜನರು ಇರಬಹುದು?

ರಾಷ್ಟ್ರಪತಿಗಳ ಅಂಗರಕ್ಷಕರ ಹುದ್ದೆಗೆ ಜಾಹೀರಾತಿನಲ್ಲಿ ಅರ್ಜಿಗಳನ್ನು ಆಹ್ವಾನಿಸಿದ ಮೂರು ಜಾತಿಗಳು ಸಿಖ್ಖರು, ಜಾಟ್‌ಗಳು ಮತ್ತು ರಜಪೂತರು! ಗೌರವ್ ಯಾದವ್ ಅಹಿರ್ ಜಾತಿಗೆ ಸೇರಿದವರಾಗಿರುವುದರಿಂದ ಸಂವಿಧಾನದ 14 ನೇ ವಿಧಿ (ಸಮಾನತೆಯ ಹಕ್ಕು) ಉಲ್ಲಂಘನೆ ಆರೋಪಿಸಿ ನೇಮಕಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅವರ ಅರ್ಜಿಯ ವಿಚಾರಣೆಯ ವೇಳೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರ ಮತ್ತು ಸೇನಾ ಮುಖ್ಯಸ್ಥರಿಗೆ ನೋಟಿಸ್ ನೀಡಿತ್ತು.

ಸಿಖ್ಖರು, ಜಾಟ್‌ಗಳು ಮತ್ತು ರಜಪೂತರು ಮಾತ್ರ ರಾಷ್ಟ್ರಪತಿಗಳ ಅಂಗರಕ್ಷಕರಾಗಲು ಏಕೆ ಸಾಧ್ಯ?

ಮೂಲತಃ ರಾಷ್ಟಪತಿಗಳ ಅಂಗರಕ್ಷಕರ ಇತಿಹಾಸವು ತುಂಬಾ ಹಳೆಯದು. 1773 ರ ರೆಗ್ಯುಲೇಟಿಂಗ್ ಆಕ್ಟ್ ನುಸಾರ ಭಾರತದಲ್ಲಿ ಗವರ್ನರ್ ಜನರಲ್ ಈ ಹುದ್ದೆಯ ನಿರ್ಮಾಣ ಮಾಡಲಾಯಿತು. ವಾರೆನ್ ಹೆಸ್ಟಿಂಗ್ಸ್ ಭಾರತದ ಮೊದಲ ಗವರ್ನರ್ ಜನರಲ್. ಅವನೇ 1773 ರಲ್ಲಿ ಗವರ್ನರ್ ನ ಅಂಗರಕ್ಷಕ ದಳದ ಸ್ವರೂಪ ತಯಾರಿಸಿದನು. ಹೆಸ್ಟಿಂಗ್ಸ್ ನ ಅಂಗರಕ್ಷಕ ದಳದಲ್ಲಿ ಮೊದಲು 50 ಸೈನಿಕರ ತಂಡ ಇತ್ತು. ಬನಾರಸ್ ದ ರಾಜ ಚೈತ್ ಸಿಂಹ ಇನ್ನೂ 50 ಸೈನಿಕರ ತಂಡ ಕಳುಹಿಸಿರುವುದರಿಂದ ಈ ಸಂಖ್ಯೆ 100 ಕ್ಕೆ ಏರಿತು. 1947 ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ ಒಂದು ತಂಡ ಪಾಕಿಸ್ತಾನಕ್ಕೆ ಹೋಯಿತು ಮತ್ತು ಇನ್ನೊಂದು ತಂಡ ಭಾರತದ ಕಡೆಗೆ ಉಳಿಯಿತು. ಭಾರತದಲ್ಲಿ ಉಳಿದ ತಂಡವನ್ನೇ ಮುಂದೆ ರಾಷ್ಟ್ರಪತಿಯ ಅಂಗರಕ್ಷರನ್ನಾಗಿ ಮಾಡಲಾಯಿತು.

ಸೈನಿಕರ ಈ ತಂಡ ಜಗತ್ತಿನ ಕೊನೆಯ ಹಾಗೂ ಎಲ್ಲಕ್ಕೂ ಹಳೆಯ ರೇಜಿಮೆಂಟ್ ಗಳಲ್ಲಿ ಒಂದಾಗಿದೆ. ಪ್ರಸ್ತುತ ಈ ತಂಡದಲ್ಲಿ 222 ಜನರು ಇದ್ದಾರೆ. ಮುಂಚೆ ಈ ತಂಡದಲ್ಲಿ ಎಲ್ಲ ಜಾತಿಯ ಜನರು ಇರುತ್ತಿದ್ದರು. ಆದರೆ ಕಾಲಾಂತರದಲ್ಲಿ ಅದರ ನಿಯಮ ಮತ್ತು ಮಾನದಂಡಗಳಲ್ಲಿ ಬದಲಾವಣೆಯಾಗುತ್ತ ಹೋಯಿತು. ಸಿಖ್ಖರು, ಜಾಟರು ಹಾಗೂ ರಜಪೂತ ಜಾತಿಯ ಜನರ ದೈಹಿಕ ಸಾಮರ್ಥ್ಯ ಹಾಗೂ ಎತ್ತರ ಇತರರಿಗೆ ಹೋಲಿಸಿದರೆ ಅಧಿಕವಿರುತ್ತದೆ. ಆದ್ದರಿಂದ ಅವರಿಗೆ ಈ ತಂಡದಲ್ಲಿ ಸ್ಥಾನ ಕೊಟ್ಟಿರಬಹುದು ಎಂದು ವಿಧ್ವಾoಸರು ಅಭಿಪ್ರಾಯ ಪಡುತ್ತಾರೆ. ಆದರೆ ಪ್ರಸ್ತುತ ರಾಷ್ಟ್ರಪತಿಗಳ ಸುರಕ್ಷೆಯ ಜವಾಬ್ದಾರಿ SPG ಮತ್ತು ದೆಹಲಿ ಪೊಲೀಸರ ಕಡೆಗೆ ಇರುವುದರಿಂದ ರಾಷ್ಟ್ರಪತಿಗಳ ಈ ಅಂಗರಕ್ಷಕರ ಮಹತ್ವವು ರಾಷ್ಟ್ರಪತಿಗಳ ಗೌರವಕ್ಕಾಗಿ ಮತ್ತು ಮೆರವಣಿಗೆಗಾಗಿ ಮಾತ್ರ ಉಳಿದಿದೆ.

ಈ ಮಾಹಿತಿ ನಿಮಗೆ ಹೇಗೆ ಅನಿಸಿತು ನಮಗೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.