‘ಈ’ ಮೊಬೈಲ್ ಕ್ಯಾಮೆರಾದಿಂದ ಕಾಣಿಸುತ್ತಿತ್ತು ಬಟ್ಟೆಯೊಳಗಿನಿಂದ ಸಂಪೂರ್ಣ ಪಾರದರ್ಶಕ! ಈ ಸಮಸ್ಯೆ ಗೊತ್ತಾಗುತ್ತಲೇ ಕಂಪನಿಯು..
ನಾವು ಪಾರದರ್ಶಕ ಗಾಗಲ್ ಗಳ ಬಗ್ಗೆ ವಿವಿಧ ಮ್ಯಾಗ್ಜಿನ್ ಗಳಲ್ಲಿ ಮತ್ತು ಸಿನಿಮಾಗಳಲ್ಲಿ ಕೇಳಿದ್ದೇವೆ. ಆದರೆ ಪ್ರತ್ಯಕ್ಷವಾಗಿ ಇದು ಸಾಧ್ಯವಿಲ್ಲವೆಂದು ಎನಿಸಿದರೆ ಅದು ಸುಳ್ಳಾಗುವದು. ಏಕೆಂದರೆ ಒನ್ ಪ್ಲಸ್ ಕಂಪನಿಯು ಒನ್ ಪ್ಲಸ್ 8 ಪ್ರೊ (OnePlus 8 Pro) ಈ ಮೊಬೈಲ್ ನ ಕ್ಯಾಮೆರಾ ಬಟ್ಟೆಯೊಳಗಿನಿಂದಲೂ ಪಾರದರ್ಶಕ ತೋರಿಸುವ ಶಕ್ತಿಯನ್ನು ಹೊಂದಿತ್ತು. ಆದರೆ ಕ್ಯಾಮೆರಾದ ಈ ವೈಶಿಷ್ಟತೆಯನ್ನು ಫೋನಿನ ಹೊಸ ಅಪ್ಡೇಟ್ ನಲ್ಲಿ ಬಂದ್ ಮಾಡಲಾಗಿದೆ ಎಂದು ಜೀ ನ್ಯೂಸ್ ವರದಿ ಮಾಡಿದೆ.
ಒನ್ ಪ್ಲಸ್ ಕಂಪನಿ ಮೊಬೈಲ್ ಒಂದನ್ನು ತಯಾರಿಸಿತ್ತು. ಅದರ ಕ್ಯಾಮೆರಾದಿಂದ ನೋಡಲಾಗಿ ಬಟ್ಟೆಯೊಳಗಿನಿಂದ ಪಾರದರ್ಶಕವಾಗಿ ಕಾಣಿಸುತ್ತಿತ್ತು. ಈ ರೀತಿಯ ಮೊಬೈಲ್ ಯಾಕೆ ತಯಾರಿಸಲಾಗಿತ್ತು ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸುವುದು ಸಹಜ. 1 ಪ್ಲಸ್ 8 ಪ್ರೋ ಮೊಬೈಲಿನ ಮಾರಾಟಕ್ಕೆ ವೇಗ ನೀಡುವ ಸಲುವಾಗಿ ಅದರ ಕ್ಯಾಮೆರಾದಲ್ಲಿ ಫೀಚರ್ ಸಮಾವೇಶ ಮಾಡಲಾಗಿತ್ತು. ಅದರಲ್ಲಿ ಇನ್ಫ್ರಾರೆಡ್ ಲೈಟ್ ಉಪಯೋಗಿಸಲಾಗಿತ್ತು. ಈ ಕ್ಯಾಮೆರಾದಿಂದ ಬಟ್ಟೆಯೊಳಗಿನಿಂದ ನೇರ ಪಾರದರ್ಶಕ ಗೋಚರಿಸುತ್ತಿತ್ತು.
ದ ಸನ್ ನಲ್ಲಿ ವರದಿಯಾದ ಪ್ರಕಾರ ಕ್ಯಾಮೆರಾ ಡಿವೈಸ್ ಮುಖಾಂತರ ಪಾರದರ್ಶಕವಾಗಿ ಕಾಣುತ್ತಿರುವ ಬಗ್ಗೆ ಗೊತ್ತಾದಾಗ ಕಂಪನಿಯು ಒಮ್ಮೆಲೆ ಬೆಚ್ಚಿಬಿದ್ದಿತು. ಕಾರಣ ಇದರಿಂದ ಸರ್ವಜನಿಕರ ಪ್ರೈವಸಿ ಅಪಾಯಕ್ಕೆ ಸಿಲುಕುತ್ತಿತ್ತು.
ಕಂಪನಿಯು ಈ ಫೋನಿನ ಕ್ಯಾಮೆರಾವನ್ನು ಬಟ್ಟೆಗಳ ಮೇಲೆ ಟೆಸ್ಟ್ ಮಾಡಿ ನೋಡಿರಲಿಲ್ಲ. ಆದರೆ ಯಾವಾಗ ಈ ಸಮಸ್ಯೆ ಗಮನದಲ್ಲಿ ಬಂತು ಆಗ ಕಂಪನಿಗಳ ಹೊಸ ಅಪ್ಡೇಟ್ ಮುಖಾಂತರ ಈ ವಿಶಿಷ್ಟತೆಯನ್ನು ಫೋನ್ ನಿಂದ ತೆಗೆದು ಹಾಕಲಾಯಿತು. ಈ ಮೊಬೈಲ್ನಲ್ಲಿ ಫೋಟೋ ಕ್ರೋಮ್ ಲೆನ್ಸ್ ಜೊತೆಗೆ 4 ರಿಯರ್ ಕ್ಯಾಮೆರಾ ಇದ್ದವು. ಅದರ ಫಿಲ್ಟರ್ ಇನ್ಫ್ರಾರೆಡ್ ಲೈಟ್ ನ ಉಪಯೋಗ ಮಾಡಿ ಫೋಟೋಗೆ ಯೂನಿಕ್ ಕಲರ್ ನೀಡುತ್ತಿತ್ತು. ಮೊಬೈಲ್ ಕ್ಯಾಮೆರಾದಲ್ಲಿಯ ಈ ಫೀಚರ್ ಮೊಟ್ಟಮೊದಲು ಅಮೆರಿಕೆಯಲ್ಲಿ ಗಮನಕ್ಕೆ ಬಂದಿತ್ತು ಎಂದು ಅಮೆರಿಕೆಯ ಬೆನ್ ಗೆಸ್ಕಿನ್ ಎಂಬುವರು ಖುಲಾಸೆ ಮಾಡಿದ್ದರು. ಅವರು ಒನ್ ಪ್ಲಸ್ 8 ಪ್ರೋ ಕ್ಯಾಮೆರಾ ಮುಖಾಂತರ ವಿಡಿಯೋ ರೆಕಾರ್ಡ್ ಮಾಡಿದರು ಮತ್ತು ಪೋಸ್ಟ್ ಮಾಡಿದರು. ಈ ವಿಡಿಯೋದಿಂದ ಆಪಲ್ ಟಿವಿ ಸೆಟ್ ಟಾಪ್ ಬಾಕ್ಸ್ ಪಾರದರ್ಶಕವಾಗಿ ಕಾಣಿಸುತ್ತಿತ್ತು.
ಈ ಫೋನ್ ತಯಾರಿಸುವ ಶೇನ್ ಝೆನ್ ಕಂಪನಿಯು ಚೀನಾದ ಸೋಶಿಯಲ್ ಮೀಡಿಯಾ
Weibo ನಲ್ಲಿ ಒಂದು ಸ್ಟೇಟ್ಮೆಂಟ್ ಜಾರಿ ಮಾಡಿ ಫೋನ್ನಲ್ಲಿಯ ಈ ಫೀಚರ್ ಬಗ್ಗೆ ಕ್ಷಮೆ ಕೇಳಿತ್ತು. ಆದರೆ ಅಲ್ಲಿವರೆಗೆ ಅನೇಕ ಯೂಸರ್ಸ್ ಗಳು ಫೋನ್ ನಿಂದ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಫೋಟೋಗಳಲ್ಲಿ ಪಾರದರ್ಶಕವಾಗಿ ಕಂಡುಬರುವ ವಿಡಿಯೋಗಳು ಸಹ ಇದ್ದವು. ಜನರ ಪ್ರೈವಸಿಯನ್ನು ಅಪಾಯದಲ್ಲಿ ಸಿಲುಕಿಸುವ ಈ ಫೀಚರ್ ಕಂಪನಿಯು ಮುಂದೆ ಬಂದ್ ಮಾಡಿತು. ಈ ರೀತಿಯ ತಂತ್ರಜ್ಞಾನವನ್ನು ಉಪಯೋಗಿಸಿದ ಕಾರಣಕ್ಕಾಗಿ ಕಂಪನಿಯು ಕ್ಷಮೆ ಕೇಳುವ ಪರಿಸ್ಥಿತಿ ಬಂದೊದಗಿತ್ತು.