ಈ ಯುವತಿಯರು ಅತ್ತಿತ್ತ ನೋಡಿ ರಸ್ತೆ ಮೇಲೆ ಮಾಡಿದ ಮಸ್ತಿ CCTV ಹೊರತಾಗಿ ಯಾರೂ ನೋಡಿಲ್ಲ! ನೀವೂ ಮಾತ್ರ ನೋಡಿ…
ಬದುಕು ನಿಜಕ್ಕೂ ತುಂಬಾ ಸುಂದರವಾಗಿದೆ. ಅದಕ್ಕೆ ನಾವೇ ಇಲ್ಲದ ಸಲ್ಲದ ಬೇಕು ಬೇಡಗಳನ್ನು ಅಂಟಿಸುತ್ತಾ, ಆಸೆ ಆಕಾಂಕ್ಷೆಗಳಲ್ಲಿ ಹೆಣೆಯುತ್ತಾ ಬಿಡಿಸಲಾಗದ ಕಗ್ಗಂಟಿನಲ್ಲಿ ಸಿಕ್ಕಿಸುತ್ತ ಹೋಗುತ್ತೇವೆ. ಬದುಕಿನಲ್ಲಿ ಚಿಕ್ಕಪುಟ್ಟ ಆನಂದಗಳು ಸಹ ತುಂಬಾ ನೆಮ್ಮದಿಯನ್ನು ನೀಡುತ್ತವೆ. ಬದುಕು ನೆಮ್ಮದಿಯಿಂದ ಸಾಗಿಸಲು ಬರೀ ಹಣದ ಅವಶ್ಯಕತೆ ಅಷ್ಟೇ ಇರುವುದಿಲ್ಲ. ಕೆಲವೊಮ್ಮೆ ಮುಕ್ತ ಮನಸ್ಸಿನಿಂದ ಮಾಡಿದ ಹಗುರವಾದ ಚೆಲ್ಲಾಟಗಳು, ತುಂಟಾಟಗಳು ಸಹ ಬದುಕಿಗೆ ನೆಮ್ಮದಿ, ಖುಷಿಯನ್ನು ನೀಡುತ್ತವೆ. ಈ ರೀತಿಯ ತುಂಟಾಟದ ವಿಡಿಯೋ ಒಂದು ನಿಮಗಾಗಿ ಇಲ್ಲಿ ತಂದಿದ್ದೇವೆ ನೋಡಿ.
ಚಿಕ್ಕವನಿದ್ದಾಗ ಬೇಗ ದೊಡ್ಡವನಾಗುವ ಕನಸು ಕಾಣುತ್ತೇವೆ, ದೊಡ್ಡವರಾದಮೇಲೆ ಗೊತ್ತಾಗುತ್ತದೆ ಯಾಕಾದರೂ ದೊಡ್ಡವರಾದೇವು? ಇನ್ನೂ ಚಿಕ್ಕವರಾಗಿಯೇ ಇರಬೇಕಾಗಿತ್ತು ಎಂಬ ಯೋಚನೆ ಹುಟ್ಟುತ್ತದೆ. ಚಿಕ್ಕವರಾಗಿದ್ದಾಗ ಮಾಡುವ ಮಸ್ತಿ ಮತ್ತು ತುಂಟಾಟಗಳು ದೊಡ್ಡವರಾದಮೇಲೆ ಮಾಡಲು ಬರುವುದಿಲ್ಲ. ಹಾಗೆ ನೋಡಲಾಗಿ ಮಸ್ತಿ ಮಾಡಲು ಯಾವುದೇ ವಯಸ್ಸಿನ ಇತಿಮಿತಿ ಇಲ್ಲ. ಮನಸ್ಸಿದ್ದರೆ ಯಾವಾಗ ಬೇಕಾದರೂ ಮಸ್ತಿ ಮಾಡಬಹುದು ಎಂದು ಹೇಳುವ ವಿಡಿಯೋ ಇದಾಗಿದೆ. ವಿಡಿಯೋದಲ್ಲಿ ಕಂಡುಬರುವ ಪ್ರಕಾರ, ಇಬ್ಬರು ಯುವತಿಯರು ಜನರಿಲ್ಲದ ಒಂದು ಚಿಕ್ಕ ದಾರಿಯಿಂದ ಸಾಗುತ್ತಿದ್ದಾರೆ. ದಾರಿಯ ಎರಡೂ ಬದಿಗಳಿಗೆ ಮನೆಗಳಿದ್ದು ಅವುಗಳ ಗೇಟ್ ಗಳಿವೆ. ಅಲ್ಲಿ ಒಂದು ಗೇಟಿಗೆ ಡೋರ್ ಬೆಲ್ ನೋಡಿ ಇಬ್ಬರೂ ಯುವತಿಯರಿಗೆ ಅದನ್ನು ಪ್ರೆಸ್ ಮಾಡಿ ಮಜಾ ಮಾಡುವ ಹವ್ಯಾಸ ನಿರ್ಮಾಣವಾಗಿದೆ. ಮನಸ್ಸಿನಲ್ಲಿ ಹುಟ್ಟಿದ ಆಸೆಯನ್ನು ಪೂರ್ಣ ಮಾಡಲೇಬೇಕಲ್ಲ. ಅದಕ್ಕಾಗಿ ಇಬ್ಬರೂ ಯುವತಿಯರು ತಯಾರಾಗಿದ್ದಾರೆ. ಮೊದಲು ಇಬ್ಬರು ಅತ್ತಿತ್ತ ನೋಡುತ್ತಾರೆ. ಅಲ್ಲಿ ಅವರಿಗೆ ಯಾರು ಕಾಣಿಸುವುದಿಲ್ಲ. ಹೀಗೆ ನೋಡುವಾಗ ಅಲ್ಲಿರುವ ಸಿಸಿಟಿವಿ ಮಾತ್ರ ಅವರ ಕಣ್ಣಿಗೆ ಕಂಡುಬಂದಿಲ್ಲ. ಒಬ್ಬಳು ಯುವತಿ ಹಾಗೆಯೇ ಮುಂದೆ ಹೋಗುತ್ತಾಳೆ ಇನ್ನೊಬ್ಬಳು ಡೋರ್ ಬೆಲ್ ಪ್ರೆಸ್ ಮಾಡಲು ಮುಂದಾಗುತ್ತಾಳೆ. ಡೋರ್ ಬೆಲ್ ಪ್ರೆಸ್ ಮಾಡುವ ಮೊದಲು ಮತ್ತೊಮ್ಮೆ ತನ್ನ ಗೆಳತಿಗೆ ಕೇಳಲು ಆಕೆ ಸನ್ನೆಯಿಂದ ಸಮ್ಮತಿಯನ್ನು ಸೂಚಿಸುತ್ತಾಳೆ. ಆಕೆ ಸಮ್ಮತಿ ಸೂಚಿಸಿದ ನಂತರ ಡೋರ್ ಬೆಲ್ ಪ್ರೆಸ್ ಮಾಡಿ, ನಂತರ ಓಡಿ ಹೋಗಲು ಯಾವುದೇ ಅಡೆತಡೆ ಆಗಬಾರದೆಂದು ತನ್ನ ಡ್ರೆಸ್ ಸ್ವಲ್ಪ ಸೊಂಟಿನಿಂದ ಮೇಲಕ್ಕೆತ್ತಿ ಬಟನ್ ಪ್ರೆಸ್ ಮಾಡುತ್ತಾಳೆ. ಬಟನ್ ಪ್ರೆಸ್ ಮಾಡಿದ ತಕ್ಷಣ ಇಬ್ಬರು ಯುವತಿಯರು ನಾಗಾಲೋಟದಲ್ಲಿ ಅಲ್ಲಿಂದ ಓಡಿ ಪರಾರಿಯಾಗಿದ್ದಾರೆ.
ವಿಡಿಯೋ ನೋಡಿ
View this post on Instagram
ಈ ವಿಡಿಯೋ ನೋಡಲು ತುಂಬಾ ತಮಾಷೆಯೆನ್ನಿಸುತ್ತದೆ. ಕಾರಣ ಪುಟ್ಟ ಮಕ್ಕಳು ಈ ರೀತಿಯಾಗಿ ಮಾಡಿದರೆ ಅಷ್ಟೊಂದು ವಿಶೇಷವಲ್ಲ. ಇಲ್ಲಿ ದೊಡ್ಡ ಯುವತಿಯರೇ ಪುಟ್ಟ ಮಕ್ಕಳ ಹಾಗೆ ಮುಗ್ಧರಂತೆ ಮಾಡಿದ ಈ ಕೃತಿ ಅವರ ಜೊತೆಗೆ ನೋಡುಗರಿಗೂ ಸಹ ತುಂಬಾ ಖುಷಿ ನೀಡುತ್ತದೆ. ಜೀವನದಲ್ಲಿ ಸಂತೋಷದಿಂದಿರಲು ಇಂತಹ ಚಿಕ್ಕಪುಟ್ಟ ಚಟುವಟಿಕೆಗಳು ಸದಾ ಬದುಕಿಗೆ ಆಕ್ಸಿಜನ್ ನೀಡುವ ಕೆಲಸ ಮಾಡುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೋವನ್ನು 3.5 ಮಿಲಿಯನ್ ಜನರು ನೋಡಿ ಆನಂದಿಸಿದ್ದಾರೆ. ಜೊತೆಗೆ ಈ ವಿಡಿಯೋಗೆ ಇಲ್ಲಿಯವರೆಗೆ 1 ಲಕ್ಷ 37 ಸಾವಿರ ಲೈಕ್ ಗಳು ಸಂದಿವೆ.