ಈ ರೀತಿ ಬೇಜವಾಬ್ದಾರಿತನದಿಂದ ವಾಹನ ನಡೆಸುವ ನಾ ಲಾಯಕ್ ವಾಹನ ಚಾಲಕರಿಗೆ ಏನು ಮಾಡಬೇಕು? ನೀವೇ ಹೇಳಿ.
ವಾಹನ ಸೌಕರ್ಯಗಳ ಅಭಿವೃದ್ಧಿಯ ಜೊತೆಜೊತೆಗೆ ಅಪಘಾತವೂ ಸಹ ಬಳುವಳಿಯಾಗಿ ಬಂತು. ಈ ವಾಹನಗಳ ದುರ್ಘಟನೆ 99 ಪ್ರತಿಶತ ಚಾಲಕರ ತಪ್ಪಿನಿಂದಾಗಿಯೇ ಘಟಿಸುತ್ತವೆ. ಈಗ ನೀವು ಇಲ್ಲಿ ನೋಡುವ ವಿಡಿಯೋ ಸಹ ಇದನ್ನೇ ಹೇಳುತ್ತದೆ.
ಪ್ರಸ್ತುತ ವಿಡಿಯೋದಲ್ಲಿ ಘಾಟ್ ಸೆಕ್ಷನ್ ನಲ್ಲಿ KSRTC ಯ ಒಂದು ಬಸ್ಸು ಚಲಿಸುತ್ತಿರುವುದು ಕಂಡು ಬರುತ್ತಿದೆ. ಬಸ್ಸು ಇಳಿಜಾರಿನ ಕಡೆಗೆ ಹೋಗುತ್ತಿರುವುದರಿಂದ ಸಹಜವಾಗಿಯೇ ವೇಗದಲ್ಲಿದೆ, ಆದರೂ ತನ್ನ ಲೇನ್ ನಲ್ಲಿ ಸರಿಯಾಗಿ ಚಲಿಸುತ್ತಿದೆ. ಆದರೆ ಅದರ ಬಲಭಾಗಕ್ಕೆ ಪಕ್ಕದಲ್ಲಿಯೇ ಒಂದು ಕೆಂಪು ಬಣ್ಣದ ಕಾರು ಒಳನುಗ್ಗಿತ್ತದೆ. ರಸ್ತೆ ನೋಡಿದಾಗ ಮುಂದೆ ಬಲಭಾಗಕ್ಕೆ ಟರ್ನ್ ಇರುವದು ಕಂಡು ಬರುತ್ತಿದೆ. ಇಷ್ಟಾದರೂ ಕಾರಿನ ಚಾಲಕ ಉಸಿರೂ ಸಹ ತೆಗೆದುಕೊಳ್ಳದೆ ಹಾಗೆಯೇ ಮುಂದೆ ಬಲಕ್ಕೆ ಟರ್ನ್ ಇದ್ದರೂ ಬಸ್ಸಿಗೆ ಓವರ್ ಟೇಕ್ ಮಾಡಿ ಮುಂದೆ ಹೋಗಲು ಯತ್ನಿಸಿದ್ದಾನೆ. ಈಗ ಹೇಳಿ ಎದುರಿನಿಂದ ಬರುವರಿಗೆ ಎಲ್ಲಿದೆ ದಾರಿ? ಇಷ್ಟು ಪರಿಜ್ಞಾನ ಆ ಕಾರಿನ ಚಾಲಕನಿಗೆ ಇರಬೇಡವೆ? ಸರಿಯಾಗಿ ಅದೇ ಸಮಯಕ್ಕೆ ಅಲ್ಲಿ ಎರಡು ಮೂರು ಬೈಕ್ ಸವಾರರು ಬಂದಿರುವುದರಿಂದ ದೊಡ್ಡ ಅನಾಹುತ ನಡೆದಿದೆ. ಆದರೆ ಅದೃಷ್ಟ ಚೆನ್ನಾಗಿರುವುದರಿಂದ ಬೈಕ್ ಸವಾರರಿಗೆ ಸೀರಿಯಸ್ ಗಾಯ ಅಥವಾ ಪೆಟ್ಟು ತಗುಲಿಲ್ಲ. ಒಂದು ವೇಳೆ ಜೀವಿತ ಹಾನಿ ಏನಾದರೂ ಆದರೆ ಇದಕ್ಕೆ ಯಾರು ಜವಾಬ್ದಾರಿ? ಇಷ್ಟೊಂದು ಅವಸರದಿಂದ ತಾವು ಎಲ್ಲಿಗೆ ಬೇಕಾದರೂ ಹೋಗಲಿ, ಆದರೆ ಈ ರೀತಿಯ ಇನ್ನೊಬ್ಬರ ಜೀವಕ್ಕೆ ಗಂಡಾಂತರ ತಂದು ಒಡ್ಡುತ್ತಾರೆ ಇಂಥ ಬೇಜವಾಬ್ದಾರಿತನದ ಚಾಲಕರು.
ವಿಡಿಯೋ ನೋಡಿ
View this post on Instagram
ಪ್ರಸ್ತುತ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ viven_jango_vignaraja ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 4 ಮಿಲಿಯನ್ ವೀಕ್ಷಣೆ ಪಡೆದಿದೆ. ಮತ್ತು ಸುಮಾರು ಒಂದು ಲಕ್ಷಕ್ಕೂ ಮೀರಿ ನೇಟಿಜನ್ಸ್ ಗಳು ವಿಡಿಯೋಗೆ ಲೈಕ್ ಮಾಡಿದ್ದಾರೆ.