ಈ ವ್ಯಕ್ತಿ ಮಾಡಿದ ಘನಕಾರ್ಯಕ್ಕೆ ಏನನ್ನುವಿರಿ? ವಿಡಿಯೋದ ಕೊನೆಯಲ್ಲಿದೆ ಟ್ವಿಸ್ಟ್; ನೀವು ಊಹಿಸಿದ ದೃಶ್ಯವೇ ಕಾಣಲಿದೆ! ಹೇಗೆ ನೋಡಿ…

ಜಗತ್ತಿನಲ್ಲಿ ತುಂಬಾ ವಿಚಿತ್ರವಾದ ಜನರಿದ್ದಾರೆ. ಅವರು ಮಾಡುವ ಕೆಲಸಗಳಿಂದ ಅವರ ವಿಚಿತ್ರತೆಯ ಬಗ್ಗೆ ಪರಿಚಯವಾಗುತ್ತದೆ. ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಜಾಣರಂತೆ ಕೆಲಸಮಾಡಿ ಪ್ರಸಿದ್ಧಿಯನ್ನು ಪಡೆದರೆ ಇನ್ನೂ ಕೆಲವರು ತಮ್ಮ ಜಾಣತನವನ್ನು ತೋರಲು ಹೋಗಿ ಪೆದ್ದರಾಗಿ ತಮ್ಮದೇ ದಡ್ಡತನದ ಪರಿಚಯವನ್ನು ನೀಡುತ್ತಾರೆ.

ಇಲ್ಲಿ ನೋಡಲಿರುವ ವಿಡಿಯೋದಲ್ಲಿ ಯುವಕನೊಬ್ಬ ತನ್ನ ಬೈಕ್ ತೆಗೆದುಕೊಂಡು ಸ್ವಿಮ್ಮಿಂಗ್ ಪೂಲ್ ಹತ್ತಿರ ನಿಂತಿದ್ದಾನೆ. ಬೈಕ್ ನ ಹಿಂದಿನ ಚಕ್ರ ಸ್ವಿಮ್ಮಿಂಗ್ ಪೂಲ್ ನಲ್ಲಿಯ ನೀರಿಗೆ ತಾಗುವ ಸಲುವಾಗಿ ಡಬಲ್ ಸ್ಟ್ಯಾಂಡ್ ಮೇಲೆ ನಿಲ್ಲಿಸಿದ್ದಾನೆ. ಆಮೇಲೆ ಬೈಕ್ ಸ್ಟಾರ್ಟ್ ಮಾಡಿ ಎಕ್ಸಲೆಟರ್ ನೀಡಿ ಹಿಂದಿನ ಚಕ್ರವು ನೀರಿಗೆ ತಾಗಲೆಂದು ಬೈಕ್ ನ್ನು ಸ್ವಲ್ಪ ಕೆಳಗೆ ಪ್ರೆಸ್ ಮಾಡುತ್ತಾನೆ. ಆಗ ಸ್ವಿಮ್ಮಿಂಗ್ ಪೂಲ್ ನಲ್ಲಿಯ ನೀರು ತುಷಾರದಂತೆ ಝೇಂಕರಿಸಲು ಅದೇ ಸ್ಟಾರ್ಟ್ ಆಗಿದೆ ಎನ್ನುವಷ್ಟರಲ್ಲಿ ದೊಡ್ಡ ಪ್ರಮಾದ ಅಂದರೆ ನೀವು ಮನಸ್ಸಿನಲ್ಲಿ ಊಹಿಸಿದ ಘಟನೆ ನಡೆದೇ ಹೋಗುತ್ತದೆ.

ಯುವಕ ತನ್ನ ಬೈಕನ್ನು ಕೆಳಗಡೆ ಪ್ರೆಸ್ ಮಾಡುವಾಗ ಸ್ವಲ್ಪ ಅತ್ತಿತ್ತ ನೋಡುತ್ತಾನೆ. ಅದೇ ಸಂದರ್ಭದಲ್ಲಿ ಆತನ ಕಾಲು ಸ್ವಿಮ್ಮಿಂಗ್ ಪೂಲ್ ನಲ್ಲಿ ಜಾರಿ ಬಿಡುತ್ತದೆ. ಹೀಗಾಗಿ ಆತ ಸಂಪೂರ್ಣವಾಗಿ ಬ್ಯಾಲೆನ್ಸ್ ಕಳೆದುಕೊಂಡು ಬಿಡುತ್ತಾನೆ. ಆ ಸಂದರ್ಭದಲ್ಲಿ ಬ್ಯಾಲೆನ್ಸ್ ಮಾಡಿಕೊಳ್ಳಲು ಬೈಕಿನ ಆಧಾರ ತೆಗೆದುಕೊಳ್ಳಬೇಕೆನ್ನುಷ್ಟರಲ್ಲಿ ಬೈಕ್ ಜೊತೆಗೆ ಆತನೂ ಕ್ಷಣಾರ್ಧದಲ್ಲಿ ನೀರಿನೊಳಗೆ ಬಿದ್ದುಬಿಡುತ್ತಾನೆ.

ನೋಡಿ ಈ ವಿಡಿಯೋ…

ಈ ವಿಡಿಯೋವನ್ನು ಇನ್ಸ್ಟಾಗ್ರಾಂ ನಲ್ಲಿ discovery.engenharia ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದ್ದು ಪ್ರಸ್ತುತ ವಿಡಿಯೋವನ್ನು ಇಲ್ಲಿವರೆಗೆ 5.7 ಮಿಲಿಯನ್ ಜನರು ನೋಡಿದ್ದಾರೆ. ಜೊತೆಗೆ 2 ಲಕ್ಷಕ್ಕೂ ಮೀರಿ ವಿಡಿಯೋಗೆ ಲೈಕ್ ಗಳು ಬಂದಿವೆ.