ಈ ಸರಳ ದಂಪತಿಗಳ ವೈರಲ್ ಆಗುತ್ತಿರುವ ಮುಗ್ಧ ವಿಡಿಯೋ ನೋಡಿದ ಮೇಲೆ ವಾವ್ ಸೂಪರ್ ದೃಶ್ಯ ಎನ್ನುವಿರಿ..!

ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ವಿಡಿಯೋಗಳು ವೈರಲ್ ಆಗುತ್ತವೆ ಈ ವಿಡಿಯೋಗಳಲ್ಲಿ ಕೆಲವೊಂದು ವಿಡಿಯೋಗಳು ಅಥವಾ ಅದರಲ್ಲಿಯ ದೃಶ್ಯಗಳು ನೋಡುಗರ ಮನಸ್ಸಿನಲ್ಲಿ ಅಚ್ಚಳಿಯದಂತೆ ಬೇರೂರಿ ಬಿಡುತ್ತವೆ. ಸದ್ಯ ಇದೇ ರೀತಿಯ ಮುಗ್ಧತೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಡೆ ನೋಡಲು ಸಿಗುತ್ತಿದೆ. ಪ್ರಸ್ತುತ ವಿಡಿಯೋ ನೋಡಿದಾಗ ಮನಸ್ಸು ತುಂಬಾ ಹಗುರವಾಗುತ್ತದೆ. ವಿಡಿಯೋದಲ್ಲಿ ಕಂಡು ಬರುವ ದಂಪತಿಗಳ ಮುಗ್ಧತೆಯನ್ನು ನೋಡಿ ಬಾಯಿಯಿಂದ ವಾವ್ ಈ ರೀತಿಯ ಮುಗ್ಧ ಜನರೂ ಸಹ ಇರುತ್ತಾರಲ್ಲ ಎಂಬ ಯೋಚನೆ ಬರುತ್ತದೆ.

ಪ್ರಸ್ತುತ ವಿಡಿಯೋದಲ್ಲಿ ಒಂದು ಜೋಡಿ TVS ಶಕ್ತಿ ಟು ವೀಲರ್ ವಾಹನವನ್ನು ಖರೀದಿಸಲು ಶೋ ರೂಮಿಗೆ ಬಂದಿದ್ದಾರೆ. ಇದ್ದ ಬದ್ದ ಬಂಡವಾಳವನ್ನು ಒಟ್ಟುಗೂಡಿಸಿ ಖುಷಿಯಿಂದ ಗಾಡಿಯನ್ನು ಖರೀದಿಸುವ ಆಸೆಯನ್ನು ಹೊತ್ತುಕೊಂಡು ಶೋರೂಮ್ ನಲ್ಲಿ ಎಂಟ್ರಿ ಮಾಡಿದ್ದಾರೆ. ಈ ಸಂತೋಷದ ಸಂದರ್ಭದಲ್ಲಿ ಶೋರೂಮಿನ ಮ್ಯಾನೇಜರ್ ವಾಹನ ಮಾಲೀಕನ ಪತ್ನಿಯನ್ನು ವಾಹನದ ಹತ್ತಿರ ನಿಂತು ಫೋಟೋ ತೆಗೆದುಕೊಳ್ಳಲು ಅಣಿ ಮಾಡುತ್ತಾನೆ. ಅದೇ ಸಮಯಕ್ಕೆ ಆಕೆಯ ಗಂಡನಿಗೆ ಕೈಯಲ್ಲಿ ಹೂಮಾಲೆಯನ್ನು ನೀಡಿ ವಾಹನಕ್ಕೆ ತೊಡಿಸಲು ಹೇಳುತ್ತಾನೆ. ಪ್ರಸ್ತುತ ವ್ಯಕ್ತಿಯು ಆಗ ಹೂಮಾಲೆಯನ್ನು ತನ್ನ ವಾಹನಕ್ಕೆ ಕಟ್ಟುವ ಬದಲು ತನ್ನ ಹೆಂಡತಿಯ ಕೊರಳಿನಲ್ಲಿ ಹಾಕಲು ಮುಂದಾಗುತ್ತಾನೆ. ಆಗ ತಕ್ಷಣ ಶೋರೂಮ್ ಮ್ಯಾನೇಜರ್ ಹೆಂಡತಿಗೆ ಬೇಡ ಈ ಹೂಮಾಲೆಯನ್ನು ವಾಹನಕ್ಕೆ ತೊಡಿಸು ಎಂದು ಹೇಳುತ್ತಾನೆ. ಆ ಸಂದರ್ಭದಲ್ಲಿ ದಂಪತಿಗಳಿಬ್ಬರೂ ನಾಚಿಕೆಯಿಂದ ನಕ್ಕಿದ್ದೇ ನಕ್ಕಿದ್ದು. ತಮ್ಮದೇ ಆದ ಸ್ವಂತ ಹಣದಲ್ಲಿ ಬೈಕ್ ಖರೀದಿಸಿದ ಖುಷಿ ಈ ಜೋಡಿಯ ಮುಖದ ಮೇಲೆ ತುಂಬಿ ಹರಿಯುತ್ತಿತ್ತು.

ವೀಡಿಯೋ ನೋಡಿ

ನೇಟಿಜನ್ಸ್ ಗಳ ಮನವನ್ನು ಗೆದ್ದ ಈ ಸುಂದರ ಮತ್ತು ಅಷ್ಟೇ ಮುಗ್ಧವಾದ ವಿಡಿಯೋ ಎಲ್ಲರಿಗೂ ಸಖತ್ತಾಗಿ ಇಷ್ಟವಾಗುತ್ತಿದೆ. ದಂಪತಿಗಳ ಸಹಜ ಹಾಗೂ ಮುಗ್ಧ ಭಾವನೆಗಳನ್ನು ಕಂಡ ನೆಟ್ಟಿಗರು ಪ್ರಸ್ತುತ ವಿಡಿಯೋವನ್ನು ಸೋಶಿಯಲ್ ಮೀಡಿಯಾದ ಪ್ರತಿಯೊಂದು ಪ್ಲಾಟ್ ಫಾರ್ಮನಲ್ಲಿ ಶೇರ್ ಮಾಡುತ್ತಿದ್ದಾರೆ. ಜೊತೆಗೆ ಹೃದಯ ತುಂಬಿ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.