ಈ ‘ಸೌಂದರ್ಯವತಿ’ಯ ಪ್ರೀತಿಯಲ್ಲಿ ಹುಚ್ಚನಾದ ಸೈಫ್ ಅಲಿ ಖಾನ್ ಮಗ; ಅಂತಾನೆ ‘ಮದುವೆಯಾದರೆ…
ಬಾಲಿವುಡ್ ನಟರಾದ ಸೈಫ್ ಅಲಿಖಾನ್ ಪತೋಡಿ ರಾಜವಂಶದ ಶ್ರೀಮಂತ ಮಗ. ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಯಾವಾಗಲೂ ಮೀಡಿಯಾದ ಚರ್ಚೆಯಲ್ಲಿ ಮೊದಲಿಗರಾಗಿರುತ್ತಾರೆ.
ಈಗ ಸೈಫ್ ಅಲಿ ಖಾನ್ ಅವರ ಮಗ ಇಬ್ರಾಹಿಂ ಅವರು ತಮ್ಮ ಗರ್ಲ್ ಫ್ರೆಂಡ್ ನಿಂದಾಗಿ ತುಂಬಾನೇ ಚರ್ಚೆ ಯಲ್ಲಿದ್ದಾರೆ. ಇವರ ಲವ್ ಲೈಫ್ ಬಗ್ಗೆ ಮೀಡಿಯಾದಲ್ಲಿ ಬಿಸಿಬಿಸಿ ಸುದ್ದಿಗಳು ಬರಲು ಪ್ರಾರಂಭವಾಗಿವೆ.
ಸದ್ಯಕ್ಕೆ ಇಬ್ರಾಹಿಂ ಅವರು ಒಂದು ಸುಂದರ ಹುಡುಗಿಗೆ ಡೇಟ್ ಮಾಡುತ್ತಿರುವ ಬಗ್ಗೆ ಚರ್ಚೆಯಲ್ಲಿದ್ದಾರೆ. ಹಾಗೆ ನೋಡಲಾಗಿ ಸೈಫ್ ಅಲಿ ಖಾನ್ ಅವರ ಈ ಮಗನು ಸಹ ಯಾವ ರಾಜಕುಮಾರನಿಗೂ ಕಮ್ಮಿ ಇಲ್ಲ. ಈತನ ಲುಕ್ ಪರಿಪೂರ್ಣವಾಗಿ ತಂದೆಯ ಹಾಗೆಯೇ ಇದೆ. ಇಬ್ರಾಹಿಂ ಮತ್ತು ಈತನ ಗರ್ಲ್ ಫ್ರೆಂಡ್ ಇವರಿಬ್ಬರು ಜೊತೆಯಲ್ಲಿರುವಾಗಿನ ಫೋಟೋಗಳು ಮೀಡಿಯಾದಲ್ಲಿ ವೈರಲ್ ಆಗಿವೆ. ನಾನು ಮದುವೆಯಾದರೆ ಇವಳನ್ನೇ ಮದುವೆಯಾಗುತ್ತೇನೆ ಎಂಬ ವಿಚಾರವನ್ನು ಸಹಿತ ಸ್ಪಷ್ಟಪಡಿಸಿದ ಬಗ್ಗೆ ಸುದ್ದಿಗಳು ಹರಡುತ್ತಿವೆ.
ಮೀಡಿಯಾ ರಿಪೋರ್ಟ ಪ್ರಕಾರ ಇಬ್ರಾಹಿಂ ಪ್ರಸಿದ್ಧ ಯೂಟ್ಯೂಬರ್ ಮೇಘನಾ ಕೌರ್ ಳಿಗೆ ಡೇಟ್ ಮಾಡ್ತಾ ಇದ್ದಾರಂತೆ. ಇಬ್ಬರು ಜೊತೆ ಜೊತೆಯಾಗಿ ಸುತ್ತಾಡುವಾಗ ಅನೇಕ ಸ್ಥಳಗಳಲ್ಲಿ ಕಂಡು ಬಂದಿದ್ದಾರೆ.

ಈ ಪ್ರಸಿದ್ಧ ಯೂಟ್ಯೂಬರ್ ಮೇಘನಾಳ ಬಗ್ಗೆ ಹೇಳುವುದಾದರೆ ಅತಿ ಕಡಿಮೆ ವಯಸ್ಸಿನಲ್ಲಿಯೇ ತುಂಬಾ ಜನಪ್ರಿಯರಾಗಿದ್ದಾರೆ. ಮೇಘನಾಳು ಸೋಶಿಯಲ್ ಮೀಡಿಯಾದಲ್ಲಿ ಯಾವತ್ತು ಆಕ್ಟಿವ್ ಇರುತ್ತಾಳೆ. ಈಕೆ ತನ್ನ ಹಾಟ್ ಮತ್ತು ಗ್ಲ್ಯಾಮರಸ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾಳೆ. ಯೂಟ್ಯೂಬ್ನಲ್ಲಿ ಮೇಘನಾ ನಡೆಸುವ ಚಾನೆಲ್ಲಿಗೆ ಒಂದು ಲಕ್ಷಕ್ಕಿಂತ ಹೆಚ್ಚು ಸಬ್ ಸ್ಕ್ರೈಬರ್ ಇದ್ದಾರೆ. ಮುಂಬರುವ ದಿನಗಳಲ್ಲಿ ಮೇಘನಾ ಚಿತ್ರರಂಗದಲ್ಲಿಯೂ ಕಾಲಿಟ್ಟರೆ ಆಶ್ಚರ್ಯವಿಲ್ಲ.
ಇಬ್ರಾಹಿಂ ಸದ್ಯಕ್ಕೆ ಮುಂಬಯಿಯ ಧೀರುಬಾಯಿ ಅಂಬಾನಿ ಇಂಟರ್ನ್ಯಾಷನಲ್ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಇಬ್ರಾಹಿಂ ಮತ್ತು ಮೇಘನ ಇಬ್ಬರು ಜೊತೆ ಜೊತೆಯಲಿ ಕಾಣಿಸಿಕೊಳ್ಳುತ್ತಿರುವುದರಿಂದ ಇವರಿಬ್ಬರಲ್ಲಿ ಏನಾದರೂ ಹೊಸ ವಿಷಯ ಇದ್ದೇ ಇದೆ ಎಂದು ಮೀಡಿಯಾದಲ್ಲಿ ಚರ್ಚೆ ಎದ್ದದ್ದು ಮಾತ್ರ ಸತ್ಯ.