ಈ ಹಾವು ನಾಟಕ ಮಾಡುವದರಲ್ಲಿ ತುಂಬಾ ಎಕ್ಸ್ಪರ್ಟ್! ನೋಡಿ ಇದರ ನಾಟಕ ವಿಡಿಯೋದಲ್ಲಿ…

ನಿಸರ್ಗದಲ್ಲಿ ಅನೇಕ ರೀತಿಯ ವಿಚಿತ್ರವಾದ ಜೀವಿಗಳಿವೆ. ಅವುಗಳಿಗೆ ಸಂಬಂಧಪಟ್ಟ ಮಾಹಿತಿಗಳು ಸಹಿತ ಅಷ್ಟೇ ರೋಚಕವಾಗಿರುತ್ತವೆ. ಅವುಗಳನ್ನು ತಿಳಿದುಕೊಳ್ಳುತ್ತಾ ಹೋದಂತೆ ಕುತೂಹಲ ಜಾಸ್ತಿಯಾಗುತ್ತಾ ಹೋಗುತ್ತದೆ. ಮನುಷ್ಯನ ಹಾಗೆ ಪ್ರಾಣಿಗಳು ಸಹ ಏನಾದರೂ ತರಲೆ ಮಾಡುವುದರಲ್ಲಿ ತುಂಬಾ ಎಕ್ಸ್ಪರ್ಟ್ ಆಗಿರುತ್ತವೆ. ಇದೇ ರೀತಿ ನಾಟಕ ಮಾಡುವ ಹಾವಿನ ವಿಡಿಯೋ ಒಂದು ನಿಮಗಾಗಿ ಇಲ್ಲಿ ತಂದಿದ್ದೇವೆ.

ಈ ವಿಡಿಯೋ ಒಂದು ಕರಾವಳಿ ತೀರದಲ್ಲಿಯದಿದೆ. ಇಲ್ಲಿ ದಂಡೆಗೆ ಒಂದು ಹಾವು ಹರಿದಾಡುತ್ತ ಬರುತ್ತದೆ. ಹಾವು ಹಿಡಿಯುವ ಎಕ್ಸ್ಪರ್ಟ್ ಹಾವನ್ನು ಮುಟ್ಟಿದ ತಕ್ಷಣ ಅದು ಪಲ್ಟಿಯಾಗಿ ಸತ್ತವರಂತೆ ಬೀಳುತ್ತದೆ. ಪ್ರಸ್ತುತ ವ್ಯಕ್ತಿಯು ಹಾವನ್ನು ಹಿಡಿದು ಮೇಲಿಂದ ಮೇಲೆ ಬೋರಲಾಗಿ ಹಾಕಿದರೂ ಮತ್ತೆ ಮತ್ತೆ ಅದು ಪಲ್ಟಿಯಾಗಿಯೇ ಬೀಳುತ್ತದೆ. ಹಾವಿನ ಈ ತಮಾಷೆಯ ನಾಟಕ ನೋಡಲು ತುಂಬಾ ಮಜವಾಗಿದೆ.

ವಿಡಿಯೋ ನೋಡಿ…

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ‘ದ ಡಿಸ್ಕವರಿ ಲೈಫ್’ ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಇಲ್ಲಿಯವರೆಗೆ 6.8 ಮಿಲಿಯನ್ ಜನ ವೀಕ್ಷಿಸಿದ್ದು 2.3 ಲಕ್ಷ ಜನ ವಿಡಿಯೋಗೆ ಲೈಕ್ ಮಾಡಿದ್ದಾರೆ.