ಈ ಹುಡುಗಿ ಸೀರೆಯ ಮೇಲೆ ಮಾಡಿದ್ದಾಳೆ ‘ಬ್ಯಾಕ್ ಫ್ಲಿಪ್’: ನೋಡಿ ವೈರಲ್ ವಿಡಿಯೋ….!!
ಇಂದು ಯಾವುದೇ ವ್ಯಕ್ತಿ ಜನಪ್ರಿಯವಾಗಬೇಕಾದರೆ ಅವರ ಹತ್ತಿರ ಒಂದು ಪ್ರತಿಭೆ ಅಂದರೆ ಟ್ಯಾಲೆಂಟ್ ಇರಬೇಕಾದದು ತುಂಬಾ ಮುಖ್ಯವಾಗಿದೆ. ಒಂದು ವೇಳೆ ಈ ಟ್ಯಾಲೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದರೆ ಸಾಕು ಆ ವ್ಯಕ್ತಿ ರಾತ್ರೋರಾತ್ರಿಯೇ ಸ್ಟಾರ್ ಆಗುತ್ತಾರೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಹುಡುಗಿಯ ವಿಡಿಯೋಗಳು ತುಂಬಾ ವೈರಲ್ ಆಗುತ್ತಿವೆ. ಈ ಹುಡುಗಿಯ ಕೆಲವು ವಿಡಿಯೋಗಳು ಆಶ್ಚ#ರ್ಯ ಗೊಳಿಸುವಂತಹ ವಿಡಿಯೋಗಳಾಗಿವೆ.
ನಾವು ಹೇಳುತ್ತಿರುವ ಹುಡುಗಿಯ ಹೆಸರು ಪಾರುಲ್ ಅರೋರಾ ಇದೆ. 24 ವರ್ಷದ ಪಾರುಲ್ ಅವರು ಹರಿಯಾಣದ ಅಂಬಾಲಾದಲ್ಲಿ ವಾಸಿಸುತ್ತಿದ್ದು, ಅತ್ಯುತ್ತಮ ಜಿಮ್ನಾಸ್ಟ್ ನಲ್ಲಿ ಪಾರುಲ್ ಸಹ ಒಬ್ಬರು. ಪಾರುಲ್ ಅವರು ತಮ್ಮ 9 ನೇ ವರ್ಷ ವಯಸ್ಸಿನಿಂದ ಜಿಮ್ನಾಸ್ಟಿಕ್ಸ್ ತಯಾರಿ ನಡೆಸುತ್ತಿದ್ದಾರೆ. ಈ ಹುಡುಗಿಯ ಜಿಮ್ನಾಸ್ಟಿಕ್ ದ ಕೆಲವು ಆಶ್ಚರ್ಯ ಚಕಿತ ಗೊಳಿಸುವ ವೀಡಿಯೊಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚಿಸಲಾಗುತ್ತಿದೆ.
ಪಾರುಲ್ ಆರೋರಾ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಬಹಳಷ್ಟು ದಿನಗಳಿಂದ ತಮ್ಮ ವಿಡಿಯೋಗಳನ್ನು ಪೋಸ್ಟ ಮಾಡುತ್ತಿದ್ದಾರೆ. ಆದರೆ ಕೆಲವು ದಿನಗಳ ಹಿಂದೆ ಸೀರೆ ಉಟ್ಟುಕೊಂಡು ಬ್ಯಾಕ್ ಫ್ಲಿಪ್ ಮಾಡಿರುವ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದರು. ಈ ವಿಡಿಯೋ ದಿಂದ ಪಾರುಲ್ ಅವರು ಬಹಳಷ್ಟು ಜನಪ್ರಿಯತೆ ಪಡೆದುಕೊಂಡರು. ಸದ್ಯಕ್ಕೆ ಪಾರುಲ್ ಅವರ ಪ್ರತಿಯೊಂದು ವಿಡಿಯೋಗೆ ಸುಮಾರು ಲಕ್ಷ್ಯ ಕ್ಕಿಂತ ಹೆಚ್ಚು ವ್ಹಿವ್ಸ್ ಬರುತ್ತಿವೆ. ಇವರು ಒಂದು ಎರಡು ಸಲ ಬ್ಯಾಕ್ ಫ್ಲಿಪ್ ಮಾಡುವದಿಲ್ಲ ಹೊರತಾಗಿ ಒಂದೇ ಸಮಯದಲ್ಲಿ ಸುಮಾರು 6 ರಿಂದ 7 ಸಲ ಬ್ಯಾಕ್ ಫ್ಲಿಪ್ ಮಾಡಿ ತೋರಿಸಿದ್ದಾರೆ.
ಸೀರೆಯನ್ನು ಉಟ್ಟುಕೊಂಡು ಡ್ಯಾನ್ಸ್ ಮಾಡುವದು ಎಷ್ಟೋ ಮಹಿಳೆಯರಿಗೆ ಕಷ್ಟಕರ ಸಂಗತಿ ಯಾಗುತ್ತದೆ. ಅಲ್ಲದೆ ಅದು ಅಸಾಧ್ಯವಾದ ಮಾತಾಗಿದೆ. ಆದರೆ ಪಾರುಲ್ ಮಾತ್ರ ಸೀರೆ ಉಟ್ಟುಕೊಂಡು ಸ್ಟಂಟ್ ಮಾಡುವದು ಅಸಾಧ್ಯವಾದದನ್ನು ಸಾಧ್ಯ ಮಾಡಿ ತೋರಿಸಿದ್ದಾರೆ. ಅಂದರೆ ಪಾರುಲ್ ಸೀರೆ ಉಟ್ಟುಕೊಂಡು ಬ್ಯಾಕ್ ಫ್ಲಿಪ್ ಮಾಡಿದ್ದಾರೆ. ಆದ್ರೆ ಇವರು ಸೀರೆಯ ಮೇಲೆ ಬ್ಯಾಕ್ ಫ್ಲಿಪ್ ಮಾಡುವದಕ್ಕಿಂದ ಮುಂಚೆ ಸುಮಾರು 3 ಸಲ ಬಿದಿದ್ದರಂತೆ. ಕೊನೆಗೆ ತಮ್ಮ ಪ್ರಯತ್ನದಿಂದ ಇದನ್ನು ಮಾಡಿಯೇ ಬಿಟ್ಟರು.
ವಿಡಿಯೋ ನೋಡಿ View this post on Instagram
A post shared by Parul_Arora💫 (@parul_cutearora)
ಪಾರುಲ್ ಅವರು ಕೇವಲ ಜನಪ್ರಿಯತೆಗಾಗಿ ಮಾಡುವದರ ಜೊತೆಗೆ ಇವರು ನ್ಯಾಷನಲ್ ಲೇವಲ್ ನಲ್ಲಿ ಇವರು ಚಾಂಪಿಯನ್ ಕೂಡಾ ಆಗಿದ್ದಾರೆ. ಇವರು ನ್ಯಾಷನಲ್ ಲೇವಲ್ ಜಿಮ್ನಾಸ್ಟಿಕ್ ನಲ್ಲಿ ಗೋಲ್ಡ್ ಮೇಡಲ್ ಕೂಡಾ ತಮ್ಮದಾಗಿಸಿಕೊಂಡಿದ್ದಾರೆ. ಅವರ ಈ ವಿಡಿಯೋಗಳನ್ನು ನೋಡಿದ್ರೆ ನಿಮಗೂ ಅನಿಸುವದು ಇವರು ನಿಜವಾದ ಜಿಮ್ನಾಸ್ಟಿಕ್ ಅಂತ. ಮುಂಬರುವ ಒಲಂಪಿಕ್ ನಲ್ಲಿ ಭಾರತ ದೇಶದ ಪರವಾಗಿ ಸ್ಪರ್ಧಿಸಿ ಗೋಲ್ಡ್ ಮೇಡಲ್ ಗೆಲ್ಲಲಿ ಅಂತ ನಮ್ಮ್ ಡೈಲಿರಿಪೋರ್ಟನೀವ್ಸ್ ಟೀಮ್ ವತಿಯಿಂದ ಹಾರೈಸುತ್ತೇವೆ.