‘ಈ’ 4 ಭಾರತೀಯ ಕ್ರಿಕೇಟ್ ಆಟಗಾರರು ತಮ್ಮದೇ ಆದ ಖಾಸಗಿ Jet ಅನ್ನು ಹೊಂದಿದ್ದಾರೆ, ಅವುಗಳ ಬೆಲೆ ಕೇಳಿದರೆ ಆಶ್ಚರ್ಯ ಪಡುವಿರಿ!

ಪ್ರಪಂಚದಾದ್ಯಂತದ ಕ್ರಿಕೆಟಿಗರು ಸಾಕಷ್ಟು ಹಣವನ್ನು ಹೊಂದಿರುತ್ತಾರೆ, ಈ ಸಂಗತಿ ನಮಗೆನು ಹೊಸದಲ್ಲ. ಪ್ರಪಂಚದಾದ್ಯಂತ ಸಾಕಷ್ಟು ಕ್ರಿಕೇಟ್ ಆಟಗಾರರು ಬಹಳಷ್ಟು ಪ್ರಮಾಣದಲ್ಲಿ ಸಂಪತ್ತನ್ನು ಹೊಂದಿದ್ದಾರೆ. ಕ್ರಿಕೆಟಿಗನೊಬ್ಬ ಫೇಮಸ್ ಆದಾಗ ಅವರ ಹತ್ತಿರ ದೊಡ್ಡ ದೊಡ್ಡ ಬ್ರ್ಯಾಂಡ್ ಗಳ ಜಾಹಿರಾತು ಬರುತ್ತವೆ , ಆ ಬ್ರ್ಯಾಂಡ್ ಪ್ರಚಾರ ಮಾಡಿದ ನಂತರ ಅವರಿಗೆ ದೊಡ್ಡ ಪ್ರಮಾಣದಲ್ಲಿ ಹಣ ನೀಡಲಾಗುತ್ತದೆ.

ಆ ಮೊತ್ತ ಕೋಟಿಗಳ ಲೆಕ್ಕದಲ್ಲಿ ಇರುತ್ತದೆ. ಇಂದಿನ ಸರ್ವಸಾಮಾನ್ಯ ಕ್ರಿಕೆಟಿಗರೂ ಸಹ ಇಂದು ಕೋಟಿಗಟ್ಟಲೆ ಸಂಪಾದಿಸುತ್ತಿದ್ದಾರೆ. ಐಪಿಎಲ್ ನಂತರ, ದೊಡ್ಡ ದೊಡ್ಡ ಕಂಪೆನಿಗಳು ತಮ್ಮ ಬ್ರ್ಯಾಂಡ್ ಪ್ರಮೋಷನ್ ಮಾಡುವ ಸಲುವಾಗಿ ಕ್ರಿಕೆಟಿಗರ ಮೊರೆ ಹೋದರು. ಇದರಿಂದ ಇಂದು ಕ್ರಿಕೇಟ್ ಆಟಗಾರರಿಗೆ ಕಂಪೆನಿಗಳಿಂದ ತುಂಬಾ ಬೇಡಿಕೆ ಇದೆ. ಭಾರತೀಯ ಕ್ರಿಕೆಟಿಗರು ನಮ್ಮ ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ತಮ್ಮ ಕ್ರೀಡೆಗಾಗಿ ಪ್ರಸಿದ್ಧರಾಗಿದ್ದಾರೆ. ಅನೇಕ ಭಾರತೀಯ ಕ್ರಿಕೆಟಿಗರು ಪ್ರಪಂಚದಾದ್ಯಂತದ ವಿವಿಧ ಅಭಿಮಾನಿಗಳ ನೆಚ್ಚಿನ ಆಟಗಾರರಾಗಿದ್ದಾರೆ.

ಆದರೆ ಭಾರತೀಯ ಕೆಲವು ಆಟಗಾರರು ಮಾತ್ರ ತಮ್ಮ ಉತ್ತಮ ಆಟದ ಮೂಲಕ ಇಡೀ ಪ್ರಪಂಚದಾದ್ಯಂತ ಹೆಸರು ಗಳಿಸಿ ಅವರು ಇಂದು ಕೋಟ್ಯಾಂತರ ಹಣವನ್ನು ಸಂಪಾದಿಸುತ್ತಿದ್ದಾರೆ. ಇಂದಿನ ಕ್ರಿಕೆಟಿಗರ ಬಳಿ ಉತ್ತಮ ಬಂಗಲೆ, ಕಾರು ಹೊಂದಿರುವದು ಸಾಮಾನ್ಯವಾಗಿದೆ. ಆದರೆ ಕ್ರಿಕೆಟಿಗರ ಬಳಿ ತಮ್ಮದೆ ಆದ jet ವಿಮಾನ ಹೊಂದಿರುವದು ತುಂಬಾ ವಿಶೇಷವಾದ ಸಂಗತಿಯಾಗಿದೆ. ನಮ್ಮ ಭಾರತೀಯ ಕ್ರಿಕೆಟ್ ಆಟಗಾರರಲ್ಲಿ ಕೇವಲ ನಾಲ್ಕು ಆಟಗಾರರು ಮಾತ್ರ ತಮ್ಮದೇ ಆದ jet ಅನ್ನು ಹೊಂದಿದ್ದಾರೆ. ಆ ನಾಲ್ಕು ಆಟಗಾರರು ಯಾರೆಂದು ತಿಳಿದುಕೊಳ್ಳೋಣ ಬನ್ನಿ.

1 ವಿರಾಟ್ ಕೋಹ್ಲಿ:- ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದ ಆರಂಭದಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಅಲ್ಲದೆ ಅವರ ಅದ್ಭುತ ಆಟ ಅಥವಾ ಅವರ ಲಿಂಕ್‌ಅಪ್ ಸುದ್ದಿ ಇರಲಿ; ವಿರಾಟ್ ಕೊಹ್ಲಿ ಯಾವಾಗಲೂ ವಿವಿಧ ಕಾರಣಗಳಿಗಾಗಿ ಚರ್ಚೆಯಲ್ಲಿ ಇರುತ್ತಾರೆ. ಅನುಷ್ಕಾ ಅವರನ್ನು ಮದುವೆಯಾದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿ ಮತ್ತಷ್ಟು ಜನಪ್ರಿಯರಾದರು.

ಕೆಲ ದಿನಗಳ ಹಿಂದೆ ಭಾರತ ತಂಡ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದಾಗ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಖಾಸಗಿ ಜೆಟ್ ಜೊತೆಗಿನ ಫೋಟೋದಲ್ಲಿ ಕಾಣಿಸಿಕೊಂಡಿದ್ದರು. ಈ ಫೋಟೋ ಎಲ್ಲೆಡೆ ವೈರಲ್ ಆಗಿತ್ತು. ಇವರಿಬ್ಬರು ಸವರೆನ್ ಜೆಟ್‌ನಲ್ಲಿ ಪ್ರಯಾಣಿಸುತ್ತಿದ್ದರು. ಅವರ ಖಾಸಗಿ ಜೆಟ್ ನ ಮೌಲ್ಯ 125 ಕೋಟಿ ರೂ ಇದೆ.

2 ಎಂಎಸ್ ಧೋನಿ: – ಕೆಲವು ವರ್ಷಗಳ ಹಿಂದೆ, ಭಾರತದ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ತಮ್ಮ ಕ್ರಿಕೆಟ್‌ ವೃತ್ತಿಯಿಂದ ನಿವೃತ್ತರಾದರು. ಆದರೆ ಇಂದಿಗೂ ಅವರ ಜನಪ್ರಿಯತೆಯಲ್ಲಿ ಯಾವುದೇ ಪ್ರಕಾರದ ಬದಲಾವಣೆ ಕಂಡು ಬಂದಿಲ್ಲ. ಅವರನ್ನು ಇಂದಿಗೂ ಸಹ ಒಬ್ಬ ದೊಡ್ಡ ಆಟಗಾರ ಎಂದು ಗುರುತಿಸಲಾಗುತ್ತದೆ. ಅಲ್ಲದೆ ಅವರು ಇಂದಿಗೂ ಸಹ ದೊಡ್ಡ ಪ್ರಮಾಣದಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಅದಕ್ಕಾಗಿಯೇ ಅವರನ್ನು ಇಂದಿಗೂ ಸಹ ಅನೇಕ ಅಂತರರಾಷ್ಟ್ರೀಯ ಬ್ರಾಂಡ್‌ಗಳ ಜಾಹೀರಾತುಗಳಲ್ಲಿ ನೋಡುತ್ತೇವೆ. ಧೋನಿಗೆ ದುಬಾರಿ ಕಾರು ಮತ್ತು ಬೈಕ್‌ಗಳೆಂದರೆ ತುಂಬಾ ಇಷ್ಟ ಎಂಬುದು ನಮಗೆಲ್ಲ ಗೊತ್ತೇ ಇದೆ. ಹಾಗಾಗಿ ಅಂತಹ ದುಬಾರಿ ಬೈಕ್ ಗಳು ಅವರ ಬಳಿ ಇವೆ. ಆದರೆ ಧೋನಿ ಕೂಡ ತಮ್ಮದೇ ಆದ ಖಾಸಗಿ jet ಹೊಂದಿದ್ದು, ಅದರ ಬೆಲೆ 260 ಕೋಟಿ ರೂ. ಇದೆ. ಕೆಲ ದಿನಗಳ ಹಿಂದೆ ಸ್ವತಃ ಧೋನಿ ತಮ್ಮ ಜೆಟ್ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಮತ್ತು ಆ ಫೋಟೋ ಎಲ್ಲೆಡೆ ವೈರಲ್ ಆಗಿತ್ತು.

3 ಸಚಿನ್ ತೆಂಡೂಲ್ಕರ್: – 2011 ರಲ್ಲಿ ವಿಶ್ವಕಪ್ ಗೆದ್ದ ನಂತರ, ಸಚಿನ್ ನಿವೃತ್ತಿ ಘೋಷಿಸಿದರು. ಆದರೆ ಒಂದಲ್ಲ ಒಂದು ಕಾರಣಕ್ಕೆ ಸಚಿನ್ ಇನ್ನೂ ಜನಮನದಲ್ಲಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರಿಗೆ ಈಗಲೂ ದೊಡ್ಡ ಅಭಿಮಾನಿ ಬಳಗವಿದೆ. ಅವರು ಅನೇಕ ಬ್ರಾಂಡ್‌ಗಳನ್ನು ಪ್ರಚಾರ ಮಾಡಿದ್ದಾರೆ. ಸಚಿನ್ ಖಾಸಗಿ ಜೆಟ್ ಕೂಡ ಹೊಂದಿದ್ದಾರೆ. ಇದರ ಮೌಲ್ಯ ಧೋನಿಯಷ್ಟೇ ಅಂದರೆ 260 ಕೋಟಿ ರೂ. ಇದೆ.

4 ಕಪಿಲ್ ದೇವ್: – ಕ್ರಿಕೆಟ್‌ನಲ್ಲಿ ನಮ್ಮ ದೇಶಕ್ಕೆ ಮೊದಲ ವಿಶ್ವಕಪ್ ನೀಡಿದ ಕಪಿಲ್ ದೇವ್ ಎಲ್ಲರಿಗೂ ತಿಳಿದಿದೆ. ಕಪಿಲ್ ದೇವ್ ಅನೇಕ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳಿಗೂ ಜಾಹೀರಾತು ನೀಡಿದ್ದಾರೆ. ಹಾಗಾಗಿ ಅವರ ಬಳಿಯೂ ಸಾಕಷ್ಟು ಸಂಪತ್ತು ಇದೆ. ಅವರು ಅನೇಕ ಫ್ಲಾಟ್‌ಗಳು ಮತ್ತು ಬಂಗಲೆಗಳನ್ನು ತೆಗೆದುಕೊಂಡಿದ್ದಾರೆ. ಅಲ್ಲದೆ ಅವರು ಸಹ ತಮ್ಮದೇ ಆದ ಖಾಸಗಿ ಜೆಟ್ ಅನ್ನು ಹೊಂದಿದ್ದಾರೆ. ಆ ಖಾಸಗಿ ಜೆಟ್‌ನ ಬೆಲೆ ಇನ್ನೂ ಯಾರಿಗೂ ತಿಳಿದಿಲ್ಲ. ಆದರೆ ಅನೇಕ ಬಾರಿ ಅವರು ತಮ್ಮ ಖಾಸಗಿ ಜೆಟ್‌ಗಳಲ್ಲಿ ಪ್ರಯಾಣಿಸುತ್ತಿರುವುದು ಕಂಡುಬಂದಿದೆ.