ಉಮ್ರಾನ್ ಮಲಿಕ್ ಯಾಕೆ ಕೇಳಿದರು ಹಾರ್ದಿಕ್ ಪಾಂಡ್ಯ ಪತ್ನಿಗೆ ಕ್ಷಮೆ? ವೇಗದ ಬೌಲಿಂಗ್ ಕಾರಣದಿಂದಾಗಿ ನಡೆದಿತ್ತು ಘಟನೆ.
ಗುಜರಾತ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಮಧ್ಯದ ಪಂದ್ಯದಲ್ಲಿ ಒಬ್ಬನೇ ಬಾಲರ್ ತುಂಬಾ ಸುದ್ದಿಯಲ್ಲಿದ್ದದ್ದು, ಅವರೇ ಉಮ್ರಾನ್ ಮಲಿಕ್. ಈ ಪಂದ್ಯದಲ್ಲಿ ಉಮ್ರಾನ್ ಮಲಿಕ್ 5 ವಿಕೆಟ್ ಗಳನ್ನು ಪಡೆದಿದ್ದರು. ತಂಡ ಸೋತರೂ ತಂಡದ ಸದಸ್ಯರಾದ ಉಮ್ರಾನ್ ಮಲಿಕ್ ಅವರಿಗೆ ಪಂದ್ಯ ಪುರುಷೋತ್ತಮ ಪುರಸ್ಕಾರ ನೀಡಿ ಗೌರವಿಸಲಾಯಿತು, ತುಂಬಾ ಕಡಿಮೆ ಸಂದರ್ಭದಲ್ಲಿ ಈ ರೀತಿಯ ಘಟನೆ ನೋಡಲು ಸಿಗುತ್ತದೆ. ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ತಮ್ಮ ತಂಡದ ಕಡೆಯಿಂದ ಎಲ್ಲಕ್ಕೂ ಹೆಚ್ಚು ರನ್ನುಗಳನ್ನು ಗಳಿಸಿದ್ದರು. ಹಾರ್ದಿಕ್ ಪಾಂಡ್ಯ ಅವರ ತಂಡ ಈ ಐಪಿಎಲ್ ಸೀಸನ್ ನಲ್ಲಿ ಇಲ್ಲಿಯವರೆಗೆ ಒಟ್ಟು ಏಳು ಪಂದ್ಯವನ್ನು ಗೆದ್ದು ಪ್ಲೇ ಆಫ್ ನಲ್ಲಿ ಹೆಚ್ಚುಕಡಿಮೆ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದ್ದಾರೆ. ಉಮ್ರಾನ್ ಮಲಿಕ್ ಒಂದು ಕಡೆಯಿಂದ ಬೆಂಕಿಯಂತಹ ಬಾಲ್ ಎಸೆಯುತ್ತಿದ್ದರೆ, ಇನ್ನೊಂದು ಕಡೆ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಮೈದಾನದಲ್ಲಿ ನಡೆದ ಒಂದು ಘಟನೆ ಹಾರ್ದಿಕ್ ಪಾಂಡ್ಯ ಅವರ ಪತ್ನಿಗೆ ನಡುಗಿಸಿ ಬಿಟ್ಟಿತು.
ಉಮ್ರಾನ್ ಮಲಿಕ್ ಅವರು ಈ ಪಂದ್ಯದಲ್ಲಿ 25 ರನ್ ಗಳನ್ನು ನೀಡಿ ಐದು ವಿಕೆಟ್ ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಇದೇ ಸಂದರ್ಭದಲ್ಲಿ 8ನೇ ಓವರ್ನಲ್ಲಿ ಮಲಿಕ್ ಅವರು ತಮ್ಮ ವೇಗದ ಬೌಲಿಂಗ್ ನಿಂದಾಗಿ ಹಾರ್ದಿಕ್ ಪಾಂಡ್ಯ ಅವರಿಗೆ ಗಾಯಗೊಳಿಸಿದರು. ಬಾಲ್ ಅತಿವೇಗದಲ್ಲಿ ಹಾರ್ದಿಕ್ ಪಾಂಡ್ಯ ಅವರ ಭುಜಕ್ಕೆ ತಗುಲಿತು. ಹೀಗಾಗಿ ಹಾರ್ದಿಕ ಸ್ವಲ್ಪ ಸಮಯ ಕ್ರೀಜ್ ನಿಂದ ಬದಿಗೆ ಸರಿದರು. ಈ ದೃಶ್ಯವನ್ನು ನೋಡಿದ ಹಾರ್ದಿಕ್ ಪಾಂಡ್ಯ ಪತ್ನಿ ನತಾಶ ಒಮ್ಮೆಲೆ ಭಯ ಪಟ್ಟಿದ್ದರು.
ಉಮ್ರಾನ್ ಕೇಳಿದರು ಕ್ಷಮೆ
ಮ್ಯಾಚ್ ಮುಗಿದನಂತರ ಹಾರ್ದಿಕ್ ಪಾಂಡ್ಯ, ರಾಶಿ ಖಾನ್ ಮತ್ತು ಉಮ್ರಾನ್ ಮಲ್ಲಿಕ್ ಮೂವರು ಕೂಡಿಕೊಂಡು ಮಾತನಾಡುತ್ತಿದ್ದರು. ಇದೇ ಸಮಯದಲ್ಲಿ ಮಲಿಕ್ ಅವರು ಹಾರ್ದಿಕ್ ಪಾಂಡ್ಯ ಅವರ ಪತ್ನಿ ನತಾಶ ಅವರನ್ನು ಸ್ಟ್ಯಾಂಡ್ ನಲ್ಲಿ ನೋಡಿದ ನಂತರ ಎರಡು ಕೈಗಳನ್ನು ಜೋಡಿಸಿ ಕ್ಷಮೆಯಾಚಿಸಿದರು.
ಉಮ್ರಾನ್ ಮಲಿಕ್ ಅವರು ಈ ಪಂದ್ಯದಲ್ಲಿ ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ, ವೃದ್ಧಿಮಾನ್ ಸಾಹಾ, ಡೇವಿಡ್ ಮಿಲ್ಲರ್ ಮತ್ತು ಅಭಿನವ್ ಮನೋಹರ್ ಈ 5 ಬ್ಯಾಟ್ಸ್ ಮನ್ ಗಳಿಗೆ ಪೆವಿಲಿಯನ್ಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದರು. ಇವರಲ್ಲಿ ಹಾರ್ದಿಕ್ ಪಾಂಡ್ಯ ಒಬ್ಬರೇ ಕ್ಯಾಚ್ ಔಟ್ ಆದರೆ ಉಳಿದ ನಾಲ್ವರು ಕ್ಲೀನ್ ಬೋಲ್ಡ್ ಆಗಿದ್ದರು.