ಊಟದ ನಂತರ ವೃದ್ಧ ವ್ಯಕ್ತಿಯೊಬ್ಬ ಮಾಡಿದ ಕೆಲಸ ನೋಡಿ ನೆಟ್ಟಿಗರೆಂದರು ಇದು “ನ್ಯೂ ಟಿಶ್ಯೂ ಪೇಪರ್” ಇದು ಸರಿಯೇ..?

ಸೋಶಿಯಲ್ ಮೀಡಿಯಾದಲ್ಲಿ ಅನೇಕ ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗುವಾಗ ಎಷ್ಟೋ ಸಲ ಇನ್ನೊಬ್ಬರ ಮೇಲೆ ಜನರು ಹಾಸ್ಯ ಚಟಾಕಿಗಳನ್ನು ಹಾರಿಸಿ ಹೊಟ್ಟೆತುಂಬಾ ನಗುತ್ತಾರೆ. ಕೆಲವೊಂದು ಸಲ ಹಾಸ್ಯಕ್ಕೆ ಗುರಿಯಾದ ವ್ಯಕ್ತಿಗಳು ತಿಳಿಯದೆ ತಪ್ಪುಗಳನ್ನು ಮಾಡಿದಾಗ ಕೆಲವು ನೇಟಿಜನ್ಸ್ ಗಳು ಇದ್ಯಾವುದರ ವಿಚಾರವನ್ನು ಮಾಡದೇ ಅವರನ್ನು ಅಪಹಾಸ್ಯಕ್ಕೆ ಗುರಿ ಮಾಡುತ್ತಾರೆ.

ಸದ್ಯ ಇದೇ ರೀತಿಯ ವೃದ್ಧ ವ್ಯಕ್ತಿಯೊಬ್ಬರಿಗೆ ಅಪಹಾಸ್ಯಕ್ಕೆ ಗುರಿ ಮಾಡಿದ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ನೇಟಿಜನ್ಸ್ ಗಳಲ್ಲಿ ಕೆಲವರು ನಗುತ್ತಿದ್ದರೆ ಇನ್ನೂ ಕೆಲವರು ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ.

ಪ್ರಸ್ತುತ ವಿಡಿಯೋದಲ್ಲಿ ವೃದ್ಧ ವ್ಯಕ್ತಿಯೊಬ್ಬ ಊಟ ಮಾಡುತ್ತಿವದು ಕಂಡು ಬರುತ್ತಿದೆ. ಊಟ ಮಾಡಿದ ನಂತರ ಆ ವ್ಯಕ್ತಿಯು ಮಾಡಿದ ಕೆಲಸ ನೋಡಿ ನೇಟಿಜನ್ಸ್ ಗಳು ತುಂಬಾ ನಗುತ್ತಿದ್ದರೆ ಕೆಲವರು ನಗುವವರ ಮೇಲೆ ಬೇಸರ ವ್ಯಕ್ತ ಮಾಡಿದ್ದಾರೆ.

‘sensen4947’ ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಪ್ರಸ್ತುತ ವಿಡಿಯೋವನ್ನು ಶೇರ್ ಮಾಡಲಾಗಿದೆ. ವಿಡಿಯೋದಲ್ಲಿ ಕಂಡುಬರುವ ಹಾಗೆ ವ್ಯಕ್ತಿಯು ಊಟ ಮಾಡುತ್ತಿದ್ದಾನೆ. ನಂತರ ಆತ ನೀರು ಕುಡಿದು ಬಾಯಿಯನ್ನು ಒರೆಸಿಕೊಳ್ಳಲು ಟಿಶ್ಯೂ ಪೇಪರ್ ಬದಲಾಗಿ ಟೇಬಲ್ ಮೇಲೆ ಇಟ್ಟಿರುವ ಚಪಾತಿಯನ್ನೇ ತೆಗೆದುಕೊಂಡು ತನ್ನ ಬಾಯಿಯನ್ನು ಒರೆಸಿಕೊಳ್ಳುತ್ತಾನೆ. ಈ ವೀಡಿಯೋ ನೋಡಿದ ನೇಟಿಜನ್ಸ್ ಗಳು ಅನೇಕ ರೀತಿಯ ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ಒಬ್ಬ ನೆಟ್ಟಿಗ ‘ನ್ಯೂ ಟಿಶ್ಯು ಪೇಪರ್’ ಎಂದು ಪ್ರತಿಕ್ರಿಯಿಸಿದರೆ, ಇನ್ನೊಬ್ಬ ‘ಗುರು, ಇದೇ ತುಂಬಾ ಸರಿಯಾಗಿದೆ’, ಎಂದಿದ್ದಾನೆ.

ವಿಡಿಯೋ ನೋಡಿ

 

View this post on Instagram

 

A post shared by Sen Sen (@sensen4947)

ಈ ವಿಡಿಯೋವನ್ನು ಸಾಕಷ್ಟು ಜನರು ತಮಾಷೆ ಭಾವನೆಯಿಂದ ನೋಡುತ್ತಿದ್ದಾರೆ. ಇಲ್ಲಿಯವರೆಗೆ ಈ ವಿಡಿಯೋವನ್ನು ಸಾವಿರಾರು ಜನರು ವೀಕ್ಷಿಸಿದ್ದಾರೆ. ಜೊತೆಗೆ ವಿವಿಧ ರೀತಿಯ ಕಮೆಂಟ್ಗಳನ್ನು ಮಾಡುತ್ತಿದ್ದಾರೆ.

ಮನುಷ್ಯ ಮೊದಲೇ ಎಲ್ಲವೂ ಕಲಿತು ಬರುವುದಿಲ್ಲ. ಆತ ಇನ್ನೊಬ್ಬರನ್ನು ನೋಡಿ ಅನುಕರಣೆ ಮಾಡಿ ಕಲಿಯುತ್ತಿರುತ್ತಾನೆ. ಹಳ್ಳಿಗರಿಗೆ, ಅದರಲ್ಲೂ ವೃದ್ಧರಿಗೆ ಹೋಟೆಲ್ನಲ್ಲಿಯ ಕೆಲವೊಂದು ರೀತಿ ನೀತಿ ಮತ್ತು ನಡವಳಿಕೆಗಳು ಗೊತ್ತಿರದ ಕಾರಣ ಈ ರೀತಿಯ ಹಾಸ್ಯ ಪ್ರಸಂಗಗಳು ನಡೆಯುತ್ತವೆ. ಆದರೆ ಅದನ್ನೇ ನಾವು ಇನ್ನೊಬ್ಬರನ್ನು ಹಾಸ್ಯಕ್ಕೆ ಗುರಿಮಾಡಿ ಅಪಹಾಸ್ಯ ಮಾಡುವುದು ಸರಿಯಲ್ಲ, ಅಲ್ಲವೇ?