ಋಷಿ ಕಪೂರ್ ಸಾವಿನ ನಂತರ ಫೋಟೋ ಒಂದು ಶೇರ್ ಮಾಡಿ ನೀತು ಕಪೂರ್ ಹೇಳಿದ ಮಾತು “ಇಲ್ಲಿಗೆ ನಮ್ಮ ಕಥೆಯ ಮುಕ್ತಾಯ!”

ಬಾಲಿವುಡ್ ನ ದಿಗ್ಗಜ ನಟ ರಿಷಿ ಕಪೂರ್ ತಮ್ಮ 67 ನೆ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದರು. ಸುಮಾರು ಎರಡು ವರ್ಷಗಳ ವರೆಗೆ ಲ್ಯೂಕೆಮಿಯಾ( ರಕ್ತ ಕ್ಯಾನ್ಸರ್) ನಿಂದ ಬಳಲುತ್ತಿದ್ದ ರಿಷಿ ಕಪೂರ ಅವರನ್ನು ತಮ್ಮ ಆರೋಗ್ಯದಲ್ಲಿ ಏರು ಪೇರಾಗಿದ್ದರಿಂದ ಅವರನ್ನು ಎಚ್ ಎನ್ ರಿಲಯನ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು, ಮರುದಿನ ಮುಂಜಾನೆ ಸಮಯದಲ್ಲಿ ರಿಷಿ ಕಪೂರ್ ಅವರು ಕೊನೆಯುಸಿರು ತಗೆದುಕೊಂಡರು. ರಿಷಿ ಕಪೂರ್ ಅವರ ನಿಧನ 30 ಏಪ್ರಿಲ್ ರಂದು ಆಯಿತು. ಆಕಸ್ಮಿಕವಾಗಿ ರಿಷಿ ಕಪೂರ್ ಅವರ ನಿಧನ ಕುಟುಂಬಕ್ಕೆ ಹಾಗೂ ಬಾಲಿವುಡ್ ನಲ್ಲಿ ದುಃಖದ ವಾತವರಣ ನಿರ್ಮಾಣ ಮಾಡಿತು. ಅಮಿತಾಬ್ ಬಚ್ಚನ, ಶಾರುಖ್ ಖಾನ್ ಮತ್ತು ಸಲ್ಮಾನ್ಖಾನ್ ಹಾಗೆ ಅನೇಕ ಬಾಲಿವುಡ್ ದಿಗ್ಗಜರು ತಮ್ಮ ದುಃಖವನ್ನು ವ್ಯಕ್ತ ಪಡಿಸಿದ್ದಾರೆ. ಈಗ ರಿಷಿ ಕಪೂರ್ ಅವರ ನಿಧನದಿಂದ ಪತ್ನಿ ನೀತು ಕಪೂರ್ ರೀಆಕ್ಷನ್ ಬಂದಿದೆ.

ನೀತು ಕಪೂರ್ ರಿಷಿಕಪೂರ್ ನಿಧನದ ನಂತರ ಮೊದಲನೆಯ ಸಲ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಒಂದು ಫೋಟೋ ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ನೀತು ಕಪೂರ್ ಅವರು ನಗುತ್ತಿದ್ದಾರೆ. ನೀತು ಕಪೂರ್ ಅವರು ತಮ್ಮ ಫೋಟೋ ಶೇರ್ ಮಾಡುತ್ತಾ , “ಹಮಾರಿ ಕಹಾನಿ ಅಂತ”( ನಮ್ಮ ಕಥೆ ಮುಕ್ತಾಯ) ಅಂತ ಕ್ಯಾಪ್ಶನ್ ಬರೆದು ಶೇರ್ ಮಾಡಿದ್ದಾರೆ. ಆದರೆ ಅದನ್ನು ಕಂಡ ಜನರು ಅವರನ್ನು ಸಾಂತ್ವನ ಹೇಳಲು ಪ್ರಯತ್ನಿಸುತ್ತಿದ್ದಾರೆ.

blockquote class=”instagram-media” data-instgrm-captioned data-instgrm-permalink=”https://www.instagram.com/p/B_rNm83AwrX/?utm_source=ig_embed&utm_campaign=loading” data-instgrm-version=”12″ style=” background:#FFF; border:0; border-radius:3px; box-shadow:0 0 1px 0 rgba(0,0,0,0.5),0 1px 10px 0 rgba(0,0,0,0.15); margin: 1px; max-width:540px; min-width:326px; padding:0; width:99.375%; width:-webkit-calc(100% – 2px); width:calc(100% – 2px);”> View this post on Instagram

End of our story ❤️❤️

A post shared by neetu Kapoor. Fightingfyt (@neetu54) on May 1, 2020 at 11:20pm PDT

ರಿಷಿ ಕಪೂರ್ ಅವರು ತಮ್ಮ ಪತ್ನಿಯಾದ ನೀತು ಕಪೂರ್ ಅವರೊಂದಿಗೆ ‘ದೋ ದುನಿ ಚಾರ್’ ಈ ಚಿತ್ರದಲ್ಲಿ ನಟಿಸಿದ್ದರು. ಅದನ್ನು ನೆನೆಪಿಸುತ್ತ ನೀತು ಕಪೂರ್ ತಮ್ಮ ಅಗಲಿಕೆಯ ಕುರಿತು ಈ ಪ್ರಕಾರದ ಒಂದು ಪೋಸ್ಟ್ ಶೇರ್ ಮಾಡಿ ಜನರಿಗೆ ತಮ್ಮ ದುಃಖದ ಕುರಿತು ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. ರಿಷಿ ಕಪೂರ್ ಅವರು ಬಾಲಿವುಡ್ ಜಗತ್ತಿನಲ್ಲಿ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.