ಎಕೆ 47 ರೈಫಲ್ ನುಂಗಿದ ಹೆಬ್ಬಾವು: ವೈರಲ್ ಆದ ಈ ಫೋಟೋ ಹಿಂದಿನ ರೋಚಕ ಸತ್ಯ ತಿಳಿದ್ರೆ ಶಾ ಕ್ ಆಗೋದು ಖಂಡಿತ

ಒಂದು ಭಾರೀ ಗಾತ್ರದ ಹೆಬ್ಬಾವು ಮನುಷ್ಯನನ್ನು ಅಥವಾ ಇನ್ನಾವುದೋ ಪ್ರಾಣಿಯನ್ನು ನುಂಗಿರುವ ವಿಷಯವನ್ನು ನೀವು ಬಜಳಷ್ಟು ಸಲ ಸುದ್ದಿಗಳಲ್ಲಿ ಓದಿರಬಹುದು ಹಾಗೂ ಚಿತ್ರಗಳಲ್ಲಿ ನೋಡಿರಬಹುದು ಅಥವಾ ವಿಡಿಯೋಗಳಲ್ಲಿ ಕಂಡಿರಬಹುದು. ಅದನ್ನು ನೋಡಿದಾಗ ಅಚ್ಚರಿ ಅಥವಾ ಭ ಯ ಕೂಡಾ ಪಟ್ಟಿರಬಹುದು, ಕೆಲವೊಮ್ಮೆ ಆ ಫೋಟೋಗಳು ದಿಗ್ಬ್ರಮೆ ಕೂಡಾ ಉಂಟು ಮಾಡಿರಬಹುದು. ಆದರೆ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾ ಗಳಲ್ಲಿ ಒಂದು ಹೆಬ್ಬಾವಿನ ಫೋಟೋ ಭರ್ಜರಿಯಾಗಿ ವೈರಲ್ ಆಗುತ್ತಾ ಸಾಗಿದ್ದು, ಇದರಲ್ಲಿ ಒಂದು ಹೆಬ್ಬಾವು ಎಕೆ 47 ಲೈಫಲನ್ನು ನುಂಗಿದೆ ಎಂದು ಹೇಳಲಾಗುತ್ತಿದೆ. ವೈರಲ್ಲಾಗಿರುವ ಈ ಹೆಬ್ಬಾವಿನ ಫೋಟೋದಲ್ಲಿ ಗಮನಿಸಿದಾಗ ನೆಲದ ಮೇಲೆ ಹೆಬ್ಬಾವಿನ ಹಾಗೆ ಕಾಣುವ, ಹಾವಿನಂತೆ ಮಲಗಿರುವ ಒಂದು ವಸ್ತು ಕಾಣುತ್ತಿದೆ. ವಿಚಿತ್ರ ಎಂದರೆ ಹಾವಿನಂತೆ ಕಾಣುವ ಆ ವಸ್ತುವಿನ ಮಧ್ಯ ಭಾಗವು ಒಂದು ರೈಫಲ್ ನ ಹಾಗೆ ಗೋಚರಿಸುತ್ತಿದೆ.

ಈ ಫೋಟೋವನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡಿರುವ ಫೇಸ್ ಬುಕ್ ಬಳಕೆದಾರರೊಬ್ಬರು, ಶೀರ್ಷಿಕೆಯಲ್ಲಿ ರಷ್ಯಾದಲ್ಲಿ ಒಂದು ಹಾವು ಏಕೆ 47 ರೈಫಲ್ ಅನ್ನು ನುಂಗಿದ್ದು ಇದೊಂದು ಬಹಳ ಧೈರ್ಯಶಾಲಿ ಹಾವು ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ವೈರಲ್ ಆದ ಮೇಲೆ ಇಂಡಿಯಾ ಟು ಡೇ ದ ಆಂಟಿ ಫೇಕ್ ನ್ಯೂಸ್ ರೂಮ್ ಈ ಫೋಟೋದ ಅಸಲಿಯತ್ತು ಏನು ಎನ್ನುವುದನ್ನು ಪತ್ತೆ ಹಚ್ಚಿದ್ದು, ವೈರಲ್ ಆಗಿರುವ ಫೋಟೋದಲ್ಲಿರುವುದು ಅಸಲಿ ಹಾವಲ್ಲ, ಬದಲಿಗೆ ರಷ್ಯನ್ ಕಲಾವಿದ ವಸಿಲಿ ಸ್ಲೋನೋವ್ ಅವರ ರಬ್ಬರ್ ನಿಂದ ತಯಾರಿಸಿದ ಒಂದು ಕಲಾಕೃತಿ ಎಂದು ತಿಳಿದುಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ಫೋಟೋವನ್ನು ನೋಡಿದ ಅನೇಕ ಮಂದಿ ನೆಟ್ಟಿಗರು ಇದು ನಿಜವಾಗಿಯೂ ಹಾವು ಎಂದು ಭಾವಿಸಿ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಇನ್ನೂ ಕೆಲವರು ಇದು ನಿಜಕ್ಕೂ ಹಾವೇನಾ? ಹಾಗೇನಾದರೂ ಇದು ಹಾವು ಅಲ್ಲ ಎನ್ನುವುದಾದರೆ ಈ ವಸ್ತು ಏನು? ಎಂದು ಗೊಂದಲಕ್ಕೀಡಾಗಿದ್ದರು.
ಅಸಲಿಯತ್ತನ್ನು ತಿಳಿಯಲು ಹೊರಟಾಗ ಸೋಶಿಯಲ್ ಮೀಡಿಯಾ ಗಳಲ್ಲಿ ಹಾವು ಎಂದು ಬಿಂಬಿತವಾಗುತ್ತಿರುವುದು ರಬ್ಬರ್ ನ ಕಲಾಕೃತಿ ಎಂದು ತಿಳಿದಿದೆ. ವಾಸ್ತವವಾಗಿ ಒಂದು ಕಲಾಕೃತಿಗಳ ಮಾರಾಟದ ವೆಬ್ ಸೈಟ್ ನಲ್ಲಿ ಮಾರಾಟಕ್ಕೆ ಇಟ್ಟ ಕಲಾಕೃತಿಯ ಫೋಟೋ ಇದಾಗಿತ್ತು ಎಂದು ತಿಳಿದುಬಂದಿದೆ. ಫೋಟೋ ದ ರಿವರ್ಸ್ ಸರ್ಚ್ ಮಾಡಿದಾಗ ಈ ಫೋಟೋ ಆರ್ಟ್ ಸೀ ಎನ್ನುವ ವೆಬ್ ಸೈಟ್ ನಲ್ಲಿ ದೊರಕಿದೆ.

ಅಲ್ಲಿ ಈ ಕಲಾಕೃತಿಗೆ AK- Python ಎಂದು ಹೆಸರನ್ನು ಇಡಲಾಗಿದೆ. ಅಲ್ಲದೇ ಅಲ್ಲಿ ಇದೊಂದು ರಬ್ಬರ್ ಕಲಾಕೃತಿಯೆಂದು ಹಾಗೂ ಅದನ್ನು ನಿರ್ಮಾಣ ಮಾಡಿದ ಕಲಾವಿದ ಯಾರು ಎಂಬುದನ್ನು ಕೂಡ ತಿಳಿಸಲಾಗಿದೆ. ಇದೇ ಹಾವಿನ ಫೋಟೋ ಮತ್ತೊಂದು ವೆಬ್ಸೈಟ್ ಆರ್ಟ್ ಪ್ರೈಸ್ ನಲ್ಲಿ ಕೂಡಾ ದೊರೆತಿದೆ.
ಅಲ್ಲಿ ಈ ರಬ್ಬರ್ ಕಲಾಕೃತಿಯು 2019ರಲ್ಲಿ ಸಿದ್ಧವಾಗಿದೆ ಎನ್ನುವ ಮಾಹಿತಿಯನ್ನು ನೀಡಲಾಗಿದೆ. ಕಲಾವಿದ ವಸೀಲಿ ಅವರು 21 ಆಗಸ್ಟ್ 2019 ರಲ್ಲಿ ತಮ್ಮ ಈ ರಬ್ಬರ್ ಕಲಾಕೃತಿಯ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದೇ ದಿನ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಕೂಡಾ ಈ ಫೋಟೋವನ್ನು ಹಂಚಿಕೊಂಡಿದ್ದಾರೆ.

ಫೇಸ್ಬುಕ್ ಬಳಕೆದಾರರೊಬ್ಬರು ಈ ಕಲಾಕೃತಿಯನ್ನು ಯಾವುದರಿಂದ ಮಾಡಿರುವಿರಿ? ಎಂದು ಪ್ರಶ್ನೆ ಕೇಳಿದ್ದು ಅದಕ್ಕೆ ವಸಿಲಿ ಅವರು ರಬ್ಬರ್ ನಿಂದ ತಯಾರಿಸುವ ಕಲಾಕೃತಿ ಇದು ಎನ್ನುವ ಉತ್ತರವನ್ನು ನೀಡಿದ್ದಾರೆ.
ವಸಿಲಿ ಸ್ಲೋನೋವ್ ರಷ್ಯಾದ ಬಹಳ ಜನಪ್ರಿಯ ಕಲಾವಿದರಾಗಿದ್ದಾರೆ. ಅವರು ತಮ್ಮ ಕಲಾಕೃತಿಗಳ ಮೂಲಕ ರಾಜಕೀಯಕ್ಕೆ ಸಂಬಂದಪಟ್ಟ ವಿಷಯಗಳ ಮೇಲೆ ಧ್ವನಿಯನ್ನು ಎತ್ತುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಅವರ ಕಲಾಕೃತಿಗಳು ಮೀಡಿಯಾಗಳಲ್ಲಿ ಚರ್ಚೆಯ ವಿಷಯವಾಗುತ್ತದೆ. ವಸಿಲಿ ಅವರ ರಬ್ಬರ್ ಹಾವಿನ ಕಲಾಕೃತಿಯ ಕುರಿತಾಗಿ ಕೆಲವು ವೆಬ್ಸೈಟ್ ಗಳಲ್ಲಿ ಈಗಾಗಲೇ ಅದರ ಅಸಲಿಯತ್ತು ಏನು ಎನ್ನುವುದನ್ನು ವಿವರಿಸಲಾಗಿದೆ.