ಎತ್ತರದ ಗೋಡೆಯ ಮೇಲೆ ಮೇಕೆಗಳ ಅದ್ಭುತ ಸ್ಟಂಟ್! ಫಿಸಿಕ್ಸ್ ನಿಯಮ ಇಲ್ಲಿ ಮಟಾಶ್ ಎಂದರು ನೆಟ್ಟಿಗರು.

ಮೇಕೆಗಳು ಎಲ್ಲಿ ಬೇಕಾದಲ್ಲಿ ಎತ್ತರದ ಸ್ಥಳದಲ್ಲಿ ಸಹಜವಾಗಿ ಹತ್ತುತ್ತವೆ ಮತ್ತು ತಿರುಗಾಡುತ್ತವೆ. ಅವುಗಳು ಸುತ್ತಾಡುವ ಸ್ಥಳ ನೋಡಿದರೆ ನಿಜಕ್ಕೂ ವಿಚಿತ್ರವೆನಿಸುತ್ತದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದೇ ಮೇಕೆಗಳ ಅತ್ಯದ್ಭುತವಾದ ವಿಡಿಯೋ ಒಂದು ಭರದಿಂದ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ಮೇಕೆಗಳು ನೇರವಾದ ಗೋಡೆಯ ಮೇಲೆ ಕೆಳಗೆ ಬೀಳುವ ಭಯವೇ ಇಲ್ಲದೆ ತುಂಬಾ ವಿಚಿತ್ರವಾಗಿ ಮತ್ತು ಅಷ್ಟೇ ಸಹಜವಾಗಿ ತಿರುಗಾಡುತ್ತಿವೆ. ವಿಡಿಯೋದಲ್ಲಿ ಈ ದೃಶ್ಯ ನೋಡಿದ ನಂತರ ನಮ್ಮ ಕಣ್ಣುಗಳೇ ನಂಬಲಾರವು. ಈ ಸುಂದರವಾದ ದೃಶ್ಯ ಮತ್ತು ಈ ದೃಶ್ಯದಲ್ಲಿ ಕಂಡು ಬರುವ ಗೋಡೆ ಯಾವುದೋ ಒಂದು ಆಣೆಕಟ್ಟಿನದ್ದಾಗಿದೆ. ಈ ಅಣೆಕಟ್ಟಿನ ಎತ್ತರವಾದ ಗೋಡೆಯ ಮೇಲೆ ಅನೇಕ ಮೇಕೆಗಳು ತುಂಬಾ ಸಹಜವಾಗಿ ಸುತ್ತಾಡುತ್ತಿರುವುದು ಕಂಡು ಬರುತ್ತಿದೆ. ಈ ಮೇಕೆಗಳು ಇಷ್ಟೊಂದು ಆರಾಮಾಗಿ ತಿರುಗಾಡುವುದನ್ನು ನೋಡಿದರೆ ಇವು ಗೋಡೆಯ ಮೇಲಲ್ಲ ನೆಲದ ಮೇಲೆ ತಿರುಗಾಡುತ್ತಿವೆ ಎಂಬಂತೆ ಭಾಸವಾಗುತ್ತಿದೆ.

ಮೇಕೆಗಳ ಈ ವಿಡಿಯೋ ನೋಡಿ…

ಈ ಮೇಕೆಗಳನ್ನು ನೋಡಿದ ನಂತರ ಅದ್ಯಾವ ಜಾತಿಯ ಮೇಕೆಗಳು ಇರಬಹುದು ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟಿದ್ದರೆ ಅದಕ್ಕೆ ಉತ್ತರವನ್ನು ಹೇಳುತ್ತೇವೆ ನೋಡಿ. ಈ ಮೇಕೆಗಳಿಗೆ ಮೌಂಟನ್ ಗೊಟ್ಸ್ ಎಂದು ಕರೆಯುತ್ತಾರೆ. ಈ ಮೇಕೆಗಳ ವಿಶೇಷತೆ ಏನೆಂದರೆ ನೇರವಾದ ಗೋಡೆ ಇರಲಿ ಅಥವಾ ಗುಡ್ಡವೇ ಇರಲಿ ಅವುಗಳ ಮೇಲೆ ಮೇಯುತ್ತಾ ತಿರುಗಾಡುವುದಾಗಿದೆ.

ವಿಡಿಯೋ ನೋಡಿ

ಪ್ರಸ್ತುತ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಆದ ಟ್ವಿಟರ್ ನಲ್ಲಿ @TheFigen ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಕೇವಲ 44 ಸೆಕೆಂಡುಗಳ ಈ ವಿಡಿಯೋವನ್ನು ಇಲ್ಲಿಯವರೆಗೆ 1.9 ಮಿಲಿಯನ್ ಜನರು ನೋಡಿದ್ದಾರೆ. ಮತ್ತು ಸಾವಿರಾರು ನೆಟ್ಟಿಗರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ವಿಡಿಯೋ ನೋಡಿದ ನೇಟಿಜನ್ಸ್ ಗಳು ಕಮೆಂಟ್ ಬಾಕ್ಸಿನಲ್ಲಿ ಅನೇಕ ರೀತಿಯ ಕಮೆಂಟ್ಗಳನ್ನು ಮಾಡಿದ್ದಾರೆ. ಕೆಲವರಂತೂ ಫಿಸಿಕ್ಸ್ ನಿಯಮ ಈ ಮೇಕೆಗಳಿಗೆ ವರ್ಕೌಟ್ ಆಗುವುದಿಲ್ಲ ಎಂದು ತಮಾಷೆ ಮಾಡಿದ್ದಾರೆ. ಒಬ್ಬನಂತೂ ಈ ಮೇಕೆಗಳು ನೇರವಾದ ಗೋಡೆಯ ಮೇಲೆ ಹೋಗಿ ಅದೇನು ಮಾಡುತ್ತವೆ ಎಂದು ಕೇಳಿದ್ದಾನೆ.