ಎತ್ತರವಾಗಿರುವ ಜಿರಾಫೆ ಮರಗಳ ಎಲೆಗಳನ್ನು ತಿನ್ನುವುದನ್ನು ನೀವು ನೋಡಿರಬಹುದು, ಆದರೆ ನೆಲದ ಮೇಲಿನ ಹುಲ್ಲು ತಿನ್ನುವುದನ್ನು ನೋಡಿದ್ದೀರಾ? ನೋಡಿ ಈ Viral Video

ಪ್ರಾಣಿಗಳ ಹೆಸರು ಹೇಳಿ ಎಂದ್ರೆ ಮಕ್ಕಳು ಅವುಗಳ ಲಿಸ್ಟ್ ಹೇಳ್ತಾರೆ‌, ಶಾಲೆಯಲ್ಲಿ ಕಲಿಸಿರೋ ಜ್ಞಾನದ ಆಧಾರದಲ್ಲಿ ಇದು ಸಾಧ್ಯ ಆಗಿದೆ. ಆದ್ರೆ ಇಂದಿನ ಅದೆಷ್ಟೋ ಮಕ್ಕಳಿಗೆ ವನ್ಯ ಜೀವಿಗಳ ಬಗ್ಗೆ ಅಷ್ಟಾಗಿ ಪರಿಚಯ ಇಲ್ಲ‌. ಕಾರಣ ಅವುಗಳ ಸಂಖ್ಯೆ ಕಡಿಮೆ ಆಗ್ತಾ ಇರೋದು. ಆದ್ರೆ ಒಂದು ಅವಕಾಶ ಏನಂದ್ರೆ ಸೋಶಿಯಲ್ ಮೀಡಿಯಾಗಳು ಇರೋದ್ರಿಂದ ಈ ವೈವಿದ್ಯಮಯ ಜೀವಿಗಳ ಬಗ್ಗೆ ಅನೇಕರು ಹಂಚಿಕೊಳ್ಳುವ ವೀಡಿಯೋಗಳನ್ನು ನೋಡೋ ಮೂಲಕ ಅವುಗಳ ಬಗ್ಗೆ ಹೆಚ್ಚು ತಿಳಿಯೋಕೆ ಆಗ್ತಾ ಇದೆ. ಇಂತಹ ವೀಡಿಯೋಗಳಲ್ಲಿ ಅನೇಕ ಸಲ ಪ್ರಾಣಿಗಳ ವಿಚಿತ್ರ ಎನಿಸುವಂತಹ ಅಥವಾ ಆಕರ್ಷಕ ಎನಿಸುವಂತಹ ವೀಡಿಯೋಗಳು ಬಂದಾಗ ಅವು ಕೆಲವೇ ದಿನಗಳಲ್ಲಿ ಲಕ್ಷಾಂತರ ಜನರಿಂದ ವೀಕ್ಷಣೆ ಮಾಡಲ್ಪಡೋಡು ಮಾತ್ರ ಅಲ್ಲ, ಅಪಾರ ಜನ ಮೆಚ್ಚುಗೆ ಕೂಡಾ ಅವಕ್ಕೆ ದಕ್ಕೋದು ಕೂಡಾ ಸಾಮಾನ್ಯ ಆಗಿದೆ.

ಹೀಗೆ ಜೀವ ಜಗತ್ತಿನಲ್ಲಿರುವ ವೈವಿದ್ಯಮಯ ಜೀವಿಗಳಲ್ಲಿ ಒಂದು ಜಿರಾಫೆ‌, ತನ್ನ ಉದ್ದ ಕತ್ತು ಹಾಗೂ ಉದ್ದವಾದ ಕಾಲುಗಳಿಂದಲೇ ಇದು ಗುರುತಿಸಲ್ಪಡೋದು ಕೂಡಾ ವಿಶೇಷ. ಜಿರಾಫೆ ದೂರದಲ್ಲಿ ಇದ್ದರೂ ಕೂಡಾ ಅದರ ತಲೆ ಭಾಗ ಎತ್ತರದಲ್ಲಿ ಇರೋ ಕಾರಣ ಬಹಳ ಸುಲಭವಾಗಿ ಜನರ ಕಣ್ಣಿಗೆ ಸಿಗುತ್ತೆ. ಜಿರಾಫೆಗಳು ಸಾಮಾನ್ಯವಾಗಿ ಎತ್ತರವಾಗಿರುವ ಮರಗಳಲ್ಲಿನ ಎಲೆಗಳನ್ನು ಕಿತ್ತು ತಿನ್ನುವುದನ್ನು ನಾವು ನೋಡಿದಾಗ ಎಂತ ಸುಂದರವಾದ ದೃಶ್ಯ ಅದು ಅನ್ಕೊಂಡು ಅದನ್ನು ಮೆಚ್ಚಿಕೊಳ್ತೇವೆ ಕೂಡಾ. ಆದರೆ ಇದೇ ಜಿರಾಫೆ ನೆಲದ ಮೇಲೆ ಇರೋ ಹುಲ್ಲನ್ನು ತಿನ್ನೋದನ್ನು ನೋಡಿದವರು ಮಾತ್ರ ಬಹಳ ಕಡಿಮೆ ಎಂದೇ ಹೇಳಬಹುದು.

ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ವೈರಲ್ ಆಗಿದ್ದು, ಇದರಲ್ಲಿ ನಾವು ಒಂದು ಜಿರಾಫೆ ಹುಲ್ಲು ತಿನ್ನೋದನ್ನು ಗಮನಿಸಿಬಹುದು. ಜಿರಾಫೆ ಹುಲ್ಲು ತಿನ್ನೋ ವೀಡಿಯೋ ವೈರಲ್ ಆಗಿದ್ಯಾ? ಅಂತ ವಿಶೇಷ ಏನಿದೆ? ಆ ವೀಡಿಯೋದಲ್ಲಿ ಅಂತೀರಾ. ಖಂಡಿತ ಈ ವೀಡಿಯೋದಲ್ಲಿ ಒಂದು ವಿಶೇಷ ಇದೆ. ಆ ವಿಶೇಷ ಏನಂದ್ರೆ ಜಿರಾಫೆ ತಾನು ಹುಲ್ಲು ತಿನ್ನುವ ವಿಧಾನ. ಬಹುಶಃ ಯಾರೂ ಕೂಡಾ ಇದನ್ನು ಊಹೆ ಮಾಡಿರೋದಿಲ್ಲ. ವೀಡಿಯೋ ನೋಡಿದ ಕೆಲವು ನೆಟ್ಟಿಗರು ಕೂಡಾ ಇದು ನಿಜ ಅಲ್ಲ, ಏನೋ ಟೆಕ್ನಿಕ್ ಬಳಕೆ ಮಾಡಿ ಹಾಗೆ ತೋರಿಸಿದ್ದಾರೆ ಅನ್ನೋ ಮಾತು ಕೂಡಾ ಹೇಳ್ತಾ ಇದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಜಿರಾಫೆಯೊಂದು ನೆಲದ ಮೇಲೆ ಇರುವ ಹುಲ್ಲನ್ನು ತಿನ್ನಲು ಒಂದು ಸ್ಟಂಟ್ ಮಾಡಿದೆ. ಅದು ತನ್ನ ಮುಂದಿನ ಎರಡು ಕಾಲುಗಳನ್ನು ಅಗಲವಾಗಿ ತೆರೆದು, ಅದನ್ನು ಸ್ವಲ್ಪ ಬಾಗಿಸಿ ಅಂದರೆ ಶಾಲೆಯಲ್ಲಿ ಮಕ್ಕಳು ಡ್ರಿಲ್ ಮಾಡುವಾಗ ಅವರ ಎರಡು ಕಾಲನ್ನು ಸ್ವಲ್ಪ ಅಗಲಿಸಿ ಬೆನ್ನು ಬಾಗಿಸಿ, ಮುಖವನ್ನು ಭೂಮಿಯ ಕಡೆಗೆ ಮಾಡುವ ಒಂದು ಎಕ್ಸಸೈಸ್ ನಂತೆ ಜಿರಾಫೆ ಮಾಡುತ್ತಾ, ತನ್ನ ತಲೆಯನ್ನು ಬಾಗಿಸಿ ನೆಲದ ಮೇಲಿರುವ ಹುಲ್ಲನ್ನು ತಿನ್ನುತ್ತಿದೆ. ಈ ವೀಡಿಯೋ ಹಂಚಿಕೊಂಡ ಟ್ವಿಟರ್ ಬಳಕೆದಾರರು ಶೀರ್ಷಿಕೆಯಲ್ಲಿ, ” ಜಿರಾಫೆ ಹುಲ್ಲು ಹೇಗೆ ತಿನ್ನುತ್ತದೆ ಎಂದು ಮೊದಲು ನಾನು ಎಂದೂ ಯೋಚಿಸಿರಲಿಲ್ಲ, ಆದರೆ ಇದು ಅದ್ಭುತವಾಗಿದೆ” ಎಂದು ಬರೆದುಕೊಂಡಿದ್ದಾರೆ.

ವಿಡಿಯೋ ನೋಡಿ

ಈ ವೀಡಿಯೋ ಅಕ್ಟೋಬರ್ 12 ರಂದು ಟ್ವಿಟರ್ ನಲ್ಲಿ ಶೇರ್ ಆಗಿದ್ದು ಅದಾಗಲೇ 90 ಲಕ್ಷ ದಾಟಿದ ವೀಕ್ಷಣೆಗಳನ್ನು ಪಡೆದು, 2 ಲಕ್ಷಕ್ಕೂ ಅಧಿಕ ಲೈಕ್, 50 ಸಾವಿರ ದಾಟಿದ ರೀಟ್ವೀಟ್ ಗಳಾಗಿದ್ದು, 18 ಸಾವಿರ ದಾಟಿದ ಕಾಮೆಂಟ್ ಗಳು ಬಂದಿವೆ. ವೀಡಿಯೋ ನೋಡಿದವರು ಇದು ನಿಜವೇ? ಎಂದು ಪ್ರಶ್ನೆ ಮಾಡಿದ್ದಾರೆ. ಕೆಲವರು ಜಿರಾಫೆಗಳ ಸ್ಟೈಲ್ ನಿಜಕ್ಕೂ ಆಕರ್ಷಕ ಎಂದಿದ್ದಾರೆ. ಮತ್ತೆ ಕೆಲವರು ಜಿರಾಫೆಗಳು ತಮ್ಮನ್ನು ತಾವು ಮಾಡೆಲ್ ಗಳೆಂದು ತಿಳಿದಿರುತ್ತವೆ ಅದರಲ್ಲೂ ಹೆಣ್ಣು ಜಿರಾಫೆಗಳ ನಡಿಗೆಯ ಭಂಗಿ ಮಾಡೆಲ್ ಗಳ ರೀತಿ ಇರುತ್ತದೆ ಎಂದು ವಿಧ ವಿಧವಾದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.