ಎದುರಿಗೆ ಮಹಾಕಾಯ ಬಸ್ಸು ಬಂದರೂ ನೋ ಸ್ಲೋ! Only speed ! ಮುಂದಿನ ಸೂಪರ್ ಹಿಟ್ ಕ್ಲೈಮ್ಯಾಕ್ಸ್ ನೋಡಲಿಲ್ಲ ಅಂದ್ರೆ ಹೇಗೆ? ಈ ವೈರಲ್ ವಿಡಿಯೋದಲ್ಲಿ…
ಕೆಲವರಿಗೆ ಬೈಕ್ ನಡೆಸುವುದೆಂದರೆ ಮೈಯಲ್ಲಿ ಒಂದು ರೀತಿಯ ವಿದ್ಯುತ್ ಸಂಚಾರವಾದಂತೆ ಜೋಷ್ ಹುಟ್ಟಿಕೊಳ್ಳುತ್ತದೆ. ಆ ರೀತಿಯ ಭೂತವೇ ಮೈಯೊಳಗೆ ಸಂಚಾರವಾದಂತೆ ವರ್ತಿಸುತ್ತಾರೆ. ಹೀಗಾಗಿಯೇ ಅನೇಕ ದುರ್ಘಟನೆಗಳು ಘಟಿಸುತ್ತವೆ. ಎಷ್ಟೋ ಸಲ ಒಬ್ಬರ ತಪ್ಪಿಗೆ ಅಮಾಯಕರು ಸಹ ಬಲಿಯಾಗುತ್ತಾರೆ. ಕೆಲವೊಮ್ಮೆ ಇಂಥ ಘಟನೆಗಳಲ್ಲಿ ಬಿದ್ದು ಬಿದ್ದು ನಗುವ ಪ್ರಸಂಗಗಳು ಸಹ ಕ್ರಿಯೇಟ್ ಆಗುತ್ತವೆ. ಈ ದೃಶ್ಯಗಳ ವಿಡಿಯೋ ನೋಡುವಾಗ ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿ ಹೋಗುತ್ತದೆ, ಜೊತೆಗೆ ಇಂಥ ವಿಡಿಯೋಗಳನ್ನು ಮೇಲಿಂದ ಮೇಲೆ ನೋಡಬೇಕೆನಿಸುತ್ತದೆ.
ಇಂಥದ್ದೇ ನಕ್ಕುನಗಿಸುವ ವೈರಲ್ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಿಂದ ನಿಮಗಾಗಿ ತಂದಿದ್ದೇವೆ. ಈ ವಿಡಿಯೋ ನೋಡಿದಾಗ ನಿಜಕ್ಕೂ ಬಿದ್ದು ಬಿದ್ದು ನಗುವಂತೆ ಇದೆ. ಇದರಲ್ಲಿ ಒಬ್ಬ ಬೈಕ್ ಸವಾರ ಯಾವುದರ ಪರಿವೆಯೇ ಇಲ್ಲದೆ ರಸ್ತೆಯ ಮೇಲೆ ವೇಗವಾಗಿ ತೂರಿಕೊಂಡು ಬರುತ್ತಿದ್ದಾನೆ. ಅಷ್ಟರಲ್ಲಿ ರಸ್ತೆಯ ಬದಿಗೆ ನಿಂತ ಬಸ್ಸೊಂದು ಟರ್ನ್ ತೆಗೆದುಕೊಳ್ಳಲು ಅಣಿಯಾಗಿದೆ. ಇದನ್ನು ಗಮನಿಸಿದ ಬೈಕ್ ಸವಾರ ಒಮ್ಮೆಲೆ ಬೆಚ್ಚಿ ಬಿದ್ದು ತನ್ನ ಬೈಕನ್ನು ಹಠಾತ್ತನೆ ಕಂಟ್ರೋಲ್ ಮಾಡಲು ಪ್ರಯತ್ನಿಸಿದ್ದಾನೆ. ಆದರೆ ಅಷ್ಟೊತ್ತಿಗಾಗಲೇ ಸಮಯ ಮೀರಿ ಹೋಗಿತ್ತು. ಎದುರಿಗೆ ಬಸ್ ನೋಡಿದ ಬೈಕ್ ಸವಾರ ತನ್ನ ಬೈಕ್ ಕಂಟ್ರೋಲ್ ಮಾಡಲು ಆಗದೆ ಹಾಗೆಯೇ ಸತ್ತೇನೋ ಬಿದ್ದೆನೋ ಎನ್ನುತ್ತಾ ಎಲ್ಲಿಯೂ ನಿಲ್ಲದೆ ಬದಿಯಿಂದ ಓಡಿಸಿಕೊಂಡು ಹೋಗಿದ್ದಾನೆ. ಈ ದೃಶ್ಯ ನೋಡಲು ಮಾತ್ರ ತುಂಬಾ ತಮಾಷೆಯಾಗಿದೆ.
ನೋಡಿ ಈ ವಿಡಿಯೋ…
View this post on Instagram
ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ graju444 ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾನೇ ಇಷ್ಟವಾಗಿ ಇದರ ಮೇಲೆ ಸುಮಾರು ಐದೂವರೆ ಲಕ್ಷ ಲೈಕ್ಸ್ ಗಳ ಸುರಿಮಳೆ ಮಾಡಿದ್ದಾರೆ.