ಎರಡು ವರ್ಷದ ಮಗು ದೈತ್ಯಾಕಾರಾದ ಹಾವನ್ನು ಹಿಡಿದು ಮಾಡಿದ್ದೇನು ಗೊತ್ತಾ? ವೈರಲ್ ವಿಡಿಯೋ ನೋಡಿ!
ಹಾವನ್ನು ನೋಡಿದಾಗ ಎಷ್ಟು ಭ#ಯ ಹುಟ್ಟುವದು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಆಸ್ಟ್ರೇಲಿಯಾದಲ್ಲಿರುವ ಈ 2 ವರ್ಷದ ಬಾಲಕ ಮಾತ್ರ ದೊಡ್ಡ ಹಾವನ್ನು ಕೈಯಲ್ಲಿ ಹಿಡಿದು ಮಾಡಿದ ಪರಿಯನ್ನು ಕಂಡು ಎಲ್ಲರೂ ಆಶ್ಚ#ರ್ಯ ಚಕಿತರಾಗಿದ್ದಾರೆ. ಈ ಪುಟ್ಟ ಮಗು ಸುಮಾರು ಎರಡು ಮೀಟರ್ ಉದ್ದದ ಹಾವನ್ನು ಹಿಡಿದುಕೊಂಡು ಆಟವಾಡಿದ್ದಾನೆ.
ಈ ಪುಟ್ಟ ಮಗುವಿನ ಈ ವಿಪರೀತ ಸಾಹಸವನ್ನು ಸ್ವತಃ ತಂದೆಯೇ ವಿಡಿಯೋ ರೆಕಾರ್ಡಿಂಗ್ ಮಾಡಿ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ಮೂಲಕ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮಗು ಮಹಾಕಾಯ ಹಾವನ್ನು ತನ್ನ ಹತೋಟಿಯಲ್ಲಿ ಇಡಲು ಪ್ರಯತ್ನ ಪಡುತ್ತಿದ್ದಾನೆ. ಅಂತಹ ಧೈರ್ಯವಂತ ಮಗುವಿನ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ.
‘ಡೇಲಿ ಮೇಲ್’ ವೃತ್ತದ ನೀಡಿದ ವರದಿಯ ಪ್ರಕಾರ ಈ ಮಗು ಆಸ್ಟ್ರೇಲಿಯಾದಲ್ಲಿಯ ಪ್ರಸಿದ್ಧ ವ್ಯಕ್ತಿ ಮ್ಯಾಟ್ ರೈಟ್ ಇವರ ಮಗನಿದ್ದಾನೆ. ವನ್ಯ ಜೀವಿಗಳ, ವಿಶೇಷವಾಗಿ ಮೊಸಳೆಗಳನ್ನು ಸುರಕ್ಷಿತವಾಗಿ ಉಳಿಸುವ ವ್ಯಕ್ತಿಯಂದು ಇವರನ್ನು ಪರಿಗಣಿಸಲಾಗುತ್ತದೆ. ಕಳೆದ 20 ವರ್ಷಗಳಿಂದ ಮ್ಯಾಟ್ ಅವರು ಉತ್ತರ ಕಡೆಯ ಭಾಗದಲ್ಲಿಯ ಅನೇಕ ಮೊಸಳೆಗಳನ್ನು ಹಿಡಿದು ಅವುಗಳನ್ನು ಸುರಕ್ಷಿತವಾದ ಸ್ಥಳಕ್ಕೆ ತಲುಪಿಸಿದ್ದಾರೆ. ಮ್ಯಾಟ್ ರೈಟ್ ಅವರು ಕೆಲವು ದಿವಸಗಳ ಹಿಂದೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಒಂದು ವಿಡಿಯೋ ಶೇರ್ ಮಾಡಿದ್ದಾರೆ.
ವಿಡಿಯೋ ನೋಡಿ.
ಈ ವಿಡಿಯೋದಲ್ಲಿ ತಮ್ಮ ಮನೆಯ ಎದುರುಗಡೆ ಒಂದು ದೈತ್ಯಾಕಾರಾದ ಹಾವು ಕಾಣುತ್ತದೆ. ಹಾವು ತುಂಬಾ ಭ#ಯಾನಕ ಮತ್ತು ದೈತ್ಯಾಕಾರವಾಗಿ ಕಾಣುತ್ತದೆ. ಇಂತಹ ಒಂದು ಹಾವನ್ನು ಮ್ಯಾಟ್ ಅವರ ಎರಡು ವರ್ಷದ ಮಗು ಹಿಡಿದಿದ್ದಾನೆ. ಈ ಮಗು ಸಂಪೂರ್ಣ ಆತ್ಮವಿಶ್ವಾಸದಿಂದ ತನ್ನ ಎರಡು ಕೈಗಳಿಂದ ಹಾವಿನ ಬಾಲವನ್ನು ಹಿಡಿದು ಅದನ್ನು ಎಳೆಯುವ ಪ್ರಯತ್ನ ಮಾಡುತ್ತಿರುವದು ಈ ವಿಡಿಯೋದಲ್ಲಿ ಕಂಡು ಬರುತ್ತದೆ. ಈ ವಿಡಿಯೋದಲ್ಲಿ ಮ್ಯಾಟ್ ಅವರು ತಮ್ಮ ಭಾಷೆಯಲ್ಲಿ ” ಅದನ್ನು ಹೊರಗಡೆ ತಗೆ, ಅದನ್ನು ಹೊರಗಡೆ ತಗೆ, ಅದಕ್ಕೆ ಅಂಗಳಲ್ಲಿ ತಗೆದುಕೊಂಡು ಹೋಗು” ಎಂದು ಮಗುವಿಗೆ ಹೇಳುತ್ತಿದ್ದಾರೆ.
ಪ್ರಸ್ತುತ ವಿಡಿಯೋದಲ್ಲಿಮ್ಯಾಟ್ ಅವರು ತಮ್ಮ ಎರಡು ವರ್ಷದ ಮಗುವಿಗೆ ಹಾವು ಹೇಗೆ ಹಿಡಿಯುವದು ಎಂಬುದು ಕಲಿಸುತ್ತಿದ್ದಾರೆ. ಮಗು ಹಾವನ್ನು ಹೊರಗಡೆ ತಗೆಯುವ ಸಲುವಾಗಿ ಮ್ಯಾಟ್ ಅವರು ಧೈರ್ಯ ತುಂಬುತ್ತಿರುವದು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಇದುವರೆಗೆ ಲಕ್ಷಕ್ಕಿಂತಾ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ವಿಡಿಯೋ ವೀಕ್ಷಣೆ ಮಾಡಿರುವ ನೆಟ್ಟಿಗರು ವಿವಿಧ ಪ್ರಕಾರದ ಕಾಮೆಂಟ್ ಕೂಡಾ ಬರೆದಿದ್ದಾರೆ. ಕೆಲವು ನೆಟ್ಟಿಗರು ‘ಶೂರ ಬಾಲಕ’ ಎಂದರೆ ಇನ್ನೂಕೆಲವರು ಹಾವಿನ ಜೊತೆಗೆ ಆಟ ಆಡಬೇಡ ಎಂದು ಸಲಹೆ ನೀಡಿದ್ದಾರೆ.