ಎರಡೂ ಕೈಗಳನ್ನು ಕಟ್ಟಿದರೂ ಗೆಳೆಯನ ಬಾಂಡ್ಲೆ ತಲೆ ಮತ್ತೆ ಮತ್ತೆ ಕೆಂಪು ಮಾಡಿದ ಚತುರ ಮಿತ್ರ; ಏನಿದು ಲಾಜಿಕ್? ನೀವಾದರೂ ಹೇಳಿ; ನೋಡಿ ವೈರಲ್ ವಿಡಿಯೋ..

ಮಿತ್ರರ ಜೊತೆ ಸಮಯ ಕಳೆಯುವಾಗ ಬೆಟ್ಟದಷ್ಟು ಕಷ್ಟಗಳಿದ್ದರೂ ಅರಳೆಯಂತೆ ಹಗುರವಾಗಿ ಬಿಡುತ್ತವೆ. ಅವರ ಜೊತೆಗಿನ ಮಜಾ, ಮಾಸ್ತಿ ಜೀವನದುದ್ದಕ್ಕೂ ನೆನಪಿನಲ್ಲಿ ಇರುತ್ತವೆ. ಮೈತ್ರಿಯಲ್ಲಿ ಏನೇ ಆಗಲಿ ಏನೇ ನಡೆಯಲಿ ಎಲ್ಲವನ್ನೂ ಸಹಜವಾಗಿ ತೆಗೆದುಕೊಳ್ಳುತ್ತಾ ಮನುಷ್ಯ ಮುಂದೆ ನಡೆಯುವಲ್ಲಿ ಖುಷಿ ಪಡುತ್ತಾನೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮಿತ್ರರ ಮಸ್ತಿಯ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೆಟಿಜನ್ಸ್ ಗಳಿಗೆ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದೆ.

ವಿಡಿಯೋದಲ್ಲಿ ಕಂಡು ಬರುವ ಹಾಗೆ ಅನೇಕ ಮಿತ್ರರು ಕೂಡಿಬಾಬಾ ಮಿತ್ರನಿಗೆ ಗೋಳು ಹೊಯ್ದುಕೊಳ್ಳುತ್ತಿದ್ದಾರೆ. ಆತ ಇವರಲ್ಲಿ ಕೂಡಿ ಪಕ್ಕಾ ಪೆದ್ದನಾಗಿಬಿಟ್ಟಿದ್ದಾನೆ. ಅದಕ್ಕೆ ಕಾರಣ ಅಲ್ಲಿ ನಡೆದಿರುವ ಮೋಜಿನ ಪ್ರಸಂಗ. ಪ್ರತಿಯೊಂದು ಗೆಳೆಯರ ಬಳಗದಲ್ಲಿ ಈ ರೀತಿಯ ಒಬ್ಬ ಮಿತ್ರನಿದ್ದಾಗಲೇ ತುಂಬಾ ಮಜಾ ಬರುವದು, ಏನಂತೀರಾ?

ಇಬ್ಬರೂ ಮಿತ್ರರು ಎದುರು ಬದುರಾಗಿ ಕುಳಿತಿದ್ದಾರೆ. ಅದರಲ್ಲಿ ಒಬ್ಬ ಮಿತ್ರನು ಇನ್ನೊಬ್ಬ ಮಿತ್ರನ ಎರಡೂ ಕೈಗಳನ್ನು ಹಗ್ಗದಿಂದ ಕಟ್ಟುತ್ತಾನೆ. ಆಗ ಮೂರನೆಯ ಮಿತ್ರನೊಬ್ಬ ಕಟ್ಟಿದ ಕೈಗಳನ್ನು ಬಟ್ಟೆಯಿಂದ ಕವರ್ ಮಾಡುತ್ತಾನೆ. ಆಗ ಕೈಗಳನ್ನು ಕಟ್ಟಿಕೊಂಡ ವ್ಯಕ್ತಿ ತುಂಬಾ ಸಹಜವಾಗಿ ತನ್ನ ಕೈಗಳನ್ನು ಫ್ರೀ ಮಾಡಿಕೊಂಡು ಎದುರಿಗೆ ಕುಳಿತ ಮಿತ್ರನ ಬಾಂಡ್ಲೆ ತಲೆಯ ಮೇಲೆ ಚಟ್ ಅಂತ ಹೊಡೆಯುತ್ತಿದ್ದಾನೆ. ಆಗ ಹೊಡೆಸಿಕೊಂಡ ಮಿತ್ರ ತಕ್ಷಣ ಆತನಂಕಟ್ಟಿದ ಕೈಗಳನ್ನು ಪರಿಶೀಲಿಸುತ್ತಾನೆ. ಅಲ್ಲಿ ಕೈಗಳು ಮೊದಲಿನ ಹಾಗೆ ಹಗ್ಗದಿಂದ ಕಟ್ಟಿದ ಹಾಗೆಯೇ ಇರುತ್ತವೆ. ಈ ರೀತಿ ಮೋಜಿನ ಆಟ ಸತತವಾಗಿ ನಡೆಯುತ್ತಲೇ ಇರುತ್ತದೆ. ಪಾಪ ತಲೆಯ ಮೇಲೆ ಹೊಡೆಸಿಕೊಳ್ಳುತ್ತಿರುವ ಮಿತ್ರನಿಗಷ್ಟೆ ಏಕೆ? ನಮಗೂ ಈ ಲಾಜಿಕ್ ಸ್ವಲ್ಪವೂ ತಿಳಿದು ಬರುವದಿಲ್ಲ. ಈಗ ನಿಮಗೆ ಚಾಲೆಂಜ್ ನೀವಾದರೂ ಇದು ಹೇಗೆ ಸಾಧ್ಯ? ಇದಕ್ಕೆ ನಿಮಗಾದರೂ ಉತ್ತರ ಹುಡುಕಲು ಸಾಧ್ಯವೇ? ಹೇಳಿ ನೋಡೋಣ.

ವಿಡಿಯೋ ನೋಡಿ

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ನೆಟ್ಟಿಗರು ಈ ವೀಡಿಯೋವನ್ನು ತುಂಬಾ ಇಷ್ಟದಿಂದ ನೋಡುತ್ತಿದ್ದಾರೆ. ಹಾಗೂ ವಿವಿಧ ರೀತಿಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.