ಎರಡೇ ಎರಡು ತಿಂಗಳ ಹಸುಗೂಸು ಉಸುರಿದ ಶಬ್ದ ಕೇಳಿ ತಾಯಿಯಾದಳು ಭಾವುಕ! ವೈರಲ್ ಆಯಿತು ವಿಡಿಯೋ…
ಮಗುವಿನ ಹುಟ್ಟಿನಿಂದ ಹಿಡಿದು ಅದು ದೊಡ್ಡದಾಗುವವರೆಗೂ ತಾಯಿಯ ಪ್ರೀತಿ, ಕಾಳಜಿ ನೆರಳಿನಂತೆ ಸದಾ ಮಗುವಿಗೆ ಬೆಂಬಲವಾಗಿ ನಿಂತಿರುತ್ತದೆ. ಮಗುವಿನ ಮೊದಲ ಗುರು ತಾಯಿಯೇ ಆಗಿರುತ್ತಾಳೆ. ಅದಕ್ಕೆ ಮಾತನಾಡಲು, ಆಡಲು ಹಿಡಿದು ಅನೇಕ ಚಟುವಟಿಕೆಗಳನ್ನು ಮೊದಲು ತಾಯಿಯೇ ಕಲಿಸುತ್ತಾಳೆ. ಹೀಗಿರುವಾಗ ಮಗು ಪ್ರತಿಯೊಂದನ್ನೂ ತಾಯಿಗೆ ಅನುಕರಣೆ ಮಾಡುತ್ತದೆ. ಮಗು ಸಾಧಾರಣವಾಗಿ 8 ರಿಂದ 9 ತಿಂಗಳ ನಂತರ ಮಾತನಾಡಲು ಶುರು ಮಾಡುತ್ತದೆ. ಕೆಲವು ಮಕ್ಕಳು ಸ್ವಲ್ಪ ನಿಧಾನ ಗತಿಯಿಂದ ಮಾತನಾಡಲು ಕಲಿತರೂ ವರ್ಷಕ್ಕೆ ಹೆಚ್ಚು ಕಡಿಮೆ ಕಲಿತುಕೊಳ್ಳುತ್ತವೆ. ಆದರೆ ಮಕ್ಕಳು ಬೇಗನೆ ಮಾತು ಕಲಿತರೆ ಪೋಷಕರಿಗೆ ಅದಕ್ಕಿಂತ ಸಂತೋಷ ಬೇರೆಯಾಗಿರುವದಿಲ್ಲ. ಅದರಲ್ಲೂ ತಾಯಿಗೆ ಆಗುವ ಸಂತೋಷ ಅಷ್ಟಿಟ್ಟಲ್ಲ. ಅದು ವ್ಯಕ್ತ ಮಾಡಲು ಶಬ್ದಗಳು ಕಡಿಮೆ ಬೀಳುತ್ತವೆ.
ಇದೇ ರೀತಿ ಬರೀ ಎರಡು ತಿಂಗಳ ಪುಟ್ಟ ಮಗುವೊಂದು ಮಾತನಾಡಿದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ಅದನ್ನು ನೋಡಿದ ನೆಟಿಜನ್ಸ್ ಗಳು ಆಶ್ಚರ್ಯ ವ್ಯಕ್ತ ಮಾಡಿದ್ದಾರೆ.
ಮಗುವಿನ ಬಾಯಿಯಿಂದ ಹೊರಗೆ ಬಿದ್ದ ಶಬ್ದಗಳು ಪ್ರತಿ ತಾಯಿ-ತಂದೆಗೆ ತುಂಬಾ ಆನಂದವನ್ನು ನೀಡುವಂಥವು ಆಗಿರುತ್ತವೆ. ಇಲ್ಲಿಯಂತೂ ಮಗು ಬರೀ ಎರಡೇ ತಿಂಗಳದ್ದಾಗಿದೆ. ಹೀಗಾಗಿ ಪೋಷಕರ ಸಂತೋಷಕ್ಕೆ ಮೇರೆಯೆ ಇಲ್ಲ.
ಈ ಮಗುವಿನ ಮೊದಲ ಶಬ್ದಗಳನ್ನು ಕೇಳಿ ತಾಯಿ ಖುಷಿಯಿಂದ ಕುಣಿದಿದ್ದಾಳೆ. ಮಗುವಿನ ಬಾಯಿಯಿಂದ ಹೊರಬಿದ್ದ ಮುಗ್ಧ ಮಾತು ಎಲ್ಲರ ಮನಸ್ಸನ್ನು ಗೆಲ್ಲುತ್ತಿದೆ. ಅಷ್ಟೇ ಅಲ್ಲ ಮಗುವಿನ ಮಾತಿಗೆ ಪ್ರೀತಿಯಿಂದ ಲೈಕ್ಸ್ ಗಳ ಸುರಿಮಳೆ ಗೈದಿದ್ದಾರೆ.
ನೀವೂ ನೋಡಿ ಈ ವಿಡಿಯೋ…
View this post on Instagram
ಈ ವೈರಲ್ ವಿಡಿಯೋವನ್ನು ಮಗುವಿನ ತಾಯಿ ಮಾರಿಸಾ ಸೆಂಟ್ರೋವಿಟ್ಸ್ ತನ್ನ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಿದ್ದಾಳೆ. ಈ ವೀಡಿಯೋವನ್ನು ಇಲ್ಲಿಯವರೆಗೆ ಸುಮಾರು 3.5 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಜೊತೆಗೆ ತಮ್ಮ ಪ್ರತಿಕ್ರಿಯೆಗಳನ್ನು ಸಹ ನೀಡುತ್ತಿದ್ದಾರೆ.