ಎರಡೇ ಕಾಲುಗಳ ಮೇಲೆ ನಿಲ್ಲಲು, ತಿರುಗಾಡಲು ಮತ್ತು ಮೇವು ತಿನ್ನಲು ಯತ್ನಿಸುತ್ತಿರುವ ಹಸುಗರುವಿನ ಮನ ಕಲಕುವ ಈ ವಿಡಿಯೋ ನೋಡಿ..
ಸೋಶಿಯಲ್ ಮೀಡಿಯಾ ಜಗತ್ತೇ ಅದ್ಭುತವಾಗಿದೆ. ಇಲ್ಲಿ ಕಾಣಸಿಗುವ ಕೆಲವೊಂದು ಫೋಟೋಗಳು ಮತ್ತು ವೀಡಿಯೊಗಳು ಮನುಷ್ಯನ ವಿಚಾರಕ್ಕೆ ನಿಲುಕಲಾರದ್ದಾಗಿರುತ್ತವೆ.
ಈಗ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಆದ ಹಸುಗರುವಿನ ಮನ ಕಲಕುವ ವಿಡಿಯೋ ಒಂದನ್ನು ನಿಮ್ಮ ಮುಂದೆ ತಂದಿದ್ದೇವೆ. ಈ ಕರುವಿಗೆ ಮುಂದಿನ ಎರಡು ಕಾಲುಗಳೇ ಇಲ್ಲ. ಆದರೂ ಸಹ ಈ ಕರು ಜೀವಿಸಲು ಪಡುತ್ತಿರುವ ಪ್ರಯತ್ನ ಮತ್ತು ಪರಿಶ್ರಮ ನಿಜಕ್ಕೂ ಶ್ಲಾಘನೀಯವೇ ಸರಿ.
ಈ ಹಸುವಿನ ಕರು ತನ್ನ ಹಿಂದಿನ ಎರಡು ಕಾಲುಗಳ ಸಹಾಯದಿಂದಲೇ ನಡೆದಾಡಲು ಯತ್ನಿಸುತ್ತಿದೆ. ಕೆಲವೇ ಕ್ಷಣಗಳ ಈ ವಿಡಿಯೋ ನೋಡಿದಾಗ ನೋಡುಗನ ಮನಸ್ಸು ಕಲಕುತ್ತದೆ. ಅದು ಅಂಗಳದಲ್ಲಿ ಹಿಂದಿನ ಎರಡೇ ಕಾಲುಗಳ ಪ್ರಯತ್ನದಿಂದಲೇ ನಡೆದಾಡಲು ಹಾಗೂ ಅಲ್ಲಿಯೇ ಇದ್ದ ಮೇವು ತಿನ್ನಲು ಪ್ರಯತ್ನಪಡುತ್ತಿರುವ ಅವಸ್ಥೆಯನ್ನು ನೋಡಿದಾಗ ನಿಜಕ್ಕೂ ಕರುಳು ಕಿತ್ತಿ ಬರುತ್ತದೆ.
ನೋಡಿ ಈ ವಿಡಿಯೋ…
ಮಿತ್ರರೇ ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ಇಲ್ಲಿಯವರೆಗೆ ಸುಮಾರು ಒಂದೂವರೆ ಕೋಟಿ ಜನರು ವೀಕ್ಷಿಸಿದ್ದಾರೆ. ಲಕ್ಷಾವಧಿ ಜನರು ಲೈಕ್ ಮಾಡಿದರೆ ಸಾವಿರಾರು ಜನರು ತಮ್ಮ ಪ್ರತಿಕ್ರಿಯೆಗಳನ್ನು ಸಹ ಹೊರಹಾಕಿದ್ದಾರೆ.