ಎಲೆನ್ ಮಸ್ಕ್ ಹೊಸ ಸಾಧನೆ: ಒಂದೇ ದಿನದಲ್ಲಿ ಏರಿತು 25 ಬಿಲಿಯನ್ ಡಾಲರ್ ಗಳಷ್ಟು ಆದಾಯ!

ಎಲೆಕ್ಟ್ರಿಕ್ ಕಾರ್ ಕಂಪನಿ ಟೆಸ್ಲಾ ದ ಮಾಲೀಕರೂ ಆಗಿರುವ ಎಲನ್ ಮಸ್ಕ್ ಈಗ ಹೊಸದೊಂದು ಸಾಧನೆಯನ್ನು ಮಾಡಿದ್ದಾರೆ. ಮಸ್ಕ್ ಅವರ ಆದಾಯವು ಯಾರೂ ಊಹಿಸಿರದ ಹಾಗೆ ಒಂದೇ ದಿನದ ಅವಧಿಯಲ್ಲಿ ದಾಖಲೆಯ ಮಟ್ಟಕ್ಕೆ ಎನ್ನುವ ಹಾಗೆ 25 ಶತಕೋಟಿ ಡಾಲರ್‌ಗಳಷ್ಟು ಏರಿಕೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಟೆಸ್ಲಾ ಇಂಕ್ ಶೇರುಗಳಲ್ಲಿ ಮಂಗಳವಾರ ಶೇಕಡ 20ರಷ್ಟು ಏರಿಕೆ ಕಂಡುಬಂದಿದೆ. ಇದು ಒಂದು ವರ್ಷದ ಅವಧಿಯಲ್ಲಿ ಕಂಪನಿಯ ಶೇರುಗಳಲ್ಲಿ ಆದಂತಹ ದೊಡ್ಡಮಟ್ಟದ ಏರಿಕೆಯಾಗಿದೆ. ಈ ಬೆಳವಣಿಗೆಯ ನಂತರ ಬ್ಲೂಂಬರ್ಗ್ ಬಿಲಿಯನೇರ್ ಇಂಡಕ್ಸ್ ನ ವರದಿಯ ಪ್ರಕಾರ ಹೆಲೆನ್ ಮಸ್ಕ್ ಅವರ ಆದಾಯವು 174 ಬಿಲಿಯನ್ ಡಾಲರ್ ಗಳಿಗೆ ಏರಿಕೆಯಾಗಿದೆ.

ಮಸ್ಕ್ ಪ್ರಸ್ತುತ ವಿಶ್ವದ ಎರಡನೇ ಅತಿ ದೊಡ್ಡ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ರವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಅಮೆಜಾನ್ ನ ಸಂಸ್ಥಾಪಕ ಜೆಫ್ ಬೆಜೋಸ್ ರನ್ನು ಹಿಂದಿ ಹಾಕಿ ನಂಬರ್ ಒನ್ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದರು. ಆದರೆ ಅದು ಬಹಳ ದಿನಗಳ ಕಾಲ ಮುಂದುವರೆಯಲಿಲ್ಲ. ಏಕೆಂದರೆ ಜೆಫ್ ಬೆಜೋಸ್ ಅವರ ಆದಾಯದಲ್ಲಿ ಏರಿಕೆಯಾದ ಕಾರಣ ಮಸ್ಕ್ ಮತ್ತೆ ಎರಡನೆಯ ಸ್ಥಾನಕ್ಕೆ ಇಳಿದಿದ್ದಾರೆ. ಮಂಗಳವಾರ, ಟೆಸ್ಲಾ ಷೇರುಗಳು ನ್ಯೂ ಸ್ಟ್ರೀಟ್ ರಿಸರ್ಚ್ ನ ವಿಶ್ಲೇಷಕ ಪಿಯರೆ ಫೆರಾಗು ಅವರ ನವೀಕರಣದಿಂದ ಲಾಭ ಪಡೆದಕೊಂಡಿವೆ. ಅಲ್ಲದೇ ಅವರು ಟೆಸ್ಲಾ ಶೇರುಗಳ ಖರೀದಿಗೆ ಶಿಫಾರಸ್ಸು ಕೂಡಾ ಮಾಡಿದ್ದಾರೆ.

ಮಸ್ಕ್ ಅವರ ಟೆಸ್ಲಾ ಕಂಪನಿಯು ಬಿಟ್ ಕಾಯಿನ್ ನಲ್ಲಿ ಇದುವರೆಗಿನ ಅತ್ಯಂತ ಹೆಚ್ಚಿನ ಹೂಡಿಕೆಯನ್ನು ಮಾಡಿದೆ. ಎಲೆನ್ ಮಸ್ಕ್ ಸಂಪತ್ತಿನ ವಿಚಾರಕ್ಕೆ ಬಂದರೆ ಅವರು ತಮ್ಮ ಒಟ್ಟು ಸಂಪತ್ತಿನಲ್ಲಿ ವಿಶ್ವದ ಅಗ್ರಗಣ್ಯ ಶ್ರೀಮಂತ ಜೆಪ್ ಬೆಜೋಸ್ ಅವರ ಸಂಪತ್ತಿಗೆ ಬಹಳ ಹತ್ತಿರವಿದ್ದಾರೆ ಎನ್ನಲಾಗಿದೆ. ಇವರಿಬ್ಬರ ಸಂಪತ್ತಿನಲ್ಲಿ ಹೆಚ್ಚಿನ ವ್ಯತ್ಯಾಸವೇನೋ ಇಲ್ಲ. ಅಮೆಜಾನ್ ಶೇರುಗಳ ಬೆಲೆಯಲ್ಲಿ ಕೂಡಾ ಏರಿಕೆ ಕಂಡು ಬಂದಿರುವ ಕಾರಣ ಬೆಜೋಸ್ ಅವರ ನಿವ್ವಳ ಆಸ್ತಿಯ ಮೌಲ್ಯವು 180 ಬಿಲಿಯನ್ ಡಾಲರ್ ಗಳಿಗೆ ಏರಿಕೆಯಾಗಿದೆ. ಬ್ಲೂಂಬರ್ಗ್ ನ ಪ್ರಕಾರ ಮಂಗಳವಾರ ಯಾವ ಟಾಪ್ ಟೆನ್ ಉದ್ಯಮಿಗಳ ಸಂಪತ್ತು ಹೆಚ್ಚಾಯಿತೋ, ಅವರೆಲ್ಲರೂ ಕೂಡ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಪಟ್ಟವರು ಎನ್ನಲಾಗಿದೆ.

ಎಲೆನ್ ಮಸ್ಕ್ ಈಗಾಗಲೇ ಎರಡು ಬಾರಿ ತನ್ನ ಒಟ್ಟು ಸಂಪತ್ತಿನ ಗಳಿಕೆಯಲ್ಲಿ ಬೆಜೋಸ್ ಅವರನ್ನು ಹಿಂದಕ್ಕಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದರು. ಮೊದಲ ಸ್ಥಾನವನ್ನು ಪಡೆದರಾದರೂ ಅವರಿಗೆ ಹೆಚ್ಚು ದಿನಗಳವರೆಗೆ ನಂಬತ್ ಒನ್ ಆಗಿ ತಮ್ಮ ಸ್ಥಾನವನ್ನು ಕಾಪಾಡಿಕೊಳ್ಳುವುದು ಸಾಧ್ಯವಾಗಿರಲಿಲ್ಲ ಇದೇ ವರ್ಷದ ಆರಂಭದಲ್ಲಿ ಅಂದರೆ ಜನವರಿಯಲ್ಲಿ ಎಲೆನ್ ಮಸ್ಕ್ ಅವರ ಒಟ್ಟು ಸಂಪತ್ತಿನ ಮೌಲ್ಯ 210 ಬೆಲೆ ಡಾಲರ್ ಗಳಿಗೆ ಏರಿಕೆಯಾಗಿತ್ತು. ಅನಂತರದ ದಿನಗಳಲ್ಲಿ ಮಸ್ಕ್ ಅವರ ಕಂಪನಿಯ ಷೇರುಗಳ ಮೌಲ್ಯವು ಶೇಕಡಾ 20 ರಷ್ಟು ಕುಸಿದಿತ್ತು.

ಎಲೆನ್ ಮಸ್ಕ್ ಅವರ ನಿವ್ವಳ ಮೌಲ್ಯವು ಒಂದು ದಿನದಲ್ಲಿ 215.2 ಬಿಲಿಯನ್ ಕಡಿಮೆಯಾಗಿದೆ ಮತ್ತು ನೆಟ್ ವರ್ತ್ 183 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದೆ. ಇದು ಹೀಗೆ ಮುಂದುವರೆಯುವುದು ಎಂದು ಭವಿಷ್ಯ ನುಡಿಯುವುದು ಕೂಡಾ ಸಾಧ್ಯವಿಲ್ಲ.‌ಎಲೆನ್ ಮಸ್ಕ್ ಮುಂದೆ ಮತ್ತೊಮ್ಮೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ತನ್ನದಾಗಿಸಿಕೊಂಡರೂ ಆಶ್ಚರ್ಯ ಪಡಬೇಕಾಗಿಲ್ಲ. ಪ್ರಸ್ತುತ ಜೆಫ್ ಬೆಜೋಸ್ ಅವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದು, ಎಲೆನ್ ಮಸ್ಕ್ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ.