ಎಲ್ಲರ ಟ್ಯಾಲೆಂಟ್ ನೋಡಿಯಾದ ಮೇಲೆ, ಈ ಕಲ್ಲಂಗಡಿ ವ್ಯಾಪಾರಿಯ ಟ್ಯಾಲೆಂಟ್ ನೋಡದಿದ್ದರೆ ಹೇಗೆ? ಯಾವುದಕ್ಕೂ ಸ್ವಲ್ಪ ಕೂಲಾಗಿ ನೋಡಿ ಈ ವಿಡಿಯೋದಲ್ಲಿ…

ಒಬ್ಬೊಬ್ಬರ ಹತ್ತಿರ ಒಂದೊಂದು ವಿಶೇಷ ಟ್ಯಾಲೆಂಟ್ ಅಥವಾ ಗುಣಗಳಿರುತ್ತವೆಯಂತೆ; ನಿಸರ್ಗ ಏನಾದರೂ ಒಂದು ವಿಶೇಷತೆಯನ್ನು ಪ್ರತಿಯೊಂದು ಮನುಷ್ಯನಲ್ಲಿ ದಯಪಾಲಿಸಿದೆಯಂತೆ… ಕಡಲೆಕಾಯಿ ಮಾರಾಟ ಮಾಡುವ ವ್ಯಕ್ತಿಯೊಬ್ಬ ಕಚ್ಚಾ ಬಾದಾಮ್ ಹಾಡಿನ ಮೂಲಕ ಒಂದೇ ರಾತ್ರಿಯಲ್ಲಿ ವೈರಲ್ ಆಗಿ ಎಲ್ಲ ಕಡೆಗೂ ಸುದ್ದಿ ಮಾಡಿಕೊಂಡ. ಆ ಹಾಡಿನ ಕ್ರೇಜ್ ಇನ್ನು ಕಡಿಮೆಯಾಗಿಲ್ಲ. ಈಗ ಮತ್ತೊಬ್ಬ ಭೂಪ ಸೋಶಿಯಲ್ ಮೀಡಿಯಾದಲ್ಲಿ ಬಂದಿದ್ದಾನೆ. ಈತ ಕಲ್ಲಂಗಡಿ ಮಾರಾಟ ಮಾಡುತ್ತಿದ್ದಾನೆ.

ಇನ್ನು ನಿವೇನ್ನಬಹುದು ಕಲ್ಲಂಗಡಿ ಮಾರಾಟ ಮಾಡುತ್ತಿದ್ದಾನೆ ಇದರಲ್ಲೇನು ವಿಶೇಷ? ಆದರೆ ವಿಶೇಷತೆ ಇರುವದು ಇದರಲ್ಲಿಯೇ. ಕಾರಣ ಆ ರೀತಿ ಕಲ್ಲಂಗಡಿ ಮಾರಾಟ ಮಾಡುತ್ತಿದ್ದಾನೆ ಈತ.

ವಿಡಿಯೋದಲ್ಲಿ ಕಂಡು ಬರುವ ಹಾಗೆ ವ್ಯಾಪಾರಿ ಮಾರಾಟಕ್ಕಾಗಿ ತಳ್ಳುವ ಗಾಡಿಯ ಮೇಲೆ ತನ್ನ ಕಲ್ಲಂಗಡಿಯನ್ನು ಕೊಯ್ದದ್ದೆ ತಡ ಜೋರು ಜೋರಾಗಿ ಕಲ್ಲಂಗಡಿ ಹಣ್ಣಿನ ವಿಶೇಷತೆಯ ಬಗ್ಗೆ ಗಂಟಲು ಹರಿಯುವ ಹಾಗೆ ಚೀರಲು ಶುರು ಮಾಡುತ್ತಾನೆ. ಇದನ್ನು ಒಮ್ಮೆಲೆ ನೋಡಲು ಬೆಚ್ಚಿ ಬೀಳುವ ತರ ಅನುಭವ ಆಗುತ್ತದೆ. ಇದೇ ಸಂದರ್ಭದಲ್ಲಿ ವಿಡಿಯೋದಲ್ಲಿ ಪುಟ್ಟ ಮಗು ಆತನ ಶಬ್ದ ಕೇಳಿ ಬೆಚ್ಚಿ ಬಿದ್ದು ಹೆದರಿಕೊಂಡು ಒಮ್ಮೆಲೆ ರೋದಿಸಲು ಶುರು ಮಾಡುವ ದೃಶ್ಯವನ್ನು ಎಡಿಟಿಂಗ್ ಮಾಡಿದ್ದಾರೆ. ಇದರಿಂದ ನೋಡುವ ವಿಡಿಯೋ ಮತ್ತಷ್ಟು ತಮಾಷೆಯಾಗಿದ್ದರಿಂದ ನಕ್ಕು ನಕ್ಕು ಹೊಟ್ಟೆ ನೋಯುತ್ತದೆ. ಮಾರಾಟ ಮಾಡುವಾಗ ಆತನ ಮುಖ ಮತ್ತು ಕಣ್ಣುಗಳ ಎಕ್ಸ್ಪ್ರೇಶನ್ ನೋಡುತ್ತಿರುವಾಗ ಮತ್ತಷ್ಟು ನಗು ತಡೆಯುವದಾಗುವಾದಿಲ್ಲ.

ವಿಡಿಯೋ ನೋಡಿ

 

View this post on Instagram

 

A post shared by GiDDa CoMpAnY (@giedde)

ಪ್ರಸ್ತುತ ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಈತನ ಮಾರಾಟ ಮಾಡುವ ಟ್ಯಾಲೆಂಟ್ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ. ಆದ್ದರಿಂದಲೇ ಈ ವೀಡಿಯೊವನ್ನು ತುಂಬಾ ಜನರು ನೋಡುವುದರ ಜೊತೆಗೆ ಸಾವಿರಾರು ಜನರು ಲೈಕ್ ಮಾಡಿದ್ದಾರೆ.