ಎಲ್ಲರ ಮುಂದೆಯೇ ಅಕ್ಕನ ಗಂಡನ ಜೊತೆ ಮಾಡಬಾರದ ಚೇಷ್ಟೆ ಮಾಡಿದ ತಂಗಿ: ನಾಚಿಕೆಯಿಂದ ಕೆಂಪಾದ ಮದು ಮಗ! Viral Video
ಮದುವೆಯಲ್ಲಿ ವಧು-ವರರ ನಂತರ ಹೆಚ್ಚು ಚರ್ಚೆಯಾಗುವ ವ್ಯಕ್ತಿಯೆಂದರೆ ವಧುವಿನ ಸಹೋದರಿ. ಈಕೆ ಮದುವೆಯ ಸಮಾರಂಭದಲ್ಲಿ ತನ್ನ ಮಾವನಿಗೆ ಕುಚೇಷ್ಟೆ ಮಾಡುವ ಒಂದು ಅವಕಾಶವನ್ನು ಸಹ ಬಿಡುವುದಿಲ್ಲ. ಸದ್ಯ ಇಂತಹದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ವರನ ನಾದಿನಿ ಕಲ್ಯಾಣ ಮಂಟಪದಲ್ಲಿ ಎಲ್ಲರ ಮುಂದೆ ಒಂದು ತುಂಟಾಟ ಮಾಡಿದಾಗ ವರನ ಮುಖ ನಾಚಿಕೆಯಿಂದ ತಗ್ಗಿತು.
ನಾದಿನಿ ಮತ್ತು ಮಾವನ ಈ ವಿಡಿಯೋ ತುಂಬಾ ಚರ್ಚೆಯಲ್ಲಿದೆ. ಇದರಲ್ಲಿ ನಾದಿನಿ ತಮಾಷೆಯಲ್ಲಿ ತನ್ನ ಮಾವನ ಜೊತೆಗೆ ಮಾಡಿದ ತುಂಟಾಟ ನೋಡಿ ಎಲ್ಲರು ನಕ್ಕಿದ್ದಾರೆ.
ವಿಡಿಯೋ ನೋಡಿ
ನಾದಿನಿ ತನ್ನ ಮಾವನ ಜೊತೆಗೆ ಸ್ವಲ್ಪ ಹೆಚ್ಚಿಗೆ ತಮಾಷೆ ಮಾಡಿದ್ದಾಳೆ. ವಿಡಿಯೋದಲ್ಲಿ ವರನ ಮುಂದೆ ಆತನ ನಾದಿನಿ ನಿಂತಿದ್ದಾಳೆ. ಅವರ ಮುಂದೆ ಒಂದು ಮಿಠಾಯಿ ಪ್ಲೇಟ್ ಬರುತ್ತೆ. ನಾದಿನಿ ಅದರಲ್ಲಿದ್ದ ಒಂದು ಮಿಠಾಯಿಯ ತುಣುಕು ತೆಗೆದುಕೊಂಡು ಮಾವನ ಬಾಯಿಯಲ್ಲಿ ಹಾಕಲು ಮುಂದಾಗುತ್ತಾಳೆ. ವರ ನಾದಿನಿ ನೀಡುವ ಮಿಠಾಯಿ ತಿನ್ನುವ ಸಲುವಾಗಿ ಬಾಯಿ ತೆರೆಯುತ್ತಲೇ ನಾದಿನಿಯು ಆ ಮಿಠಾಯಿಯನ್ನು ಮಾವನ ಬಾಯಿಗೆ ಹಾಕದೆ ತನ್ನ ಬಾಯಿಯಲ್ಲಿ ಹಾಕಿಕೊಳ್ಳುತ್ತಾಳೆ. ನಾದಿನಿ ಕೈಯಿಂದ ಮಿಠಾಯಿ ತಿನ್ನುವ ಆಸೆಯಿಂದ ತೆರೆದ ವರನ ಬಾಯಿ ಸಂಕೋಚದಿಂದ ಹಾಗೆಯೇ ಮುಚ್ಚಿಕೊಳ್ಳುತ್ತದೆ. ಆ ಸಂದರ್ಭದಲ್ಲಿ ವರನ ಮುಖ ನೋಡುವಂತಿತ್ತು. ತುಂಬಿದ ಕಲ್ಯಾಣಮಂಟಪದಲ್ಲಿ ನಾದಿನಿ ತನ್ನ ಜೊತೆಗೆ ಮಾಡಿದ ತುಂಟಾಟದಿಂದ ವರನ ಮುಖ ನಾಚಿಕೆಯಿಂದ ಕೆಂಪಾಗಿದೆ. ತನ್ನ ಪ್ರೀತಿಯ ನಾದಿನಿಯ ಈ ತುಂಟಾಟ ನೋಡಿ ವರನಿಗೂ ಸಹ ನಗು ಬರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.