ಏಕಕಾಲಕ್ಕೆ 10 ಬೀಯರ್ ಕುಡಿದು 18 ಗಂಟೆಗಳ ಕಾಲ ಮೂತ್ರ ಹಿಡಿದಿಟ್ಟುಕೊಂಡ! ಆಮೇಲೆ ಡಾಕ್ಟರ್ ತಪಾಸಣೆ ಮಾಡಿದಾಗ….
ಬಿಯರ್ ಕುಡಿಯುವ ಹವ್ಯಾಸವಿದ್ದವರಿಗೆ ಗೊತ್ತು, ಬಿಯರ್ ಕುಡಿದ ನಂತರ ಪದೇ ಪದೇ ಮೂತ್ರ ವಿಸರ್ಜನೆ ಮಾಡಲು ಹೋಗಬೇಕಾಗುವದು. ನೀವು ಎಷ್ಟು ಹೆಚ್ಚು ಬಿಯರ್ ಕುಡಿಯುವಿರಿ ಅಷ್ಟು ಸಲ ಮೂತ್ರಕ್ಕೆ ಹೋಗಬೇಕಾಗುವ ಸಂಭವ ಬರುತ್ತವೆ. ಏಕೆಂದರೆ ಮೂತ್ರ ತಡೆಗಟ್ಟುವದು ನಮ್ಮ ಶರೀರಕ್ಕೆ ತುಂಬಾ ಆಘಾತಕಾರಿಯಾಗಿರುತ್ತದೆ. ಇಂತಹ ಒಂದು ಆಶ್ಚರ್ಯ ಗೊಳಿಸುವ ಘಟನೆ ಚೀನಾದಲ್ಲಿ ಬೆಳಕಿಗೆ ಬಂದಿದೆ.
ದೊರೆತ ಮಾಹಿತಿಯ ಅನುಸಾರ, ಚೀನಾದ ಒಬ್ಬ ವ್ಯಕ್ತಿ ಒಂದೊಂದಾಗಿ ಹೀಗೆ 10 ಬಿಯರ್ ಕುಡಿದನು ಅಲ್ಲದೆ ಸುಮಾರು 18 ಗಂಟೆಗಳವರೆಗೆ ಅವನು ಮೂತ್ರ ವಿಸರ್ಜನೆ ಮಾಡದೆ ಹಾಗೆ ತಡೆದುಕೊಂಡನು. ಅದರ ಪರಿಣಾಮ ಆಗಿದ್ದೇನೆಂದರೆ, ಆ ವ್ಯಕ್ತಿಯ ಮೂತ್ರಾಶಯದ ಚೀಲ ಶರೀರದಲ್ಲೇ ಒಡೆಯಿತು. ಆದುದರಿಂದ ಆತನಿಗೆ ಪ್ರಚಂಡ ವೇದನೆಯನ್ನು ಸಹಿಸಿಕೊಳ್ಳಬೇಕಾಯಿತು. ಮೂತ್ರಾಶಯದ ಚೀಲ ಒಡೆದದ್ದರಿಂದ ಅಸಹ್ಯವಾದ ನೋವಾಗಲು ಶುರುವಾಯಿತು. ಈ ಪೀಡಿತ ವ್ಯಕ್ತಿಯನ್ನು ‘ಹೂ’ ಹೆಸರಿನಿಂದ ಗುರುತಿಸಲಾಗಿದೆ. ಈ ವ್ಯಕ್ತಿಯನ್ನು ಚೀನಾದ ಪೂರ್ವ ಪ್ರಾಂತದ ಝೇಜಿಯಾಂಗ್ ನಲ್ಲಿ ಝುಜಿ ಪೀಪಲ್ಸ್ ಹಾಸ್ಪಿಟಲ್ ನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಒಂದರ ನಂತರ ಒಂದು ಹೀಗೆ ಸತತವಾಗಿ ಒಟ್ಟು 10 ಬಿಯರ್ ಕುಡಿದ, ಅಲ್ಲದೆ 18 ಗಂಟೆಗಳ ವರೆಗೆ ಮೂತ್ರ ತಡೆಹಿಡಿದ ಕಾರಣ ಆತನ ಹೊಟ್ಟೆಯಲ್ಲಿಯ ಮೂತ್ರಾಶಯದ ಚೀಲ ಒಡೆದೋಯಿತು. ಯೂರೋಲಾಜಿ ಡಿಪಾರ್ಟ್ಮೆಂಟ್ ನಲ್ಲಿ ಈ ಪೀಡಿತ ವ್ಯಕ್ತಿಯ ಸ್ಕ್ಯಾನ್ ಮಾಡಲಾಯಿತು. ಅದರಲ್ಲಿ ಈ ಪೀಡಿತನು ಮೂತ್ರ ತಡೆ ಹಿಡಿದಕ್ಕಾಗಿ ಆತನ ಶರೀರದಲ್ಲಿಯ ಮೂರು ಅವಯವಗಳ ಮೇಲೆ ಒತ್ತಡ ಹೆಚ್ಚಾಗಿ ಮೂತ್ರಾಶಯ ಒಡೆದೋಯಿತು. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ತಕ್ಷಣ ಆತನ ಮೇಲೆ ಉಪಚಾರ ಮಾಡಲಾಯಿತು.
ಆಸ್ಪತ್ರೆಯಲ್ಲಿಯ ವೈದ್ಯರು ಈ ವ್ಯಕ್ತಿಯ ಮೇಲೆ ನಡೆಸಿದ ಚಿಕಿತ್ಸೆಗೆ ಯಶಸ್ಸು ದೊರೆಯಿತು. ಶರೀರದಲ್ಲಿಯ ಮೂತ್ರಾಶಯದ ಚೀಲದ ಮೇಲೆ ಉಪಚಾರ ಮಾಡಿದರಿಂದ ಸದ್ಯಕ್ಕೆ ಈ ರೋಗಿಯ ಆರೋಗ್ಯ ಸ್ಥಿರವಾಗಿದೆ. ಇದು ಬಹಳ ಅಪರೂಪದ ಘಟನೆಯಾಗಿದೆ, ಯಾವಾಗ ವ್ಯಕ್ತಿ ತನ್ನ ಮೂತ್ರವನ್ನು ತಡೆ ಹಿಡಿಯಲು ಅಥವಾ ನಿಯಂತ್ರಣ ದಲ್ಲಿಡಲು ಪ್ರಯತ್ನ ಮಾಡುತ್ತಾನೋ ಆಗ ಈ ಪ್ರಕಾರದ ಘಟನೆ ಸಂಭವಿಸುವದು. ಮಾನವನ ಮೂತ್ರಾಶಯ ದ್ರವಪದಾರ್ಥದ ಆವರಣ ಅತ್ಯಂತ ಮೃದುವಾಗಿರುತ್ತದೆ ಮತ್ತು ಅದರಲ್ಲಿ ಸುಮಾರು 350 ರಿಂದ 500 ಮೀಲಿ ಲೀಟರ್ ನಷ್ಟು ಸಂಗ್ರಹಿಸಿಡುವ ಸಾಮರ್ಥ್ಯ ಹೊಂದಿರುತ್ತದೆ ಎಂದು ಡಾಕ್ಟರ್ ಹೇಳಿದ್ದಾರೆ