ಏಡಿಯನ್ನು ಬೇಟೆಯಾಡಲು ಸಾಗರದಿಂದ ತೀರಕ್ಕೆ ಬಂದ ವಿಶೇಷ ಜಾತಿಯ ಮೀನು: ವೀಡಿಯೋ ನೋಡಿ ಅಚ್ಚರಿ ಪಟ್ಟ ನೆಟ್ಟಿಗರು
ನಮ್ಮ ಪ್ರಕೃತಿಯು ಒಂದು ವಿಸ್ಮಯಗಳ ತಾಣ. ಇಲ್ಲಿ ಅದೆಷ್ಟೋ ಜೀವ ವೈವಿಧ್ಯತೆಯನ್ನು ನಾವು ನೋಡಬಹುದಾಗಿದೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋದಂತೆ ಜೀವ ವೈವಿಧ್ಯದಲ್ಲಿ ಕಂಡುಬರುವ ಭಿನ್ನತೆಯನ್ನು ಗಮನಿಸಿದಾಗ ಪ್ರಕೃತಿಯಲ್ಲಿ ಎಂತಹ ಅದ್ಭುತಗಳು ಅಡಗಿದೆ ಎಂಬುದು ಅನಾವರಣಗೊಳ್ಳುತ್ತಾ ಸಾಗುತ್ತದೆ. ನಮ್ಮ ಪ್ರಕೃತಿಯ ವಿಸ್ಮಯಗಳು ಮಾತ್ರ ಕೊನೆಯಾಗುವುದೇ ಇಲ್ಲ. ಆದರೆ ಅನೇಕ ಜನರಿಗೆ ವೈವಿದ್ಯಮಯವಾದಂತಹ ಜೀವಿಗಳನ್ನು, ಪ್ರಕೃತಿಯ ರಮಣೀಯತೆಯನ್ನು ಕಣ್ಣಾರೆ ನೋಡುವಂತಹ ಅವಕಾಶಗಳು ಸಿಗುವುದಿಲ್ಲ. ಆದರೆ ಸೋಶಿಯಲ್ ಮೀಡಿಯಾಗಳ ನೆರವಿನಿಂದಾಗಿ ಇಂದು ನಾವು ವೈವಿಧ್ಯಮಯ ಹಾಗೂ ಅದ್ಭುತವೆನಿಸುವ ಜೀವಿಗಳನ್ನು ವಿಡಿಯೋಗಳ ಮೂಲಕವಾದರೂ ನೋಡುವ ಅವಕಾಶ ಪಡೆದುಕೊಂಡಿದ್ದೇವೆ ಹಾಗೂ ಅದರ ಸವಿಯನ್ನು ಕೂಡಾ ಅನುಭವಿಸುತ್ತಿದ್ದೇವೆ ಎಂಬುದು ನಿಜ.
ಇಂತಹ ಅಪರೂಪ ಎನಿಸುವ ಜೀವಿಗಳ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗುತ್ತದೆ. ಚಿತ್ರ-ವಿಚಿತ್ರ ಎನಿಸುವ ಈ ಜೀವಿಗಳ ಜೀವನ ಹಾಗೂ ಅವುಗಳ ವರ್ತನೆ, ಚಟುವಟಿಕೆಗಳನ್ನು ನೋಡಿದಾಗ ಒಂದು ಕ್ಷಣ ರೋಮಾಂಚನ ಎನಿಸುತ್ತದೆ. ಪ್ರಾಣಿ ಪ್ರಿಯರಿಗಂತೂ ಈ ವಿಡಿಯೋಗಳು ಹೊಸ ಲೋಕದಲ್ಲಿ ತೇಲುವಂತೆ ಮಾಡುತ್ತವೆ. ನಮಗೆ ಇಂತಹ ವಿಡಿಯೋಗಳು ದೊಡ್ಡ ಸಂಖ್ಯೆಯಲ್ಲಿ ನೋಡಲು ಸಿಗುತ್ತದೆಯಾದರೂ ಕೂಡಾ ಕೆಲವು ವೀಡಿಯೋಗಳು ಮಾತ್ರ ಗಮನ ಸೆಳೆಯುವಲ್ಲಿ ಯಶಸ್ವಿ ಆಗುತ್ತದೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಅಂತಹ ಒಂದು ವಿಡಿಯೋ ವೈರಲ್ ಆಗಿದೆ. ಇದರಲ್ಲಿ ನಾವು ಒಂದು ವಿಶೇಷ ಜಾತಿಯ ಮೀನನ್ನು ನೋಡಲು ಹಾಗೂ ಅದು ಹೇಗೆ ಬೇ ಟೆಯಾಡುತ್ತದೆ ಎಂಬುದನ್ನು ಕೂಡಾ ಗಮನಿಸಲು ಸಾಧ್ಯವಿದೆ.
ವೈರಲ್ ವಿಡಿಯೋದಲ್ಲಿ. ದೃಶ್ಯವನ್ನು ನೋಡಿದಾಗ ಅದರಲ್ಲಿ ಸಮುದ್ರದಿಂದ ಈಲ್ ಜಾತಿಯ ಮೀನೊಂದು ಈಜುತ್ತಾ ಸಾಗರತೀರದ ಬಂಡೆಗಳ ಬಳಿ ಬರುತ್ತದೆ. ಈ ಮೀನನ್ನು ನೋಡಿದ ತಕ್ಷಣ ಬಹುಶಃ ಅದೊಂದು ಹಾವು ಎಂದು ಅನೇಕರು ಭ್ರಮಿಸುತ್ತಾರೆ. ಆದರೆ ವಾಸ್ತವವಾಗಿ ಅದೊಂದು ಹಾವಲ್ಲ ಬದಲಿಗೆ ಅದೊಂದು ವಿಶೇಷ ಜಾತಿಯ ಮೀನು. ಈಲ್ ಸಾಗರದ ತೀರದ ಬಂಡೆಗಳ ಮೇಲೆ ಹಾವಿನಂತೆಯೇ ಹರಿದುಕೊಂಡು ಬಂದು ತನ್ನ ಆಹಾರವನ್ನು ಹುಡುಕುತ್ತದೆ. ಹಾಗೇ ಹುಡುಕುತ್ತಾ ಅದು ಬಹಳ ನಿಖರವಾಗಿ ಅಲ್ಲೇ ಬಂಡೆಗಳ ನಡುವೆ ಏಡಿಯು ಇರುವ ಜಾಗವನ್ನು ಗುರುತಿಸುತ್ತದೆ.
ತನ್ನ ಆಹಾರ ಇರುವ ಜಾಗ ಗೊತ್ತಾದ ಕೂಡಲೇ ಮೀನು ತಡಮಾಡದೆ ಬೇ ಟೆಯಾಡಲು ಹೋಗುತ್ತದೆ. ಬಂಡೆಗಳ ನಡುವೆ ಏಡಿಯನ್ನು ಹಿಡಿಯಲು ನುಗ್ಗುತ್ತದೆ. ಆಗ ಬಂಡೆಗಳ ಕಿರಿದಾದ ಸಂದಿನಿಂದ ಏಡಿಯು ಚಂಗನೆ ನೆಗೆಯುತ್ತಾ ಹೊರಗಡೆ ಬರುವುದನ್ನು ಕೂಡ ನಾವು ನೋಡಬಹುದಾಗಿದೆ. ಒಟ್ಟಾರೆ ಒಂದು ಮೀನು ತನ್ನ ಆಹಾರವನ್ನು ಬೇ ಟೆ ಯಾಡಲು ಹೀಗೆ ಸಾಗರದ ತೀರದ ಬಂಡೆಗಳ ಬಳಿಗೆ ಬರುವುದು, ಏಡಿಯನ್ನು ಬೇ ಟೆಯಾಡುವುದು ನೋಡುವುದಕ್ಕೆ ಬಹಳ ವಿಶೇಷ ಎನಿಸುತ್ತದೆ. ವೈರಲ್ ಆಗಿರುವ ಈ ವಿಡಿಯೋವನ್ನು ಈಗಾಗಲೇ 13 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.
ವಿಡಿಯೋ ನೋಡಿ
ವಿಡಿಯೋ ನೋಡಿದವರು ಕೂಡಾ ಮೆಚ್ಚುಗೆಯ ಪ್ರತಿಕ್ರಿಯೆಗಳನ್ನು ನೀಡಿದ್ದು, ಈ ಮೀನು ತಾವು ನೋಡಿರುವ ಈಲ್ ಮೀನಿಗಿಂತ ಗಾತ್ರದಲ್ಲಿ ದೊಡ್ಡದಾಗಿದೆ ಎಂದಿದ್ದಾರೆ. ಇನ್ನು ಕೆಲವರು ವಿಡಿಯೋ ಬಹಳ ರೋಚಕವಾಗಿದೆ ಎಂದು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೆ ಕೆಲವರು ಮೀನು ತನ್ನ ಸುತ್ತಮುತ್ತಲ ಪರಿಸರದ ಬಗ್ಗೆ ಚೆನ್ನಾಗಿ ಅರಿತಿದೆ. ಅಲ್ಲದೇ ಅದು ಏಡಿಗಳು ಎಲ್ಲಿ ವಾಸಿಸುತ್ತವೆ ಎಂಬುದನ್ನು ಕೂಡ ಬಹಳ ಚೆನ್ನಾಗಿ ಗಮನಿಸಿದೆ ಎಂದು ಈಲ್ ಮೀನಿನ ಚಾಕಚಕ್ಯತೆಯನ್ನ ಹಾಡಿ ಹೊಗಳಿದ್ದಾರೆ.