ಏಳೇಳು ಜನ್ಮ ಜೊತೆಯಾಗಿರುವ ಕನಸು ಕಂಡಿದ್ದರು ಆದರೆ ವಿಧಿಯಾಟವೇ ಬೇರೆಯಾಗಿತ್ತು!
ರಾಜಾಸ್ಥಾನದಲ್ಲಿಯ ಜೈಸಲ್ಮೇರ್ ಜಿಲ್ಲೆಯ ರಾಮ್ ದೇವರಾ ಊರಲ್ಲಿ ದುಃಖದ ಘಟನೆಯೊಂದು ವರದಿಯಾಗಿದೆ. 6 ತಿಂಗಳು ಹಿಂದೆ ಮದುವೆಯ ಬಂಧಕ್ಕೆ ಸಿಲುಕಿಕೊಂಡು ಗಂಡನ ಜೊತೆಗೆ ಸುಖವಾಗಿ ಸಂಸಾರ ಮಾಡುವ ಕನಸನ್ನು ಇಟ್ಟುಕೊಂಡು ಮಧು ದೇವಿಯು ತನ್ನ ಗಂಡನ ಮನೆಯ ಊರಾದ ಬಿರಮದೇವರಾಗೆ ಬಂದಿದ್ದರು. ಅವಳು ಮತ್ತು ಅವಳ ಪತಿ ಏಳು ಜನ್ಮಗಳಿಗಾಗಿ ಒಟ್ಟಿಗೆ ಬಾಳುವದು ಮತ್ತು ಪರಸ್ಪರರ ಸಂತೋಷ ಮತ್ತು ದುಃಖಗಳಲ್ಲಿ ಪಾಲ್ಗೊಳ್ಳಬೇಕೆಂದು ಕನಸು ಕಂಡಿದ್ದರು. ಲಾಕ್ಡೌನ್ ದಿಂದಾಗಿ ಬಿರಾಮದೇವ ಊರಿನಲ್ಲಿ ಆಕೆಯ ಪತಿ ಬಾವಿಯ ಕೆಲಸ ಮಾಡುತ್ತಿದ್ದರು. ಎಲ್ಲವೂ ಸುಖ ಸಂತೋಷದಿಂದ ನಡೆದಿತ್ತು. ಅಷ್ಟೇ ಅಲ್ಲ ಈ ವರ್ಷ ತಮ್ಮ ಹೊಲದಲ್ಲಿ ಉತ್ತಮವಾದ ಫಸಲು ತಗೆದುಕೊಳ್ಳುವ ಸಲುವಾಗಿ ಪತಿ-ಪತ್ನಿ ಇಬ್ಬರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಅವರ ಪರಿಶ್ರಮದಿಂದಾಗಿ ಹೊಲದಲ್ಲಿ ಸಹ ಉತ್ತಮವಾದ ಬೆಳೆಯು ಸಹ ಬಂದಿತ್ತು.
ಬುಧವಾರ ಮುಂಜಾನೆಯ ಸಮಯದಲ್ಲಿ ತನ್ನ ಹೊಲದ ಮನೆಯಲ್ಲಿ ಪತ್ನಿ ತನ್ನ ಪತಿ ಹಾಗೂ ಮೈದುನನ ಸಲುವಾಗಿ ಚಹಾ ತಯಾರಿಸುತ್ತಿದ್ದಳು. ಅದೇ ಸಮಯದಲ್ಲಿ ಹೊಲದ ದಂಡೆಯಲ್ಲಿ ಕರೆಂಟ್ ಕಟ್ ಆಗಿ ವಾಯರ್ ಕಡಿದು ಕೆಳಗೆ ಬಿದ್ದಿದ್ದರಿಂದ ಒದ್ದೆಯಾದ ಹೊಲದಲ್ಲಿ ಕರೆಂಟ್ ವ್ಯಾಪಿಸಿದ್ದದ್ದು ಅಲ್ಲಿಯೇ ಕೆಲಸ ಮಾಡುತ್ತಿದ್ದ ಅವರ ಮೈದುನನಿಗೆ ಗೊತ್ತೇ ಆಗಿಲ್ಲ. ಹೀಗಾಗಿ ಆತನಿಗೆ ಕರೆಂಟ್ ತಗಲಿ ಒದ್ದಾಡಲು ಪ್ರಾರಂಭಿಸಿದಾಗ ಅದನ್ನು ನೋಡಿದ ಗಂಡ ಮತ್ತು ಹೆಂಡತಿ ಇಬ್ಬರು ಆತನನ್ನು ರಕ್ಷಿಸಲು ಅಲ್ಲಿಗೆ ಓಡಿ ಹೋದರು. ಏನನ್ನೂ ಯೋಚಿಸದೆ ಯಾವುದೇ ವಿಚಾರ ಮಾಡದೆ ಒದ್ದಾಡುತ್ತಿದ್ದ ಆತನನ್ನು ಕೈ ಹಿಡಿದು ಎಳೆಯುವ ಪ್ರಯತ್ನ ಮಾಡಿದ, ಆಗ ಆಕೆಯ ಪತಿ ಇಂದ್ರ ರಾಮ ಅವನಿಗೂ ಸಹಿತ ಕರೆಂಟ್ ತಗುಲಿತು. ಪತಿ ಒದ್ದಾಡುವದನ್ನು ನೋಡಿ ಪತ್ನಿಯೂ ಸಹಿತ ಆತನನ್ನು ಉಳಿಸಲು ಮುಂದಾದಳು, ಆಗ ಅವಳಿಗೂ ಕರೆಂಟ್ ತಗಲಿ ಮೂವರು ಕರೆಂಟ್ ಅಂಟಿಕೊಂಡು ಒದ್ದಾಡತೊಡಗಿದರು.

ಸುತ್ತಮುತ್ತ ಯಾರೂ ಇರದ ಕಾರಣ ಇಂಥ ದೊಡ್ಡ ದು’ರ್ಘಟನೆ ನಡೆದದ್ದು ಯಾರಿಗೂ ಗೊತ್ತೇ ಆಗಿಲ್ಲ. ಒಲೆಯ ಮೇಲೆ ಇಟ್ಟಿದ್ದ ಚಹಾ ಹಾಗೆಯೇ ಸುತ್ತು ಕರಕಲಾಯ್ತು. ಕೊನೆಗೆ ರಾತ್ರಿಯ ಸಮಯದಲ್ಲಿ ಒಬ್ಬಳು ಮಹಿಳೆ ಅದೇ ಹೊಲದಲ್ಲಿ ಹಾಯ್ದು ಹೋಗುತ್ತಿರುವಾಗ ಈ ಘಟನೆ ನೋಡಿ ಎಲ್ಲರಿಗೂ ತಿಳಿಸಿದಳು. ಈ ಘಟನೆ ನಡೆದು ಸುಮಾರು 15 ಗಂಟೆಗಳ ನಂತರ ಈ ವಿಷಯ ಅಲ್ಲಿನ ಊರಿನ ಜನರಿಗೆ ತಿಳಿದಿದೆ. ಆಗ ಅಲ್ಲಿದ್ದ ಸ್ಥಳೀಯರು ಪೊಲೀಸರಿಗೆ ವರದಿ ಮುಟ್ಟಿಸಿದಾಗ ಪೊಲೀಸರು ಬಂದು ದೇ’ಹ’ಗಳನ್ನು ಪೋ’ಸ್ಟ್ ಮಾರ್ಟ’ಮ್ ಗೆ ಕಳುಹಿಸಿದರು. ಕಳೆದ ಆರು ತಿಂಗಳಿಂದ ಖುಷಿಯಿಂದ ಜೀವನ ನಡೆಸುತ್ತಿದ್ದ ಈ ಪರಿವಾರ ಕೇವಲ ಒಂದೇ ಒಂದು ದುರ್ಘಟನೆಯಿಂದ ಕ್ಷಣದಲ್ಲಿ ನಾಶವಾಗಿ ಹೋಯಿತು. ಈ ಘಟನೆ ಪತ್ನಿಯ ತವರುಮನೆಯವರಿಗೆ ಸಹ ತಿಳಿಸಿದರು. ಆಗ ಅವರು ಬಂದು ತನ್ನ ಮಗಳ ಕುಟುಂಬದ ಘಟನೆ ಕಂಡು ಗೋಳೋ ಎಂದು ಅತ್ತು ಬಿಟ್ಟರು.
ಮಿತ್ರರೇ, ಯಾರೇ ಎಲ್ಲೇ ಇರಲಿ ತಮ್ಮ ಕೆಲಸದಲ್ಲಿ ಕಾಳಜಿ ವಹಿಸಿ. ಕಾರಣ ಒಂದು ಚಿಕ್ಕ ತಪ್ಪು ಸಹ ದೊಡ್ಡ ದುರಂತಕ್ಕೆ ನಾಂದಿಯಾಗಬಹುದು. ಸ್ವಲ್ಪ ಸಂಯಮದಿಂದ ವಿಚಾರಮಾಡಿ ಏನಾಗುತ್ತಿದೆ ಎಂಬುದರ ಅಂದಾಜು ಕಟ್ಟಿ ಒಂದಾದ ಬೆತ್ತದಿಂದ ಅಥವಾ ಕಟ್ಟಿಗೆಯಿಂದ ದೂರ ಚಿಮ್ಮಿದರೆ ಆಗುವ ಅ’ನಾಹುತ ತಪ್ಪಿಸಬಹುದಾಗಿತ್ತು.