ಐಪಿಎಲ್ 2021: ಫೈನಲ್ ನಂತರ ತಂಡ ಮತ್ತು ಆಟಗಾರರ ಮೇಲೆ ಸುರಿಯುತ್ತಿದೆ ಹಣದ ಮಳೆ, ಅಬ್ಬಾ! ಇಷ್ಟೊಂದಾ? ಪ್ರಶಸ್ತಿ ವಿಜೇತರ ಬಹುಮಾನದ ಮೊತ್ತ!
ದುಬೈ : ಇಂಡಿಯನ್ ಪ್ರೀಮಿಯರ್ ಲೀಗ್ 2021 ಸೀಜನ್ ಶುಕ್ರವಾರ (ಅಕ್ಟೋಬರ್ 15) ದಸರಾ ಹಬ್ಬದ ಮುಹೂರ್ತದಂದು ಕೊನೆಗೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವೆ ಅಂತಿಮ ಪಂದ್ಯ ನಡೆಯಿತು. ಚೆನ್ನೈ ಸೂಪರ್ ಕಿಂಗ್ಸ್ ಈ ಪಂದ್ಯವನ್ನು 27 ರನ್ಗಳಿಂದ ಗೆದ್ದು ಐಪಿಎಲ್ ನಾಲ್ಕನೇ ಬಾರಿ ಟ್ರೋಪಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಪ್ರಶಸ್ತಿ ವಿಜೇತ ತಂಡಗಳಿಗೆ ಮತ್ತು ಆಟಗಾರರಿಗೆ ದೊಡ್ಡ ಬಹುಮಾನದ ಹಣವನ್ನು ಸಹ ನೀಡಲಾಯಿತು.
ಅಂತಿಮ ಪಂದ್ಯದಲ್ಲಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಅತ್ಯುನ್ನತ ಬಹುಮಾನ 20 ಕೋಟಿ ರೂ ಮತ್ತು ರನ್ನರ್ಸ್ ಅಪ್ ಕೋಲ್ಕತ್ತಾ ನೈಟ್ ರೈಡರ್ಸ್ 12.5 ಕೋಟಿ ರೂ.ಗಳ ಬಹುಮಾನ ಮೊತ್ತವನ್ನು ನೀಡಲಾಗಿದೆ. ಪ್ಲೇಆಫ್‌ನಲ್ಲಿ ಸ್ಥಾನ ಪಡೆದ ಇತರ ಎರಡು ತಂಡಗಳೆಂದರೆ ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಎರಡು ತಂಡಗಳಿಗೆ ತಲಾ 8.75 ಕೋಟಿ ಬಹುಮಾನದ ಮೊತ್ತ ನೀಡಲಾಗಿದೆ.

ಇದರ ಹೊರತಾಗಿ, ಅನೇಕ ಆಟಗಾರರು ಈ ವರ್ಷ ವಿವಿಧ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಹಾಗಾಗಿ ಅವರಿಗೆ ಬಹುಮಾನದ ರೂಪದಲ್ಲಿ ದೊಡ್ಡ ಮೊತ್ತವನ್ನು ನೀಡಲಾಗಿದೆ. ಈ ವರ್ಷ ಪುರಸ್ಕಾರ ವಿಜೇತರು ಪಡೆದ ಬಹುಮಾನದ ಮೊತ್ತ ಈ ಕೆಳಗಿನಂತೆ ಇದೆ.
ಐಪಿಎಲ್ 2021 ಪ್ರಶಸ್ತಿಗಳು…
ಟ್ರೋಫಿ ವಿನ್ನರ್– ಚೈನ್ನೈ ಸೂಪರ್ ಕಿಂಗ್ಸ್- 20 ಕೋಟಿ ರೂಪಾಯಿ.
ರನ್ನರ್ಸ್ ಅಪ್– ಕೋಲಕತ್ತ ನೈಟ್ ರೈಡರ್ಸ್ -12.5 ಕೋಟಿ ರೂಪಾಯಿಗಳು.
ಕ್ವಾಲೀಫಾಯರ್ 2 ರಲ್ಲಿ ಸೋತ ತಂಡ- ದಿಲ್ಲಿ ಕ್ಯಾಪಿಟಲ್ಸ್- 8.75 ಕೋಟಿ ರೂಪಾಯಿ.
ಎಲಿಮಿನೇಟರ್ ನಲ್ಲಿ ಸೋತ ತಂಡ– ರಾಯಲ್ ಚಾಲೆಂಜರ್ಸ್ ಬೆಂಗಳೂರು- 8.75 ಕೋಟಿ ರೂಪಾಯಿ.
ಅಂತಿಮ ಪಂದ್ಯದ ಪಂದ್ಯ ಪುರುಷ – ಫಾಫ್ ಡು ಪ್ಲೆಸಿಸ್, ಚೆನ್ನೈ ಸೂಪರ್ ಕಿಂಗ್ಸ್ – 5 ಲಕ್ಷ ರೂ.
ಆರೆಂಜ್ ಕ್ಯಾಪ್ – ಋತುರಾಜ್ ಗಾಯಕ್ವಾಡ್ (635 ರನ್), ಚೆನ್ನೈ ಸೂಪರ್ ಕಿಂಗ್ಸ್ – 10 ಲಕ್ಷ ರೂ.
ಪರ್ಪಲ್ ಕ್ಯಾಪ್ – ಹರ್ಷಲ್ ಪಟೇಲ್ (32 ವಿಕೆಟ್), ರಾಯಲ್ ಚಾಲೆಂಜರ್ಸ್ ಬೆಂಗಳೂರು – 10 ಲಕ್ಷ ರೂ.
ಅತ್ಯಧಿಕ ಸಿಕ್ಸ್ – ಕೆಎಲ್ ರಾಹುಲ್ (30 ಸಿಕ್ಸರ್), ಪಂಜಾಬ್ ಕಿಂಗ್ಸ್ – 10 ಲಕ್ಷ ರೂ
ಉದಯೋನ್ಮುಖ ಆಟಗಾರ – ಋತುರಾಜ್ ಗಾಯಕ್ವಾಡ್, ಚೆನ್ನೈ ಸೂಪರ್ ಕಿಂಗ್ಸ್ – ರೂ. 10 ಲಕ್ಷ.
ಅತ್ಯುತ್ತಮ ಕ್ಯಾಚ್ – ರವಿ ಬಿಷ್ಣೋಯ್ (ಪಂದ್ಯ 21, ಬ್ಯಾಟ್ಸ್‌ಮನ್ – ಸುನಿಲ್ ನರೈನ್), ಪಂಜಾಬ್ ಕಿಂಗ್ಸ್ – 10 ಲಕ್ಷ ರೂ.
ಸೀಸನ್ ನ ಸೂಪರ್ ಸ್ಟ್ರೈಕರ್ – ಶಿಮ್ರಾನ್ ಹೆಟ್ಮೇಯರ್, ದೆಹಲಿ ಕ್ಯಾಪಿಟಲ್ಸ್ – 10 ಲಕ್ಷ ರೂ
ಗೇಮ್ ಚೇಂಜರ್ – ಹರ್ಷಲ್ ಪಟೇಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು – ರೂ. 10 ಲಕ್ಷ.
ಪವರ್ ಪ್ಲೇಯರ್ – ವೆಂಕಟೇಶ್ ಅಯ್ಯರ್, ಕೋಲ್ಕತಾ ನೈಟ್ ರೈಡರ್ಸ್ – ರೂ. 10 ಲಕ್ಷ
ಮೌಲ್ಯಯುತ ಆಟಗಾರ – ಹರ್ಷಲ್ ಪಟೇಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು – 10 ಲಕ್ಷ ರೂ
ಫೇರ್ ಪ್ಲೇ ಅವಾರ್ಡ್– ರಾಜಸ್ಥಾನ ರಾಯಲ್ಸ್ – ರೂ. 10 ಲಕ್ಷ