ಐಫೋನ್ ಗಾಗಿ ಕಿಡ್ನಿ ಮಾರಿದ ಯುವಕ; ಈಗ ನಡೆಸಿದ್ದಾನೆ ಜೀವನ ಹಾಗೂ ಮರಣದ ನಡುವೆ ಹೋರಾಟ!

ಹಬ್ಬಗಳ ಸೀಸನ್ ಬಂದ ಕೂಡಲೇ ಆ್ಯಪಲ್ ಕಂಪನಿಯು ಒಂದು ಹೊಸ ಸಿರೀಸ್ ನ ಐ ಫೋನ್ ಬಿಡುಗಡೆ ಮಾಡುವ ಘೋಷಣೆಯನ್ನು ಮಾಡಿತ್ತು. ಆ ಘೋಷಣೆ ಆದ ಕೂಡಲೇ ಸೋಶಿಯಲ್ ಮೀಡಿಯಾಗಳಲ್ಲಿ ಈ ಫೋನ್ ಬೆಲೆಯ ಕುರಿತಾಗಿ ಜೋಕ್ಸ್ ಗಳು ಹಾಗೂ ಮೀಮ್ಸ್ ಗಳು ಕೂಡಾ ಬರತೊಡಗಿತು. ಅದರಲ್ಲಿ ಹೊಸ ಐ ಫೋನ್ ಖರೀದಿ ಮಾಡಲು ಸಾಮಾನ್ಯ ಜನರು ಅವರ ಕಿಡ್ನಿ ಕೂಡಾ ಮಾರಾಟ ಮಾಡಬೇಕಾಗುವುದು ಎಂದು ಕೂಡಾ ಟ್ರೋಲ್ ಮಾಡಲಾಗಿತ್ತು. ಇದು ಕೇವಲ ಜೋಕ್ ಎಂದು ನಾವು ನೋಡಿ, ಓದಿ, ನಕ್ಕು ಸುಮ್ಮನಾಗುತ್ತೇವೆ. ಆದರೆ ಇಂತಹುದೊಂದು ಘಟನೆ ನಡೆದಿತ್ತು ಎಂದರೆ ನೀವು ನಂಬುವಿರ? ಇಲ್ಲ ಎನ್ನುವುದಾದರೆ ಇದನ್ನೊಮ್ಮೆ ಓದಿ ನೋಡಿ.

ಅನೇಕರಿಗೆ ಆ್ಯಪಲ್ ಕಂಪನಿಯ ಐ ಪೋನ್, ಐಪಾಡ್‌ ಖರೀದಿ ಮಾಡುವ ಆಸೆ ಬಹಳಷ್ಟಿದೆ. ಆದರೆ ಅನೇಕರಿಗೆ ಅದನ್ನು ಖರೀದಿ ಮಾಡುವ ಆರ್ಥಿಕ ಸಾಮರ್ಥ್ಯ ಇರುವುದಿಲ್ಲ. ಇಂತುಹುದೇ ಒಂದು ಪರಿಸ್ಥಿತಿಯಲ್ಲಿ ಇದ್ದ ಹದಿನೇಳು ವರ್ಷದ ಯುವಕ ವಾಂಗ್ ಶಾಂಗೂನ್. ಈತ ಚೀನಾದ ಮೂಲದವನಾಗಿದ್ದು 2011 ರಲ್ಲಿ ಈತನ ಬಹಳ ಮುಖ್ಯವಾದ ಆಸೆ ಇದ್ದಿದ್ದು ಹೇಗೆ ಆದರೂ ಸರಿ ಒಂದು ಐಫೋನ್ ಮತ್ತು ಐ ಪ್ಯಾಡ್ ಖರೀದಿ ಮಾಡಲು ಬಯಸಿದ್ದ. ಆದರೆ ಮನೆಯಲ್ಲಿ ಆರ್ಥಿಕವಾಗಿ ಅವುಗಳನ್ನು ಖರೀದಿ ಮಾಡುವ ಸಾಮರ್ಥ್ಯ ಇರಲಿಲ್ಲ.

ಆಗ ವಾಂಗ್ ಗೆ ಬಂದ ಆಲೋಚನೆ ನಿಜಕ್ಕೂ ಆ ಘಾ ತಕಾರಿ ಎಂದೇ ನಾವು ಹೇಳಬಹುದು. ವಾಂಗ್ ಐ ಫೋನ್ ಹಾಗೂ ಐಪ್ಯಾಡ್ ಖರೀದಿ ಮಾಡಲು ತನ್ನ ಕಿಡ್ನಿಯನ್ನೇ ಮಾರಲು ನಿರ್ಧಾರವನ್ನು ಮಾಡಿದ್ದಾನೆ. ಆಗ ಆತನಿಗೆ ಒಬ್ಬ ಆರ್ಗನ್ ಪೆ ಡ್ಲ ರ್ ನ ಪರಿಚಯ ಆಗಿದೆ‌. ಆತ ಕಿಡ್ನಿ ಮಾರಿದರೆ ಒಳ್ಳೆ ಹಣ ಬರುತ್ತದೆ, ಮನುಷ್ಯನಿಗೆ ಒಂದು ಕಿಡ್ನಿ ಇದ್ದರೆ ಸಾಕು ಎಂದು ಪುಸಲಾಯಿಸಿದಾಗ ವಾಂಗ್ ಕೂಡಾ ಒಪ್ಪಿಕೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿ ತನ್ನ ಒಂದು ಕಿಡ್ನಿಯನ್ನು 3,273 ಡಾಲರ್ ಗಳಿಗೆ ಮಾರಾಟ ಮಾಡಿಯೇ ಬಿಟ್ಟ ಹಾಗೂ ತನ್ನ ಆಸೆಯ ಐ ಫೋನ್ ಹಾಗೂ ಐಪ್ಯಾಡ್ ಖರೀದಿ ಮಾಡಿದ.

ವಾಂಗ್ ಈ ವಿಷಯವನ್ನು ಮನೆಯವರಿಗೆ ಹೇಳಿರಲಿಲ್ಲ. ಆದರೆ ಮನೆಗೆ ಹಿಂತಿರುಗಿದಾಗ ಆತನ ಬಳಿ ಇರುವ ಬೆಲೆ ಬಾಳುವ ಗ್ಯಾಜೆಟ್ ನೋಡಿ ಕೇಳಿದಾಗ ಆತ ನಡೆದ ವಿಷಯವನ್ನು ತಿಳಿಸಿದ್ದಾನೆ. ಆದರೆ ಆಗ ಖುಷಿಯಾಗಿದ್ದ ವಾಂಗ್ ಈಗ 26 ವರ್ಷದ ತರುಣ, ಆದರೆ ಈಗ ಆತನ ಜೀವನ ಮೊದಲಿನಂತೆ ಇಲ್ಲ. ಇದಕ್ಕೆ ಕಾರಣ ವಾಂಗ್ ನ ಕಿಡ್ನಿ ತೆಗೆಯುವಾಗ ಮಾಡಿದ್ದ ಶಸ್ತ್ರ ಚಿಕಿತ್ಸೆ ಅನ್ ಹೈಜೆನಿಕ್ ಆಗಿದ್ದ ಕಾರಣ ಮತ್ತು ಪೋಸ್ಟ್ ಆಪರೇಟಿವ್ ಕೇರ್ ಸಮರ್ಪಕವಾಗಿ ಆಗಿರಲಿಲ್ಲವಾದ ಕಾರಣ ಈಗ ಆತ ತೀವ್ರವಾಗಿ ಬಳಲುವ ಹಾಗೆ ಆಗಿದೆ ಆತನ ಜೀವಕ್ಕೆ ಕಂ ಟ ಕವಾಗಿದೆ‌.

ಇನ್ಫೆಕ್ಷನ್ ಆದ ಕಾರಣ ಆತನ ಇನ್ನೊಂದು ಕಿಡ್ನಿ ಕೂಡಾ ಹಾಳಾಗಿದೆ. ವಾಂಗ್ ಗೆ ಈಗ ಪ್ರತಿದಿನ ಡಯಾಲಿಸಿಸ್ ಮಾಡಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಆಧುನಿಕ ಗ್ಯಾಜೆಟ್ ಗಳಿಗೆ ಆಸೆ ಪಟ್ಟು, ಅವುಗಳ ಗೀಳಿನಲ್ಲಿ ವಾಂಗ್ ತನ್ನ ಉಜ್ವಲ ಭವಿಷ್ಯವನ್ನು ಹಾಳು ಮಾಡಿಕೊಂಡು ಇಂದು ಆತ ಹಾಸಿಗೆಯನ್ನು ಹಿಡಿಯುವಂತಾಗಿದೆ. ನಿರ್ಜೀವ ಗ್ಯಾಜೆಟ್ ಗಳ ವ್ಯಾಮೋಹದಲ್ಲಿ ಒಂದು ಸುಂದರವಾದ ಜೀವನವನ್ನೇ ಹಾಳು ಮಾಡಿಕೊಂಡ ಈತನನ್ನು ಏನನ್ನಬೇಕೋ ಗೊತ್ತಿಲ್ಲ. ಆರೋಗ್ಯವೇ ಭಾಗ್ಯ ಎನ್ನುವ ಸಾಮಾನ್ಯ ವಿಷಯ ತಿಳಿಯದೆ ಹರೆಯದಲ್ಲಿ ಮಾಡಿದ ತಪ್ಪಿಗೆ ಈಗ ಆತನ ಇಡೀ ಕುಟುಂಬ ಪರಿತಪಿಸಬೇಕಾಗಿದೆ.‌