ಐಶ್ವರ್ಯ ಮಗಳು ಅರಾಧ್ಯಳ ‘ಈ’ ಪೋಟೊ ನೋಡಿ ಸಿಟ್ಟಾದ ನೆಟ್ಟಿಗರು; ಐಶ್ವರ್ಯ ಗೆ ಅಂತಿದ್ದಾರೆ “ನಿನಗೆ ನಾಚಿಕೆಯಾಗಬೇಕು!”
ಐಶ್ವರ್ಯ ರೈ ಮಗಳಾದ ಆರಾಧ್ಯಾಳ ಈ ಫೋಟೋ ನೋಡಿ ಸಿಟ್ಟಾದರು ನೆಟ್ಟಿಗರು, ಕಮೆಂಟ್ ನಲ್ಲಿ ಐಶ್ವರ್ಯ ಗೆ, ನಿನಗೆ ನಾಚಿಕೆಯಾಗಬೇಕು ಎಂದರು…
ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ತುಂಬಾ ವಿಚಿತ್ರವಾಗಿದೆ. ಇಲ್ಲಿ ಯಾರೇ ಆಗಲಿ ತಾವು ಮಾಡುವ ಕೆಲಸ ತುಂಬಾ ವಿಚಾರ ಮಾಡಿ ಮಾಡಬೇಕಾಗಿದೆ. ಕಾರಣ ಈ ವಿಭಾಗದಲ್ಲಿ ವ್ಯಕ್ತಿಯಿಂದ ಏನಾದರೂ ತಪ್ಪುಗಳಾದರೆ ಬಹುಬೇಗ ಮೀಡಿಯಾದಲ್ಲಿ ಸುದ್ದಿಗಳಾಗುತ್ತವೆ. ಅದೇ ರೀತಿ ಒಂದು ವೇಳೆ ಸೆಲೆಬ್ರಿಟಿಗಳ ಮುಖಾಂತರ ಏನಾದರೂ ತಪ್ಪಾದರೆ ಅಥವಾ ದೋಷವೂ ಸಿಕ್ಕರೆ ಮುಗಿದುಹೋಯಿತು. ಸೋಶಿಯಲ್ ಮೀಡಿಯಾ ಯೂಸರ್ ಗಳು ಅವರನ್ನು ಯಾವುದಕ್ಕೂ ಬಿಡುವುದಿಲ್ಲ. ಅಷ್ಟೊಂದು ಕಾಟ ಕೊಡುತ್ತಾರೆ. ಇದೇ ರೀತಿಯ ಸಮಸ್ಯೆ ಬಾಲಿವುಡ್ ಮೇರು ನಟಿ ಐಶ್ವರ್ಯ ರೈ ಜೊತೆಗೆಯೂ ಆಗಿದೆ.
ಬಾಲಿವುಡ್ ನಟ-ನಟಿಯರು ತಮ್ಮ ಮಕ್ಕಳ ವಿವಿಧ ಸನ್ನಿವೇಶಗಳಲ್ಲಿ ತೆಗೆದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಶೇರ್ ಮಾಡುತ್ತಿರುತ್ತಾರೆ. ಈ ಫೋಟೋಗಳನ್ನು ಅವರ ಅಭಿಮಾನಿಗಳು ಆಗಲೇ ನೋಡುತ್ತಾರೆ ಮತ್ತು ಇಷ್ಟವಾಗಿ ಶೇರ್ ಸಹ ಮಾಡುತ್ತಾರೆ. ಏಕೆಂದರೆ ಅಭಿಮಾನಿಗಳು ತಮ್ಮ ನೆಚ್ಚಿನ ನಟ ನಟಿಯರ ಮೇಲೆ ಯಾವತ್ತೂ ಒಂದು ದೃಷ್ಟಿಯನ್ನು ಇಟ್ಟೆ ಇಟ್ಟಿರುತ್ತಾರೆ.
ಬಾಲಿವುಡ್ ಮಹಾ ನಾಯಕರೆಂದೇ ಪ್ರಸಿದ್ಧರಾದ ಅಮಿತಾ ಬಚ್ಚನ್ ಅವರ ಸೊಸೆ ಐಶ್ವರ್ಯ ರೈ ಅವರು ತಮ್ಮ ಮಗಳ 8 ನೇ ಜನ್ಮದಿನದ ಅಂಗವಾಗಿ ಆರಾಧ್ಯಳ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಿಂದ ಶೇರ್ ಮಾಡಿದ್ದರು. ಇದೇ ಫೋಟೋ ಐಶ್ವರ್ಯ ಅವರನ್ನು ಟ್ರೋಲ್ ಮಾಡಲು ಕಾರಣವಾಯಿತು. ಇದೇ ಫೋಟೋದಿಂದಲೇ ಐಶ್ವರ್ಯ ಅವರ ಮೇಲೆ ನೆಟ್ಟಿಗರು ಸಿಟ್ಟಾಗಲು ಕಾರಣವಾಯಿತು.
ಮೀಡಿಯಾ ರಿಪೋರ್ಟ್ ಗಳ ಪ್ರಕಾರ ಐಶ್ವರ್ಯ ರೈ ಅವರು ಶೇರ್ ಮಾಡಿದ ಮಗಳ ಫೋಟೋ ತುಂಬಾ ಚೆನ್ನಾಗಿತ್ತು. ಆದರೆ ಆ ಫೋಟೋದಲ್ಲಿ ಆರಾಧ್ಯಾಳ ಮುಖ ಮೇಕಪ್ ನಿಂದಾಗಿ ತುಂಬಾ ಮಿನುಗುತ್ತಿತ್ತು. ಕಾರಣ ಮುಖದ ಮೇಲೆ ಹಚ್ಚಿದ ಹೆಚ್ಚುವರಿ ಮೇಕಪ್ ತುಂಬಾ ಎದ್ದು ಬೀಳುತ್ತಿತ್ತು. ಇದು ನೋಡುಗರಿಗೆ ಸರಿ ಅನ್ನಿಸಿಲ್ಲ. ಹೀಗಾಗಿ ನೆಟ್ಟಿಗರು ಐಶ್ವರ್ಯ ಅವರ ಮೇಲೆ ತುಂಬಾ ಸಿಟ್ಟಾಗಿದ್ದರು. ಒಬ್ಬ ಯೂಸರ್ ಐಶ್ವರ್ಯ ಅವರಿಗೆ ನೀವು ಒಳ್ಳೆಯ ತಾಯಿಯಲ್ಲ ಎಂದು ಕಮೆಂಟ್ ಮಾಡಿದರೆ, ಇನ್ನೊಬ್ಬ ಐಶ್ವರ್ಯ ಅವರೇ ಸ್ವಲ್ಪ ಮರ್ಯಾದೆ ಇರಲಿ, ಹುಡುಗಿಗೆ ಈ ವಯಸ್ಸಿನಲ್ಲಿ ಇಷ್ಟೊಂದು ಮೇಕಪ್ ಯಾರಾದರೂ ಮಾಡುತ್ತಾರಾ ಎಂದು ಕೇಳಿದ್ದಾನೆ. ಅನೇಕ ಯೂಸರ್ ಗಳು ಈ ವಯಸ್ಸಿನಲ್ಲಿ ಮಗಳಿಗೆ ಇಷ್ಟೊಂದು ಮೇಕಪ್ ಮಾಡುವ ಅವಶ್ಯಕತೆಯಾದರೂ ಏನಿದೆ ಎಂದು ಕೇಳಿದ್ದಾರೆ. ಇನ್ನೊಬ್ಬ ನೀವು ಒಬ್ಬರು ಜವಾಬ್ದಾರಿಯಿಲ್ಲದ ತಾಯಿ ಆಗಿದ್ದೀರಾ ಎಂದು ಕಾಲೆಳೆದಿದ್ದಾರೆ.
ಆರಾಧ್ಯಳು ಯಾವತ್ತೂ ತನ್ನ ತಾಯಿಯ ಜೊತೆಗೆ ಇರುತ್ತಾಳೆ. ಬಾಲಿವುಡ್ನಲ್ಲಿ ತಾಯಿ ಮಗಳ ಫೋಟೋಗಳು ಎಂದಾಗ ಮುಖ್ಯವಾಗಿ ಇವರ ಫೋಟೋಗಳು ಹೆಚ್ಚಾಗಿ ಮೀಡಿಯಾದಲ್ಲಿ ಕಂಡುಬರುತ್ತವೆ. ಅಂದಾಗ ಐಶ್ವರ್ಯ ತಮ್ಮ ಮಗಳಿಗೆ ಇಷ್ಟೊಂದು ಹೆಚ್ಚುವರಿ ಮೇಕಪ್ ಮಾಡಿದ್ದು ನೆಟ್ಟಿಗರಿಗೆ ಇಷ್ಟವಾಗಿಲ್ಲ. ಹಾಗಾಗಿ ಅವರು ತಮ್ಮ ಮನದಿಂಗಿತವನ್ನು ಮೀಡಿಯಾಗಳ ಮುಖಾಂತರ ಹೊರಹಾಕಿದ್ದಾರೆ. ಐಶ್ವರ್ಯ ಅವರು ಟ್ರೋಲ್ ಆಗುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಕೆಲವೊಂದು ಕಾರಣಗಳಿಗಾಗಿ ಟ್ರೋಲ್ ಆಗಿದ್ದಾರೆ.