ಒಂದಲ್ಲ ಎರಡಲ್ಲ, ಬರೋಬ್ಬರಿ 14 ಬಾರಿ ಲಾಟರಿ ಗೆದ್ದ ಚಾಣಾಕ್ಷ ಈತ, ಕೊನೆಗೆ ಸರ್ಕಾರವೇ ಆತನ ಮೇಲೆ ನಿಷೇಧ ಹೇರಿತು!
ನೀವು ಅದೃಷ್ಟವನ್ನು ನಂಬುವಿರಾ? ಇಲ್ಲ ಎನ್ನುವುದಾದರೆ ಹೋಗಲಿ ಬಿಡಿ .. ಒಂದು ವೇಳೆ ಅದೃಷ್ಟವನ್ನು ನಂಬುತ್ತೇವೆ ಎನ್ನುವುದಾದರೆ ಎಷ್ಟು ನಂಬುವಿರಿ? ಇಲ್ಲಿ ಎಷ್ಟು ಎನ್ನುವ ಅರ್ಥ, ಒಬ್ಬ ವ್ಯಕ್ತಿಯ ಅದೃಷ್ಟ ಅವನಿಗೆ ಎಷ್ಟು ಸಾರಿ ಲಾಟರಿಯಲ್ಲಿ ಬಹುಮಾನ ಬರುವಂತೆ ಮಾಡಬಹುದು?? ಒಂದು ಬಾರಿ, ಎರಡು ಬಾರಿ, ಹೋಗಲಿ ನಾಲ್ಕು ಬಾರಿ.. ಆದರೆ ಅದಕ್ಕಿಂತ ಹೆಚ್ಚಿನ ಬಾರಿ ಅದೃಷ್ಟವು ಜೊತೆಯಾಗಿರಲು ಸಾಧ್ಯವೇ? ಇಲ್ಲ ತಾನೇ?
ಆದರೆ ಇಲ್ಲಿ ಇರುವ ಒಬ್ಬ ವ್ಯಕ್ತಿಗೆ ಒಂದು ಚಟವಾದಂತೆ ಕಂಡಿದ್ದು, ಆತ ಒಂದು, ಎರಡು ಬಾರಿಯಲ್ಲ, ಬರೋಬ್ಬರಿ 14 ಬಾರಿ ಲಾಟರಿಯಲ್ಲಿ ಬಹುಮಾನವನ್ನು ಪಡೆದುಕೊಂಡಿದ್ದರು. ಈ ಘಟನೆಯು ಬಹಳ ವಿಚಿತ್ರವೆನಿಸಿದರೂ ಕೂಡಾ ಇದರ ಹಿಂದೆ ಒಂದು ರೋಚಕವಾದ ಕಥೆಯಿದೆ ಎಂದು ನಾವು ಹೇಳಬಹುದು.
ಈ ಘಟನೆ 1960 ರ ಕಾಲದ್ದು ಆಗ ರುಮೇನಿಯಾ ದಲ್ಲಿ ಕಮ್ಯುನಿಸ್ಟ್ ಆಡಳಿತ ಜಾರಿಯಲ್ಲಿತ್ತು. ಆ ದಿನಗಳಲ್ಲಿ ರುಮೇನಿಯಾದ ಪರಿಸ್ಥಿತಿ ಚೆನ್ನಾಗಿರಲಿಲ್ಲ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ದಿನದಿಂದ ದಿನಕ್ಕೆ ಏರುತ್ತಿತ್ತು. ಅಲ್ಲಿನ ಜನ ಆರ್ಥಿಕವಾಗಿ ಸಂಕಷ್ಟಗಳನ್ನು ಎದುರಿಸುತ್ತಿದ್ದರು. ಹಸಿವು ಹಾಗೂ ಸಾವಿನ ಸಂಖ್ಯೆ ಏರುತ್ತಿತ್ತು. ಇಂತಹ ಸಮಸ್ಯೆಗಳಿಂದ ಅಲ್ಲಿನ ಯುವಕನೊಬ್ಬ ಕೂಡಾ ಬಹಳ ಚಿಂತಿತನಾಗಿದ್ದ.
ಆ ಯುವಕನ ಹೆಸರು ಸ್ಟೀಫನ್ ಮೆಂಡಲ್. ಸ್ಟೀಫನ್ ಬಳಿ ಉದ್ಯೋಗವಿತ್ತು. ಆತನು ತನ್ನ ಉದ್ಯೋಗದಿಂದ ಬರುವ ವೇತನದಿಂದ ತನ್ನ ಪರಿವಾರವನ್ನು ಸಾಕಲು ಸಮಸ್ಯೆಯಿರಲಿಲ್ಲ. ಆದರೆ ಆಗ ಅಲ್ಲಿನ ದೇಶದ ಪರಿಸ್ಥಿತಿ ಹೇಗಿತ್ತು ಎಂದರೆ ಯುವ ಜನರನ್ನು ಅದು ಅ ಪ ರಾ ಧ ದ ಹಾದಿಯಲ್ಲಿ ಹೆಜ್ಜೆ ಇಡಲು ಪ್ರೇರಣೆ ನೀಡುತ್ತಿತ್ತು. ಆದರೆ ಸ್ಟೀಫನ್ ಮಾತ್ರ ಅಂತಹ ದಾರಿಯನ್ನು ಹಿಡಿದಿರಲಿಲ್ಲ.

ಸ್ಟೀಫನ್ ಅ ಪ ರಾ ಧದ ಮಾರ್ಗವನ್ನು ಅನುಸರಿಸಲಿಲ್ಲವಾದರೂ, ಆತ ತಾನು ಸಹಾ ಏನಾದರೊಂದು ಮಾಡಬೇಕೆಂದು ಮನಸ್ಸಿನಲ್ಲಿ ನಿಶ್ಚಯ ಮಾಡಿದ್ದ. ಆಗ ಮನಸ್ಸಿನಲ್ಲಿ ಮೂಡಿದ ಒಂದು ಆಲೋಚನೆಯಿಂದ ಆತ ಲಾಟರಿ ಜಗತ್ತಿಗೆ ತನ್ನ ಅಡಿಯನ್ನು ಇಟ್ಟ. ಲಾಟರಿ ಜಗತ್ತಿನಲ್ಲಿ ಯಾರು ಬಹುಮಾನ ಗೆಲ್ಲುತ್ತಾರೆ ಎಂದು ಹೇಳುವುದು ಅಸಾಧ್ಯ.
ಆದರೆ ಅದನ್ನು ಸುಸಾಧ್ಯ ಮಾಡಿಕೊಂಡು ತನ್ನ ಗೆಲುವನ್ನು ನಿಶ್ಚಯ ಮಾಡಿಕೊಂಡ ಸ್ಟೀಫನ್. ಆದರೆ ಆತ ಯಾವುದೇ ಕಾನೂನು ಬಾಹಿರವಾದ ಮಾರ್ಗಗಳನ್ನಿ ಅನುಸರಿಸಲಿಲ್ಲ. ಬದಲಿಗೆ ಗಣಿತ ಶಾಸ್ತ್ರದ ಸಹಾಯವನ್ನು ಪಡೆದು ಲಾಟರಿ ಜಗತ್ತಿನಲ್ಲಿ ಮಿಂಚಲು ಆರಂಭಿಸಿದ.
ಸ್ಟೀಫನ್ ಸಿಸ್ಟಮನ್ನು ಕ್ರ್ಯಾಕ್ ಮಾಡಲು ತನ್ನ ಗಣಿತದ ಜ್ಞಾನವನ್ನು ಬಳಸಿಕೊಂಡು ಒಂದು ಫಾರ್ಮುಲಾ ಸಿದ್ಧಪಡಿಸಿಕೊಂಡಿದ್ದ. ಇದರ ನಂತರ ಅದೃಷ್ಟ ಅವನಿಗೆ ಒಲಿದು ಬಂದಿತ್ತು. ರೊಮೇನಿಯಾ ದಲ್ಲಿ ಅರ್ಥಶಾಸ್ತ್ರಜ್ಞರಾಗಿ ಕೆಲಸ ಮಾಡುತ್ತಿದ್ದ ಸ್ವೀಫನ್ ತನ್ನ ಫಾರ್ಮುಲಾ, ತನ್ನ 5-ಅಂಕಿಯ ಸೂತ್ರವನ್ನು ಬಳಸಿಕೊಂಡು ಆರನೆಯ ಅಂಕಿಯನ್ನು ನಿಖರವಾಗಿ ಅಂದಾಜಿಸಲು ನಿಪುಣನಾಗಿದ್ದ.
ರೊಮೇನಿಯಾದ ಲಾಟರಿ ಮೂಲಕ ದೊಡ್ಡ ಮೊತ್ತವನ್ನು ಗೆದ್ದ ಮೇಲೆ ಸ್ಟೀಫನ್ ರೊಮೇನಿಯ ತೊರೆದು ಆಸ್ಟ್ರೇಲಿಯಾಕ್ಕೆ ತನ್ನ ಕುಟುಂಬದ ಸಮೇತನಾಗಿ ಹೊರಟುಹೋದರು. ಆಸ್ಟ್ರೇಲಿಯಾದಲ್ಲಿ ನೆಲೆಸಿದ ಮೇಲೆಯೂ ತನ್ನ ಈ ತಂತ್ರವನ್ನು ಬಳಸಿಕೊಳ್ಳಲು ಪ್ರಾರಂಭಿಸಿದರು.
ಸ್ಟೀಫನ್ ಇನ್ನೂ ದೊಡ್ಡ ಮೊತ್ತದ ಲಾಟರಿಗಳನ್ನು ಗೆಲ್ಲುವ ಕನಸನ್ನು ಕಂಡರು. ಒಟ್ಟು 14 ಬಾರಿ ಲಾಟರಿಯನ್ನು ಗೆಲ್ಲುವ ಮೂಲಕ ಜನಪ್ರಿಯರಾದ ಇವರ ಕಡೆಗೆ ಆಸ್ಟ್ರೇಲಿಯಾದ ಅಧಿಕಾರಿಗಳ ಕಣ್ಣು ಬಿದ್ದಿತ್ತು. ಸ್ಟೀಫನ್ಸ್ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳನ್ನಾಗಲೀ ಮಾಡಿಲ್ಲವಾದರೂ ಅವರನ್ನು ಬ್ಲಾಕ್ ಮಾಡಲು ತೀರ್ಮಾನ ಮಾಡಲಾಯಿತು, ಕಠಿಣ ನಿಯಮಗಳನ್ನು ಜಾರಿಗೊಳಿಸಿದರು.
ಅಲ್ಲಿನ ಸರ್ಕಾರವು ಒಬ್ಬ ವ್ಯಕ್ತಿಯು ಲಾಟರಿ ಖರೀದಿ ಮಾಡುವುದನ್ನು ನಿಷೇಧ ಮಾಡಿತು. ಆಗ ಸ್ಚೀಫನ್ ಐದು ಜನರ ಗುಂಪನ್ನು ಸಿದ್ಧಪಡಿಸಿ ಕೊಂಡು, ಲಾಟರಿಯನ್ನು ಖರೀದಿ ಮಾಡಲು ಆರಂಭಿಸಿದರು. ಸರ್ಕಾರ ಕೊನೆಗೆ ಅದರ ಮೇಲೂ ಕೂಡ ನಿರ್ಬಂಧವನ್ನು ಹೇರಿದಾಗ ಸ್ಟೀಫನ್ ಒಂದು ಲಾಟರಿಯ ಖರೀದಿ ಏಜನ್ಸಿಯನ್ನೇ ಸ್ಥಾಪನೆ ಮಾಡಿದರು.
ಆಸ್ಟ್ರೇಲಿಯಾದ ಲಾಟರಿ ವ್ಯವಸ್ಥೆ ತನ್ನ ಕಡೆ ಹೆಚ್ಚು ಗಮನ ನೀಡುತ್ತಿದೆ ಹಾಗೂ ಅಲ್ಲಿ ಜಂಜಾಟಗಳು ಹೆಚ್ಚಾಗುತ್ತಿದೆ ಎಂದು ತಿಳಿದ ಸ್ಟೀಫನ್ ತನ್ನ ಗಮನವನ್ನು ಅಮೆರಿಕಾದ ಲಾಟರಿ ವ್ಯವಸ್ಥೆ ಕಡೆಗೆ ಹರಿಸಿದರು. ಇದರಿಂದ ಅವರು ಮೂರು ಕೋಟಿ ರೂಪಾಯಿಗಳನ್ನು ಗಳಿಸಿದರು. ಸ್ಟೀಫನ್ ರೊಮೇನಿಯಾ ದಲ್ಲಿ ಒಂದು ಲಾಟರಿ, ಆಸ್ಟ್ರೇಲಿಯಾದಲ್ಲಿ 12 ಲಾಟರಿ ಹಾಗೂ ವರ್ಜಿನಿಯಾದಲ್ಲಿ ಒಂದು ಬಂಪರ್ ಜಾಕ್ ಪಾಟ್ ಲಾಟರಿ ಗೆದ್ದಿದ್ದಾರೆ.
ಜನ ನೂರು ಬಾರಿ ಪ್ರಯತ್ನಪಟ್ಟು ಅದೃಷ್ಟ ಎನ್ನುವಂತೆ ಒಂದು ಬಾರಿ ಗೆಲುವನ್ನು ಕಂಡರೆ, ಸ್ಟೀಫನ್ ಮಾತ್ರ ಪದೇ ಪದೇ ಲಾಟರಿ ಜಗತ್ತಿನಲ್ಲಿ ಅದೃಷ್ಟವನ್ನು ತನ್ನದಾಗಿಸಿಕೊಂಡರು. ಆದರೆ ಒಂದೆರಡು ಬಾರಿ ಅವರು ಕೂಡ ನಷ್ಟವನ್ನು ಎದುರಿಸಬೇಕಾಯಿತು. ಜಿಬ್ರಾಲ್ಟರ್ ನಲ್ಲಿ ಅವರು ಲಾಟರಿ ಗೆಲ್ಲುವಲ್ಲಿ ವಿಫಲರಾದರು, ಇಸ್ರೇಲ್ ನಲ್ಲಾದರೆ ಅವರನ್ನು 20ವರ್ಷಗಳ ಕಾಲ ಜೈಲಿಗೆ ಹಾಕಲಾಯಿತು.
ಸ್ಟೀಫನ್ ಲಾಟರಿ ಗೆಲ್ಲಲು ಬಳಸುತ್ತಿದ್ದ ಫಾರ್ಮುಲಾದ ಮೇಲೆ ನಿರ್ಬಂಧವನ್ನು ಹೇರಲಾಯಿತು. ವಿಶೇಷ ಏನೆಂದರೆ ಸ್ಟೀಫನ್ ಲಾಟರಿ ಗೆಲ್ಲಲು ಅವಶ್ಯಕವಿರುವ ಸಾಫ್ಟ್ ವೇರ್ ಒಂದನ್ನು ಅಭಿವೃದ್ಧಿಪಡಿಸಿದರು
ಗೆಲ್ಲುವ ನಂಬರ್ ನ ಕಾಂಬಿನೇಷನ್ ಸಿದ್ದಪಡಿಸುವಲ್ಲಿ ಚಾಣಾಕ್ಷತನವನ್ನು ಪಡೆದುಕೊಂಡಿದ್ದರು. ತನ್ನ ಈ ಕೆಲಸದಲ್ಲಿ ಸಹಾಯಕರಾಗಿರಲು, ತನ್ನೊಡನೆ ಆರು ಜನರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರು. ಒಂದು ಸಲ ಲಾಟರಿ ಗೆದ್ದರೆ ಸುಮಾರು 15 ಸಾವಿರ ಪೌಂಡ್ ಅಂದರೆ ಹದಿನಾಲ್ಕು ಲಕ್ಷ ರೂ.ಗಳನ್ನು ಗೆಲ್ಲುತ್ತಿದ್ದರು.
-Team Infotrend