ಒಂದು ಕಡೆ ಮೊಸಳೆ, ಮತ್ತೊಂದು ಕಡೆ ಸಿಂಹಗಳ ದಂಡು ಎರಡರ ನಡುವೆ ಕಾಡೆಮ್ಮೆಯ ಹೋರಾಟ; ವೈರಲ್ ಆಯ್ತು ಅದ್ಭುತ Video
“ಅತ್ತ ದರಿ ಇತ್ತ ಪುಲಿ” ಈ ಮಾತನ್ನು ನಮ್ಮಲ್ಲಿ ಅನೇಕರು ಬಹುಶಃ ಕೇಳಿಯೇ ಇರುತ್ತಾರೆ. ಈ ಮಾತಿನ ಅರ್ಥ ಏನೆಂದರೆ ಒಂದು ಕಡೆ ಆಳವಾದ ಕಮರಿ ಅಥವಾ ಕಂದಕ ಇದ್ದರೆ, ಇನ್ನೊಂದು ಕಡೆ ಕೊ ಲ್ಲ ಲು ಸಿದ್ಧವಾಗಿರುವ ಭಯಾನಕ ಹುಲಿ ಇದೆ ಎಂದು. ಅಂದರೆ ಎತ್ತ ಕಡೆ ಹೋದರೂ ಕೂಡ ಸಾ ವು ಮಾತ್ರ ಖಚಿತ. ಮುಂದೆ ಹೋದರೆ ಕಮರಿ ಅಥವಾ ಕಂದಕ ದೊಳಗೆ ಬಿದ್ದು ಸಾ ಯ ಬೇಕು, ಹಿಂದೆ ಬಂದರೆ ಹುಲಿಗೆ ಆಹಾರವಾಗಬೇಕು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಾಣವನ್ನು ಉಳಿಸಿಕೊಳ್ಳುವುದು ನಿಜಕ್ಕೂ ಒಂದು ದೊಡ್ಡ ಸಾಹಸವೇ ಸರಿ ಹಾಗೂ ಒಂದು ವೇಳೆ ಪ್ರಾಣ ಉಳಿದರೆ ಅದು ನಮಗೆ ಸಿಕ್ಕ ಪುನರ್ಜನ್ಮ ಎಂದೇ ನಾವು ಹೇಳಬಹುದು.
ಆದರೆ ಎತ್ತ ನೋಡಿದರೂ ಸಾ ವಿ ನ ಭ ಯ ಇದ್ದಂತಹ ಸಂದರ್ಭದಲ್ಲಿ ಏನು ಮಾಡಬೇಕೆಂದು ನಮ್ಮ ಬುದ್ಧಿಗೆ ತೋಚುವುದಿಲ್ಲ. ಆಗ ಅಂತಹ ಪರಿಸ್ಥಿತಿಯಲ್ಲಿ ನಮಗೆ ಉಳಿಯುವುದು ಕೇವಲ ಎರಡು ಮಾರ್ಗಗಳು ಮಾತ್ರ. ಒಂದು ಆ ಸಂ ಕ ಷ್ಟ ದ ಪರಿಸ್ಥಿತಿಯಿಂದ ಹೊರ ಬರಲು ಧೈರ್ಯವಾಗಿ ಅದನ್ನು ಎ ದು ರಿ ಸಿ ಮುನ್ನುಗುವುದು, ಇಲ್ಲವೇ ನನ್ನಿಂದ ಇದನ್ನು ಎ ದುರಿಸುವುದು ಸಾಧ್ಯವೇ ಇಲ್ಲ ಎಂದು ಸಾ ವಿ ಗೆ ಶರಣಾಗುವುದು. ಆಯ್ಕೆ ನಮ್ಮದಾಗಿರುತ್ತದೆ. ಒಂದು ವೇಳೆ ಧೈರ್ಯ ಮಾಡಿ ಮುನ್ನಗ್ಗಿದ ನಮಗೆ ಅದೃಷ್ಟ ಕೂಡಾ ಜೊತೆಯಾದರೆ, ಅದನ್ನು ಎದುರಿಸಿ ಗೆದ್ದರೆ ಅದಕ್ಕಿಂತ ದೊಡ್ಡ ವಿಷಯ ಮತ್ತೊಂದಿಲ್ಲ ಎಂದೇ ಹೇಳಬಹುದು. ಆದರೆ ಇಂತಹ ಪರಿಸ್ಥಿತಿ ಊಹಿಸಿಕೊಂಡರೆ ನಿಜಕ್ಕೂ ಭ ಯ ವಂತೂ ಆಗೇ ಆಗುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ಇಂತಹುದೇ ಪರಿಸ್ಥಿತಿಯ ಚಿತ್ರಣವನ್ನು ಉಳ್ಳ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ . ಐಎಫ್ಎಸ್ ಅಧಿಕಾರಿಯಾಗಿರುವ ಸುಶಾಂತ್ ನಂದ ಅವರು ಆಗಾಗ ವನ್ಯಜೀವಿಗಳ ವಿಶೇಷ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಈಗಲೂ ಕೂಡ ಅವರೇ ಅದ್ಭುತವೆನಿಸುವ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಒಂದು ಕಾಡೆಮ್ಮೆ ಒಂದು ಕಡೆ ಮೊಸಳೆ ಮತ್ತೊಂದು ಕಡೆ ಸಿಂಹಗಳ ಗುಂಪಿನ ಮಧ್ಯೆ ಪ್ರಾ ಣಾ ಪಾ ಯದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದೆ. ಸಿಂಹಗಳಿಂದ ತಪ್ಪಿಸಿಕೊಳ್ಳಲು ನೀರಿಗೆ ಇಳಿದರೆ ಮೊಸಳೆಯಿಂದ ಸಾ ವು, ಮೊಸಳೆಯಿಂದ ತಪ್ಪಿಸಿಕೊಳ್ಳಲು ಮುಂದೆ ಹೋದರೆ ಸಿಂಹಗಳ ಬಾಯಿಗೆ ಆಹಾರವಾಗುವುದು ಖಚಿತ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎಮ್ಮೆ ಒಂದು ಕ್ಷಣ ಅಲ್ಲಿ ನಿಂತು ಆಲೋಚಿಸುವಂತೆ ಕಂಡುಬಂದಿದ್ದು, ಅನಂತರ ಅದು ಧೈರ್ಯಮಾಡಿ ಸಿಂಹಗಳನ್ನು ಎದುರಿಸಿ ಮುನ್ನುಗ್ಗುವ ಪ್ರಯತ್ನ ಮಾಡಿದೆ. ಆಗ ಸಿಂಹಗಳ ಗುಂಪು ಕೂಡಾ ಹೇಗಾದರೂ ಮಾಡಿ ಎಮ್ಮೆಯನ್ನು ಬೇಟೆಯಾಡಲೇಬೇಕೆಂಬ ಪ್ರಯತ್ನ ಮಾಡಿವೆಯಾದರೂ ಅದು ಸಫಲವಾಗಿಲ್ಲ. ಏಕೆಂದರೆ ಎಮ್ಮೆಯ ಅದೃಷ್ಟ ಚೆನ್ನಾಗಿದ್ದು, ಎಲ್ಲಿಂದಲೋ ಬಂದ ಕಾಡೆಮ್ಮೆಗಳ ಗುಂಪು ಸಿಂಹಗಳನ್ನು ಅಟ್ಟಿಸಿವೆ. ಹೀಗೆ ಪ್ರಾ ಣಾ ಪಾ ಯದ ಪರಿಸ್ಥಿತಿಯಲ್ಲಿ ಧೈರ್ಯವಾಗಿ ಮುನ್ನುಗ್ಗಿದ ಎಮ್ಮೆಗೆ ಅದೃಷ್ಟ ಕೂಡ ಜೊತೆಯಾಗಿ ಪ್ರಾಣ ಉಳಿದುಕೊಂಡಿದೆ.
ವಿಡಿಯೋ ನೋಡಿ
This Buffalo is a great survivor. Chased to water by a lions pride, it suddenly encounters a crocodile. Escapes the fury in water & comes out to defend itself against the lion pride till a herd of Buffalo takes over. It was his day.
— Susanta Nanda (@susantananda3) November 29, 2020
Fascinating duel in nature
🎥:In the clip pic.twitter.com/KdIL8f1dNe
ಇದೊಂದು ಕ್ಷಣಕ್ಷಣಕ್ಕೂ ಬಹಳ ರೋಚಕ ಎನಿಸುವ ವಿಡಿಯೋ ಆಗಿದೆ. ಸಾವಿರಾರು ಜನ ಈಗಾಗಲೇ ಈ ಅದ್ಭುತ ವಿಡಿಯೋವನ್ನು ವೀಕ್ಷಣೆ ಮಾಡಿದ್ದರೆ, ನೂರಾರು ಜನ ಮೆಚ್ಚಿದ್ದಾರೆ, ವೀಡಿಯೋವನ್ನು ರೀಟ್ವೀಟ್ ಮಾಡುತ್ತಿದ್ದಾರೆ. ಇನ್ನು ಪ್ರತಿಕ್ರಿಯೆಗಳನ್ನು ನೀಡಿರುವವರು, ಏಕತೆಯಲ್ಲಿ ಬಲವಿದೆ ಎಂದು ಹೇಳಿದರೆ, ಮತ್ತೆ ಕೆಲವರು ವಿಧಿ, ಅದೃಷ್ಟ ಹಾಗೂ ಪ್ರಕೃತಿಯ ನಡುವಿನ ರೋಚಕವಾದ ಆಟ ಇದು ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ಎಮ್ಮೆಯ ಅದೃಷ್ಟ ಬಹಳ ಚೆನ್ನಾಗಿದೆ ಎಂದು ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ. ಧೈರ್ಯ ಜೊತೆಗಿದ್ದರೆ ಅದೃಷ್ಟ ಕೂಡಾ ಒಲಿಯುತ್ತದೆ ಎನ್ನುವ ರೀತಿಯಲ್ಲಿ ಇರುವ ವೀಡಿಯೋ ವಿಸ್ಮಯವನ್ನು ಉಂಟು ಮಾಡುತ್ತದೆ.