ಒಂದು ಗುಬ್ಬಚ್ಚಿಗಾಗಿ ಭಾರತದ ಹಳ್ಳಿಯೊಂದು 36 ದಿನಗಳ ಕಾಲ ಕತ್ತಲೆಯಲ್ಲಿ ಇತ್ತು!
ಮಾನವನಿಗೆ ಪ್ರಾಣಿ ಪಕ್ಷಿಗಳೆಂದರೆ ತುಂಬಾ ಪ್ರೀತಿ. ಎಲ್ಲರೂ ಪ್ರೀತಿ ತೋರುವರು ಅಂತ ಹೇಳಲು ಸಾಧ್ಯವಿಲ್ಲ, ಆದರೆ ಕೆಲವೊಬ್ಬರ ಪ್ರೀತಿಯ ಮುಂದೆ ಏನನ್ನು ಬೆಲೆ ಕಟ್ಟಲು ಸಾಧ್ಯವಾಗದು. ಹೌದು ಇಂತಹದೇ ಒಂದು ಘಟನೆ ನಡೆದಿದೆ.
ಒಂದು ಗುಬ್ಬಿಯ ಮರಿಯ ಸಲುವಾಗಿ ಇಡೀ ಊರೇ ಸುಮಾರು 36 ದಿನಗಳವರೆಗೆ ಕತ್ತಲಲ್ಲೇ ಜೀವನ ನಡೆಸಿದೆ. ಅದು ಹೇಗೆ? ಇದು ಸಾಧ್ಯಾನಾ? ಅಂತ ಹಲವಾರು ಪ್ರಶ್ನೆ ಗಳು ನಿಮ್ಮ ಮನದಲ್ಲಿ ಮೂಡುತ್ತಿರುಬಹುದು. ಆದರೆ ಇದು ನಿಜ. ಕೇವಲ ಒಂದು ಗುಬ್ಬಿ ಮರಿಯ ಸಲುವಾಗಿ ಇಡೀ ಊರೇ ಸುಮಾರು 36 ದಿನಗಳಲ್ಲಿ ತಮ್ಮ ಮನೆಯಲ್ಲಿಯ ಲೈಟ್ ಹಚ್ಚದೆ ಕತ್ತಲಲ್ಲಿ ಜೀವನ ನಡೆಸಿದ ಊರ ಜನರಲ್ಲಿ ಇನ್ನು ಮಾನವೀಯತೆ ಜೀವಂತವಿದೆ ಎಂದು ತೋರಿಸಿಕೊಟ್ಟಿದ್ದಾರೆ.
ಪ್ರಸ್ತುತ ಘಟನೆ ತಮಿಳುನಾಡು ರಾಜ್ಯದ ಶಿವಗಂಗಾಯಿ ಜಿಲ್ಲೆಯಲ್ಲಿಯ ಪೊಥಾಕೂಡಾ ಎಂಬ ಸಣ್ಣ ಹಳ್ಳಿಯಲ್ಲಿ ನಡೆದಿದೆ. ಇಲ್ಲಿ ನಡೆದದ್ದು ಏನೆಂದರೆ, ಊರಿನಲ್ಲಿಯ ಮೇನ್ ಸ್ವಿಚ್ ಬೋರ್ಡ್ ಮೇಲೆ ಒಂದು ಗುಬ್ಬಿ ಮನೆ ಮಾಡಿತ್ತು ಮತ್ತು ಅದರಲ್ಲಿ ಮೊಟ್ಟೆಯನ್ನು ಸಹ ಇಟ್ಟಿತು. ಆದುದರಿಂದ ಆ ಗುಬ್ಬಿ ಹಾಗೂ ಅದರ ಮೊಟ್ಟೆಯನ್ನು ಉಳಿಸುವ ಸಲುವಾಗಿ ಸ್ವಿಚ್ ಗೆ ಕೈ ಹಚ್ಚದೆ ಕತ್ತಲಲ್ಲಿ ಜೀವಿಸಲು ನಿರ್ಧಾರ ತಗೆದುಕೊಂಡರು. ಆದರೆ ಈ ಪ್ರಕಾರದ ಯೋಚನೆ ಬಂದದ್ದು ಆ ಊರಲ್ಲಿಯ 20 ಪ್ರಾಯದ ಕರುಪ್ಪುರಾಜ್ ಎಂಬ ಯುವಕನಿಗೆ.

ಕರುಪ್ಪುರಾಜ್ ಅವರ ಹೇಳಿಕೆಯ ಪ್ರಕಾರ, ‘ ನಾವು ಯಾವಾಗ ಸ್ವಿಚ್ ಬೋರ್ಡ್ ಹತ್ತಿರ ಹೋಗುತ್ತಿದ್ದಾಗ ನಮಗೆ ಸ್ವಿಚ್ ಬೋರ್ಡ್ ಹತ್ತಿರ ಒಂದು ಗುಬ್ಬಿಯ ಗೂಡಲ್ಲಿ ಮೊಟ್ಟೆ ಇದ್ದದ್ದು ಕಂಡು ಬಂದಿತು. ತಕ್ಷಣವೇ ನಾವು ಅದರ ಒಂದು ಫೋಟೋ ತಗೆದು ಅದನ್ನು ಊರಿನ ವಾಟ್ಸಾಪ್ ಗ್ರೂಪ್ ನಲ್ಲಿ ಪೋಸ್ಟ್ ಮಾಡಿದೆವು. ಕೇವಲ ಇಷ್ಟೇ ಮಾಡಿ ಬಿಡಲಿಲ್ಲ. ಊರಿನ ಜನರಲ್ಲಿ ಗುಬ್ಬಿಗೆ ಸಹಾಯ ಮಾಡುವ ಸಲುವಾಗಿ ಅವರಿಗೆ ಕೋರಿಕೆಯನ್ನು ಮಾಡಿಕೊಂಡೆವು. ಅದರ ಸಲುವಾಗಿ ಆ ಗೂಡಿನ ಜೊತೆಗೆ ಅಂಟಿಕೊಂಡಿದ್ದ ಮೇನ್ ಸ್ವೀಚ್ ಬೋರ್ಡ್ ದೀಪ್ ಬಂದ್ ಮಾಡಲು ಹೇಳಲಾಯಿತು ಇದರಿಂದ ಆ ಮೊಟ್ಟೆಯಲ್ಲಿಯ ಮರಿ ಹೊರಗೆ ಬರಲು ಸಾಧ್ಯವಾಗುವದು.”
ಆ ಗೂಡಿನ ಬಳಿಯಲ್ಲಿದ್ದ ಸ್ವಿಚ್ ಬೋರ್ಡ್ ಊರಿನ ರಸ್ತೆಯ ಮೇಲಿರುವ 35 ದಾರಿ ದೀಪಗಳಿಗೆ ಜೋಡಿಸಲಾಗಿತ್ತು ಅಲ್ಲದೆ ಸುಮಾರು ನೂರಕ್ಕಿಂತ ಹೆಚ್ಚು ಕುಟುಂಬಗಳಿಗೆ ಅದರ ಉಪಯೋಗ ವಾಗುತ್ತಿತ್ತು. ಊರಿನ ಜನರು ಆ ಸ್ವಿಚ್ ಬೋರ್ಡ್ ಹಾಗೆ ಬಂದ್ ಮಾಡಿ ಇಟ್ಟರು, ಮತ್ತು ದಾರಿದೀಪ ಸುಮಾರು 36 ದಿವಸಗಳವರೆಗೆ ಹಾಗೆ ಬಂದ್ ಮಾಡಿದ್ದರು. ರಾತ್ರಿಯಲ್ಲಿ ಹೆದರುತ್ತಿದ್ದ ಮಹಿಳೆಯರು ಸಹ ತಮ್ಮ ಹೆದರಿಕೆಯನ್ನು ಬದಿಗಿಟ್ಟು ಆ ಪುಟ್ಟ ಗುಬ್ಬಿಯ ಸಹಾಯ ಮಾಡಿದರು.
ಈ ಊರಿನಲ್ಲಿಯ ಜನರು ‘ಬದುಕು ಮತ್ತು ಬದುಕಲು ಬಿಡು’ ಈ ಉಕ್ತಿಯ ಅರ್ಥವನ್ನು ಉತ್ತಮವಾಗಿ ಜಾರಿಯಲ್ಲಿ ತಂದಿದ್ದು ಕಂಡು ಬಂದಿದೆ.