ಒಂದು ದಿನದ ಸಲುವಾಗಿ ಜಿಲ್ಲಾ ಕಲೆಕ್ಟರ್ ಆದ ಕೃಷಿ ಕಾರ್ಮಿಕನ 16 ವರ್ಷದ ಮಗಳು; ಒಂದು ದಿನದಲ್ಲಿ ಮಾಡಿದ ಕೆಲಸಗಳೇನು ಗೊತ್ತಾ?
ಹೊಲದಲ್ಲಿ ಬೆವರು ಹರಿಸಿ ದುಡಿಯುವ ಒಬ್ಬ ಕೃಷಿ ಕಾರ್ಮಿಕನ 16 ವರ್ಷದ ಮಗಳು ಒಂದು ದಿನದ ಮಟ್ಟಿಗೆ ಜಿಲ್ಲಾ ಕಲೆಕ್ಟರ್ ಆಗಿ ಕಾರ್ಯವನ್ನು ನಿರ್ವಹಿಸಿದ ಅಪರೂಪದ ಘಟನೆಯೊಂದು ನಡೆದಿದೆ. ಹೌದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಸ್ತೂರ ಬಾ ಬಾಲಕಿಯರ ವಿದ್ಯಾಲಯದಲ್ಲಿ ಇಂಟರ್ ಮೀಡಿಯಟ್ ನ ವಿದ್ಯಾರ್ಥಿನಿಯಾಗಿರುವ ಎಮ್. ಶರ್ವಾಣಿ ಗರ್ಲ್ಸ್ ಸೆಲೆಬ್ರೇಷನ್ ಡೇ ಹಿನ್ನೆಲೆಯಲ್ಲಿ ಒಂದು ದಿನದ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದರು. ವಾಸ್ತವವಾಗಿ ಈ ರೀತಿ ಒಂದು ದಿನದ ಜಿಲ್ಲಾಧಿಕಾರಿ ಅವಕಾಶವನ್ನು ನೀಡಲು ವಿದ್ಯಾರ್ಥಿನಿಯರು ಹೆಸರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿತ್ತು.
ಜಿಲ್ಲಾಧಿಕಾರಿ ಗಂಧಮ್ ಚಂದ್ರುಡು ಅವರ ಉಪಸ್ಥಿತಿಯಲ್ಲಿ, ಮಾದ್ಯಮಗಳು ಹಾಗೂ ಪ್ರಮುಖರ ಮುಂದೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಲಾಟರಿಯನ್ನು ತೆಗೆಯಲಾಗಿತ್ತು. ಆಗ ಶರ್ವಾಣಿ ಯ ಹೆಸರು ಬಂದ ಕಾರಣ ಆಕೆಯನ್ನು ಒಂದು ದಿನದ ಮಟ್ಟಿಗೆ ಜಿಲ್ಲಾಧಿಕಾರಿ ಸ್ಥಾನದಲ್ಲಿ ಕೂರಿಸಲಾಗಿತ್ತು. ಜಿಲ್ಲಾಧಿಕಾರಿ ಗಂಧಮ್ ಚಂದ್ರುಡು ಅವರು ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಗೌರವಿಸುವ ಹಾಗೂ ಅವರಿಗೆ ಅವರ ಹಕ್ಕುಗಳನ್ನು ನೀಡುವ ಸಲುವಾಗಿ ಜಿಲ್ಲೆಯಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಬಾಲಿಕಾ ಭವಿಷ್ಯ ಎನ್ನುವ ಒಂದು ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಅದರ ಹಿನ್ನೆಲೆಯಲ್ಲಿ ಒಂದು ದಿನಕ್ಕೆ ಬಾಲಕಿಯೊಬ್ಬಳನ್ನು ಕಲೆಕ್ಟರ್ ಸ್ಥಾನದಲ್ಲಿ ಕೂರಿಸಲಾಗಿತ್ತು.
ಒಂದು ದಿನದ ಕಲೆಕ್ಟರ್ ಆಗಿ ಆ ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತ ಶರ್ವಾಣಿಯು ಮಾತನಾಡುತ್ತಾ ನಾವು ಪ್ರಾಣಿಯನ್ನು ಆರೈಕೆ ಮಾಡುವುದನ್ನು ಹಾಗೂ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡುವುದನ್ನು ಮರೆತಿದ್ದೇವೆ ಎಂದಿದ್ದು, ಮುಂದೆ ತಾನೊಬ್ಬ ಶಿಕ್ಷಕಿಯಾಗಬೇಕೆಂದ ಕನಸಿದೆ, ಶಾಲೆಯಿಂದ ಅನಿವಾರ್ಯ ಕಾರಣಗಳಿಂದ ಡ್ರಾಪ್ ಔಟ್ ಆಗುವವರು ಕೂಡಾ ವಿದ್ಯಾವಂತರೇ ಆಗಿರುತ್ತಾರೆ ಎಂದು ಆಕೆ ಹೇಳಿದ್ದಾರೆ. ಇನ್ನು ಕೆಲಸದ ಜವಾಬ್ದಾರಿ ವಹಿಸಿಕೊಂಡ ಶರ್ವಾಣಿಗೆ ಎಸ್ ಸಿ / ಎಸ್ ಟಿ ಕಾಯ್ದೆಯ ಅಡಿ ಬ ಲಿ ಪ ಶುವಾಗಿದ್ದ ಒಬ್ಬ ಮಹಿಳೆಯ ಫೈಲನ್ನು ನೀಡಿ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅವಕಾಶ ನೀಡಲಾಗಿತ್ತು.
ಈ ವೇಳೆ ಶರ್ವಾಣಿ ಆ ಮಹಿಳೆಯ ಫೈಲನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿದ ನಂತರ ಅದರಲ್ಲಿ ಅಗತ್ಯ ಇರುವ ಕಡೆ ಮಾತ್ರ ಸಹಿ ಮಾಡಿದರು. ಇದನ್ನು ನೋಡಿದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಶರ್ವಾಣಿಯ ಬುದ್ಧಿಶಕ್ತಿಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಶರ್ವಾಣಿಗೆ ಕಾರ್ಯ ನಿರ್ವಹಣೆಯಲ್ಲಿ ಸಹಾಯ ಮಾಡಲು ಆರ್.ಡಿ.ಟಿ. ಆಸ್ಪತ್ರೆಯ ಡೈರೆಕ್ಟರ್ ವಿಶಾಲ್ ಫೆರರ್ ಅವರನ್ನು ನಿಯೋಜನೆ ಗೊಳಿಸಲಾಗಿತ್ತು. ಈ ವೇಳೆ ಶರ್ವಾಣಿ ಇನ್ನೊಂದು ಫೈಲ್ ಗೆ ಸಹಿ ಹಾಕಿದ ನಂತರ ರಾಜ್ಯ ಸರ್ಕಾರದ ಕಡೆಯಿಂದ ಇನ್ನು ಮುಂದೆ ಮನೆ ಕೆಲಸ ಅಲ್ಲದೇ ಬೇರೆ ಕಡೆ ವೃತ್ತಿ ಮಾಡುವ ಮಹಿಳೆಯರಿಗೆ ರಾತ್ರಿ 8 ರಿಂದ ಬೆಳಿಗ್ಗೆ 8 ರವರೆಗೆ ಯಾವುದೇ ಕಛೇರಿ ಕೆಲಸ ನೀಡಬಾರದು ಎನ್ನುವ ಆದೇಶ ಜಾರಿಗೊಳಿಸಲಾಗಿದೆ.
ಇದೇ ರೀತಿ ಶಾರದ ವಿದ್ಯಾಲಯದ ಹತ್ತನೇ ತರಗತಿ ವಿದ್ಯಾರ್ಥಿನಿ ಚಿನ್ಮಯಿಯನ್ನು ಒಂದು ದಿನದ ಮಟ್ಟಿಗೆ ಪುರಸಭೆಯ ಆಯುಕ್ತರನ್ನಾಗಿ ಮಾಡಿದಾಗ ಆಕೆ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಋತು ಚಕ್ರದ ಸಂದರ್ಭದಲ್ಲಿ ಸ್ಯಾನಿಟರಿ ಪ್ಯಾಡ್ ಗಳು ಸುಲಭವಾಗಿ ದೊರೆಯಬೇಕೆಂದು, ಇದಕ್ಕಾಗಿ ಶಾಲೆಗಳಲ್ಲಿ ಪ್ಯಾಡ್ ವೆಡ್ಡಿಂಗ್ ಮೆಷಿನ್ ಗಳನ್ನು ಕೂಡಾ ಅಳವಡಿಸಬೇಕು ಎಂದು ಆಕೆ ಆದೇಶವನ್ನು ಹೊರಡಿಸಿ ಎಲ್ಲರ ಗಮನವನ್ನು ಸೆಳೆದಿದ್ದಳು.