ಒಂದು ಪ್ಯಾಸೆಂಜರ್ ಟ್ರೈನ್ ತಯಾರಾಗಲು ಎಷ್ಟೊಂದು ಹಣ ಖರ್ಚಾಗುತ್ತದೆ ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ…
ದಿನಂಪ್ರತಿ ಲಕ್ಷಾವಧಿ ಜನರು ರೈಲಿನಿಂದ ಪ್ರವಾಸ ಮಾಡುತ್ತಾರೆ. ಕಾಮನ್ ಮ್ಯಾನ್ ಗಂತೂ ರೈಲು ತುಂಬಾ ಹೇಳಿ ಮಾಡಿಸಿದ ವಾಹನವಾಗಿದೆ. ಕಾರಣ ಕಡಿಮೆ ಖರ್ಚಿನಲ್ಲಿ ಒಳ್ಳೆಯ ಸೌಲಭ್ಯಗಳು ಇಲ್ಲಿ ದೊರೆಯುತ್ತವೆ. ಆದರೆ ನೀವು ಯಾವತ್ತಾದರೂ ಒಂದು ಪ್ಯಾಸೆಂಜರ್ ರೈಲು ತಯಾರಿಸಲು ಆಗುವ ಖರ್ಚು ಎಷ್ಟು ಎಂಬುದರ ಬಗ್ಗೆ ವಿಚಾರ ಮಾಡಿದ್ದೀರಾ?
ಮೀಡಿಯಾ ರಿಪೋರ್ಟ್ ಪ್ರಕಾರ ಒಂದು ಸಾಮಾನ್ಯ ಪ್ಯಾಸೆಂಜರ್ ಟ್ರೈನ್ ತಯಾರಿಸಲು 40 ಕೋಟಿ ರೂಪಾಯಿಗಳಷ್ಟು ಖರ್ಚು ಬರುತ್ತದೆ. ಈ ಟ್ರೈನಲ್ಲಿ ಏಕ್ಸ್ ಪ್ರೆಸ್ ಟ್ರೈನ್ ಗಿಂತಲೂ ಕಡಿಮೆ ಸೌಲಭ್ಯ ಹೊಂದಿರುತ್ತದೆ.
ಒಂದು ವೇಳೆ ಎಕ್ಸ್ ಪ್ರೆಸ್ ಟ್ರೈನ್ ಬಗ್ಗೆ ವಿಚಾರ ಮಾಡಿದರೆ ಅದರಲ್ಲಿ 24 ಕೋಚ್ ಗಳು ಇರುತ್ತವೆ. ಇದರ 1 ಕೋಚ್ ತಯಾರಿಸಲು ಕಡಿಮೆಯೆಂದರೆ ಎರಡು ಕೋಟಿ ರೂಪಾಯಿಗಳಷ್ಟು ಖರ್ಚಾಗುತ್ತದೆ. ಹೀಗೆ ಒಟ್ಟು ಖರ್ಚು 50 ಕೋಟಿ ರೂಪಾಯಿಗಳ ವರೆಗೆ ಹೋಗುತ್ತದೆ. ಹಾಗೆ ನೋಡಲಾಗಿ ಈ ಖರ್ಚು ಟ್ರೈನ್ ನಲ್ಲಿ ನೀಡುವ ವಿವಿಧ ಸೌಲಭ್ಯಗಳ ಮೇಲೆ ಅವಲಂಬಿಸಿರುತ್ತದೆ. ಇದರಲ್ಲಿ ಎಂಜಿನಿನ 20 ಕೋಟಿ ರೂಪಾಯಿಗಳನ್ನು ಆಡ್ ಮಾಡಬೇಕಾಗುತ್ತದೆ. ಟ್ರೈನಿನಲ್ಲಿ ಸದ್ಯಕ್ಕೆ ಲಭ್ಯವಿರುವ ಸಾಮಾನ್ಯ, ಸ್ಲೀಪರ್, ಎಸಿ ಹೀಗೆ ಬೇರೆ ಬೇರೆ ಕೋಚ್ ಗಳಿಗಾಗಿ ಹಣದ ಖರ್ಚು ಹೆಚ್ಚುತ್ತ ಹೋಗುತ್ತದೆ.
ಇನ್ನು ಮಹತ್ವದ ವಿಷಯ ತಿಳಿಯಬೇಕೆಂದರೆ, ಟ್ರೈನ್ನಲ್ಲಿ ಒಟ್ಟು ಎರಡು ಭಾಗಗಳು ಇರುತ್ತವೆ. 1 ಎಂಜಿನ್ ಸೆಕ್ಷನ್ ಇನ್ನೊಂದು ಕೋಚ್ ಸೆಕ್ಷನ್. ಒಂದು ಟ್ರೈನ್ ಇಂಜಿನ್ ತಯಾರಿಸಲು ಸುಮಾರು 20 ಕೋಟಿ ರೂಪಾಯಿಗಳು ಖರ್ಚಾಗುತ್ತದೆ. ಹಾಗೆ ನೋಡಲಾಗಿ ಎಂಜಿನ್ ತಯಾರಿಸಲು ಈ ಹಣ ತುಂಬಾ ಕಡಿಮೆ ಖರ್ಚು ಎನ್ನಬಹುದು. ಕಾರಣ ರೈಲಿನ ಎಂಜಿನ್ ಭಾರತದಲ್ಲಿಯೇ ನಿರ್ಮಾಣವಾಗುತ್ತದೆ.