ಒಂದು ವೇಳೆ ಅಜಯ್ ಜೊತೆ ಮದುವೆಯಾಗದಿದ್ರೆ ಶಾರುಖ್ ಖಾನ್ ಜೊತೆ ಮದುವೆಯಾಗ್ತಿದ್ರಾ? ಎಂದು ಕೇಳಿದ ಪ್ರಶ್ನೆಗೆ ಕಾಜೋಲ್ ಕೊಟ್ಟ ಉತ್ತರವಿದು!

ಚಲನಚಿತ್ರಗಳಲ್ಲಿ ಕೆಲವೊಂದು ಜೋಡಿಗಳು ತುಂಬಾ ಯಶಸ್ವಿಯಾಗಿವೆ. ರಸಿಕರು ಈ ಜೋಡಿಗಳನ್ನು ಪರದೆಯ ಮೇಲೆ ಮೇಲಿಂದ ಮೇಲೆ ನೋಡಲು ಇಷ್ಟಪಡುತ್ತಾರೆ. ಕನ್ನಡದಲ್ಲಿ ಅನಂತನಾಗ್-ಲಕ್ಷ್ಮಿ, ಅಂಬರೀಶ್-ಅಂಬಿಕಾ (ಅಂಬಿ ಜೋಡಿ) ರಾಜಕುಮಾರ್-ಗೀತಾ ಹೀಗೆ ಕೆಲವು ಜೋಡಿಗಳು ಸೂಪರ್ ಹಿಟ್ ಚಿತ್ರಗಳನ್ನು ನೀಡಿವೆ.

ಇದೇ ಪ್ರಕಾರ ಹಿಂದಿಯಲ್ಲಿಯೂ ಶಾರುಖ್ ಖಾನ್ ಮತ್ತು ಕಾಜಲ್ ಜೋಡಿಯು ತುಂಬ ಜನಪ್ರಿಯವಾಗಿದೆ. ಇವರಿಬ್ಬರು ಜೊತೆಯಾಗಿ ನಟನೆ ಮಾಡಿದ ಚಿತ್ರಗಳು ಎಷ್ಟು ಹಣವನ್ನು ಗಳಿಸಿವೆ ಅಷ್ಟು ಹಣವನ್ನು ಇಲ್ಲಿಯವರೆಗೆ ಬೇರೆ ಯಾವ ಜೋಡಿಯ ಚಿತ್ರಗಳು ಇಷ್ಟೊಂದು ಹಣ ಗಳಿಸಿಲ್ಲ. ರಸಿಕರು ಇವರಿಬ್ಬರ ಜೋಡಿಯ ಚಿತ್ರಗಳನ್ನು ತುಂಬಾ ಇಷ್ಟದಿಂದ ನೋಡುತ್ತಾರೆ.

ರಸಿಕರು ಪರದೆಯ ಮೇಲೆ ಇಷ್ಟವಾದ ಜೋಡಿಗಳು ನಿಜವಾದ ಜೀವನದಲ್ಲಿ ಜೊತೆಯಾಗಿ ಇರಬೇಕೆಂದು ವಿಚಾರ ಮಾಡುತ್ತಾರೆ.

ಇತ್ತೀಚೆಗೆ ಕಾಜಲ್ ಳ ಫ್ಯಾನ್ ಒಬ್ಬನು ಕಾಜಲ್ ಗೆ ಪ್ರಶ್ನೆಯೊಂದನ್ನು ಮಾಡಿದ್ದಾನೆ. ನಿಮ್ಮ ಜೀವನದಲ್ಲಿ ಅಜಯ್ ದೇವಗನ್ ಅವರು ಬರದೇ ಇದ್ದಾಗ ನೀವು ಶಾರುಖ್ ಖಾನ್ ಜೊತೆಗೆ ಮದುವೆ ಮಾಡಿಕೊಳ್ಳುತ್ತಿದ್ದೀರಾ ಎಂಬ ಪ್ರಶ್ನೆಯನ್ನು ಕೇಳಿದ್ದಾನೆ.

ಅಭಿಮಾನಿಯು ಕೇಳಿದ ಈ ಪ್ರಶ್ನೆಗೆ ಕಾಜಲ್ ಸಹಿತ ಮುಕ್ತವಾಗಿ ಉತ್ತರಿಸಿದ್ದಾರೆ. ಕಾಜಲ್ ಹೀಗೆ ಹೇಳುತ್ತಾರೆ, ಅದಕ್ಕಾಗಿ ಆತ ನನಗೆ ಪ್ರಪೋಸ್ ಮಾಡಬೇಕಲ್ಲ? ಎಂದು ಮರುಪ್ರಶ್ನೆ ಹಾಕಿದ್ದಾರೆ.

ಸದ್ಯ ಕಾಜಲ್ ಅವರು ಅಜಯ್ ದೇವಗನ್ ಅವರ ಜೊತೆಗೆ ಮದುವೆಯಾಗಿ ಇಬ್ಬರು ಸಂತೋಷದಿಂದ ಇದ್ದಾರೆ. ಇಬ್ಬರು ಯಾವತ್ತು ಚರ್ಚೆಯಲ್ಲಿ ಇರುತ್ತಾರೆ. ಅಷ್ಟೇ ಅಲ್ಲ ತಮ್ಮ ವೈವಾಹಿಕ ಜೀವನದಲ್ಲಿ ಅಜಯ್ ಮತ್ತು ಕಾಜಲ್ ಇಬ್ಬರು ಒಬ್ಬರಿಗೊಬ್ಬರನ್ನು ಕೀಟಲೆ ಮಾಡುವ ಅವಕಾಶ ಯಾವತ್ತು ಬಿಡುವುದಿಲ್ಲ.