ಒಂದು ಸಮಯದಲ್ಲಿ ಐಶ್ವರ್ಯಾ ರೈ ಈ ವ್ಯಕ್ತಿಯನ್ನು ತುಂಬಾ ಪ್ರೀತಿಸುತ್ತಿದ್ದರು, ಆದರೆ ಫೇಮಸ್ ಆಗುತ್ತಲೇ ತಮ್ಮ ಜೀವನದಿಂದ ಹೊರಗೆ ತಳ್ಳಿಬಿಟ್ಟರು!
ಅಂದಕ್ಕೆ ಮತ್ತೊಂದು ಹೆಸರೆಂದರೆ ಐಶ್ವರ್ಯ ರೈ.
ಐಶ್ವರ್ಯಾ ರೈ ತನ್ನ ಅಂದ, ಅತ್ಯುತ್ತಮ ನಟನೆ ಹಾಗೂ ಜಗತ್ಪ್ರಸಿದ್ಧ ಸೂಪರ್ ಮಾಡೆಲ್ ಆಗಿ ದೊಡ್ಡ ಹೆಸರನ್ನು ಮಾಡಿದ್ದಾರೆ. ಈ ಜಗತ್ತಿನಲ್ಲಿ ಆಕೆಯಂತಹ ಅಪರೂಪ ಸೌಂದರ್ಯ ರಾಶಿ ಮತ್ತೊಂದು ಇಲ್ಲ ಎಂಬುದು ಕೂಡಾ ವಾಸ್ತವ. ಇತ್ತೀಚಿನ ವರ್ಷಗಳಲ್ಲಿ ಪ್ರಿಯಾಂಕಾ ಚೋಪ್ಡಾ ಮತ್ತು ದೀಪಿಕಾ ಪಡುಕೋಣೆ ಹಾಲಿವುಡ್ನಲ್ಲಿ ಸಾಕಷ್ಟು ಹೆಸರು ಮಾಡಿರುವುದು, ಆದರೆ ವಾಸ್ತವವಾಗಿ ಐಶ್ವರ್ಯಾ ಅವರಿಂದಾಗಿ ಬಾಲಿವುಡ್ಗೆ ವಿಶ್ವದಾದ್ಯಂತ ಮಾನ್ಯತೆ ಸಿಕ್ಕಿದೆ ಎಂಬುದು ಕೂಡಾ ನಿಜ, ಐಶ್ವರ್ಯಾಗೆ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ.

ಐಶ್ವರ್ಯ ರೈ ಖಾಸಗಿ ಜೀವನದ ಬಗ್ಗೆ ಮಾತನಾಡುವುದಾದರೆ, ಐಶ್ವರ್ಯ ರೈ ಲವ್ ಲೈಫ್ ನಲ್ಲಿ ಇದ್ದವರು ಸಲ್ಮಾನ್ ಖಾನ್ ಮತ್ತು ವಿವೇಕ್ ಓಬರಾಯ್ ಜೊತೆ ಡೇಟಿಂಗ್ ಮಾಡಿದ ವಿಚಾರ ರಹಸ್ಯವೇನೂ ಅಲ್ಲ. ಅದರಲ್ಲೂ ಸಲ್ಮಾನ್ ಖಾನ್ ಜೊತೆ ಹೆಚ್ಚು ಸಮಯ ಐಶ್ವರ್ಯ ಅವರ ಸಂಬಂಧ ಇತ್ತಾದರೂ, ಕೆಲವು ಕಾರಣಗಳಿಂದ ಐಶ್ವರ್ಯ ಸಲ್ಮಾನ್ ಖಾನ್ ನಿಂದ ದೂರವಾಗಿದ್ದು ಕೂಡಾ ವಾಸ್ತವ. ಅನಂತರ ಅಮಿತಾಬ್ ಅವರ ಮಗ ಅಭಿಷೇಕ್ ಬಚ್ಚನ್ ಜೊತೆ ಸಾಂಸಾರಿಕ ಜೀವನಕ್ಕೆ ಅಡಿಯಿಟ್ಟವರು ಐಶ್ವರ್ಯ ರೈ.

ಆದರೆ ನಮಗೆಲ್ಲರಿಗೂ ತಿಳಿಯದೇ ಇರುವ ಮತ್ತೊಂದು ವಿಷಯ ಇದೆ. ಅದೇನೆಂದರೆ ಐಶ್ವರ್ಯ ರೈ ಜೀವನದಲ್ಲಿ ಈ ಮೂವರು ಅಲ್ಲದೇ ಮತ್ತೊಬ್ಬರು ಇದ್ದರು ಎಂಬುದು ಅನೇಕರಿಗೆ ತಿಳಿದಿಲ್ಲ. ಮದುವೆಗೆ ಮುನ್ನ ಸಲ್ಮಾನ್ ಮತ್ತು ವಿವೇಕ್ ಅಲ್ಲದೇ ಐಶ್ವರ್ಯ ಮತ್ತೊಬ್ಬರನ್ನು ಮನಸಾರೆ ಪ್ರೀತಿಸಿದ್ದರು, ಬಹಳವಾಗಿ ಇಷ್ಟ ಪಟ್ಟಿದ್ದರು ಎನ್ನುವುದು ಅಷ್ಟಾಗಿ ಯಾರಿಗೂ ತಿಳದೇ ಇಲ್ಲ. ಐಶ್ವರ್ಯ ಅಷ್ಟೊಂದು ಇಷ್ಟಪಟ್ಟ ಆ ವ್ಯಕ್ತಿಯ ಹೆಸರು ರಾಜೀವ್ ಮೂಲ್ ಚಂದಾನಿ. ಯಾರು ಈ ರಾಜೀವ್ ಮೂಲ್ ಚಂದಾನಿ ಎನ್ನುವ ಪ್ರಶ್ನೆ ಮೂಡಿದ್ದರೆ ಉತ್ತರ ತಿಳಿಯೋಣ ಬನ್ನಿ.
ನಟಿ ಐಶ್ವರ್ಯ ರೈ ಚಿತ್ರ ಜಗತ್ತಿಗೆ ಬರುವ ಮೊದಲು ಮಾಡೆಲ್ ಆಗಿದ್ದವರು. ಮಾಡೆಲಿಂಗ್ ಮಾಡುವ ದಿನಗಳಲ್ಲಿ ಮಾಡಲಿಂಗ್ ಶೋ ಒಂದರಲ್ಲಿ ಐಶ್ವರ್ಯ ಹಾಗೂ ರಾಜೀವ್ ಭೇಟಿಯಾಗಿದ್ದರು. ವೃತ್ತಿಯಿಂದ ರಾಜೀವ್ ಮೂಲ್ ಚಂದಾನಿ ಕೂಡಾ ಒಬ್ಬ ಮಾಡೆಲ್ ಆಗಿದ್ದವರು. ಜೊತೆ ಜೊತೆಯಾಗಿ ಶೋಗಳನ್ನು ಮಾಡುತ್ತಿದ್ದ ಐಶ್ವರ್ಯ ಮತ್ತು ರಾಜೀವ್ ನಡುವಿನ ಸ್ನೇಹ ಪ್ರೇಮವಾಗಿ ಬದಲಾಗಲು ಹೆಚ್ಚಿನ ಸಮಯ ಹಿಡಿಯಲಿಲ್ಲ. ಇಬ್ಬರೂ ದೀರ್ಘಕಾಲದವರೆಗೆ ರಿಲೇಶನ್ ಶಿಪ್ ನಲ್ಲಿ ಇದ್ದರು. ಆದರೆ 1994 ರ ನಂತರ ಎಲ್ಲಾ ಬದಲಾಯಿತು.

1994 ರಲ್ಲಿ ಐಶ್ವರ್ಯ ರೈ ಭುವನ ಸುಂದರಿ (Mis World) ಪಟ್ಟವನ್ನು ಪಡೆದರು. ಅನಂತರ ಆಕೆಯ ಯಶಸ್ಸಿನ ಪಯಣ ಮುಂದುವರೆಯಿತು. ಐಶ್ವರ್ಯ ರೈ ಮೊದಲಿಗಿಂತ ಎತ್ತರಕ್ಕೆ ಹೋದರು, ಆಕೆ ಸೂಪರ್ ಮಾಡೆಲ್ ಆಗಿ ಇನ್ನಷ್ಟು, ಮತ್ತಷ್ಟು ಎತ್ತರಕ್ಕೆ ಏರಿದಂತೆ ಐಶ್ವರ್ಯ ರೈ ಮತ್ತು ರಾಜೀವ್ ನಡುವೆ ಒಂದು ಅಂತರ ಬೆಳೆಯುತ್ತಾ ಹೋಯಿತು. ಇಬ್ಬರೂ ದೂರ ದೂರವಾದರು. ಕೊನೆಗೆ ಐಶ್ವರ್ಯರೈ ರಾಜೀವ್ ಮೂಲ್ ಚಂದಾನಿ ಜೊತೆಗೆ ತಮ್ಮ ರಿಲೇಶನ್ ಶಿಪ್ ಗೆ ಫುಲ್ ಸ್ಟಾಪ್ ಹಾಕಿದರು. ಅದಾದ ನಂತರ ಸಲ್ಮಾನ್ ಖಾನ್, ವಿವೇಕ್ ಓಬೆರಾಯ್ ಅವರು ಐಶ್ವರ್ಯ ಜೀವನದಲ್ಲಿ ಬಂದರು. ಆದರೆ ಕೊನೆಗೆ ಐಶ್ವರ್ಯ ರೈ ಬಚ್ಚನ್ ಕುಟುಂಬದ ಸೊಸೆಯಾಗಿ ಉಳಿದರು.