ಒಂದೇ ರೂಪಾಯಿಯಲ್ಲಿ ಇಡ್ಲಿ ಕೊಡುವ ಅಮ್ಮಾಳ ಕೆಲಸ ನೋಡಿ ಶೇಫ್ ವಿಕಾಸ್ ಖನ್ನಾ ನೀಡಿದರು ಗಿಫ್ಟ್!

ಲಾಕ್ ಡೌನ್ ಸಂದರ್ಭದಲ್ಲಿ ಯಾರು ಹೊಟ್ಟೆಗೆ ಊಟವಿಲ್ಲದೆ ಉಪವಾಸವಿರಬಾರದೆಂದು ಬರೀ ಒಂದು ರೂಪಾಯಿಗೆ ಇಡ್ಲಿ ಮಾರಿದ ಅಮ್ಮಳಿಗೆ ಸೆಲಿಬ್ರಿಟಿ ಶೇಫ್ ವಿಕಾಸ್ ಖನ್ನಾ ಅವರು ಒಂದು ವಿಶೇಷ ಗಿಫ್ಟ್ ಕೊಟ್ಟಿದ್ದಾರೆ.

ಚೆನ್ನೈ: ತಮಿಳುನಾಡಿನ ಕಮಲಾಥಲ್ ಅಮ್ಮಾ ಇವರು ಕಳೆದ 30/35 ವರ್ಷಗಳಿಂದ ಬರೀ ಒಂದು ರೂಪಾಯಿಯಲ್ಲಿ ಇಡ್ಲಿ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರ ಹೊಟ್ಟೆ ತುಂಬಬೇಕು ಅನ್ನೋ ಉದ್ದೇಶ ಬಿಟ್ಟರೆ ಬೇರೆ ಯಾವುದು ಅಲ್ಲ. ಈ ಲಾಕ್ ಡೌನ್ ನಲ್ಲಿಯೂ ಒಂದು ರುಪಾಯಿಯಲ್ಲಿಯೇ ಇಡ್ಲಿ ಕೊಡುತ್ತಿದ್ದಾರೆ. ಅಮ್ಮಾಳ ಈ ಕೆಲಸ ಸೆಲಿಬ್ರಿಟಿ ಶೇಫ್ ವಿಕಾಸ್ ಖನ್ನಾ ಅವರಿಗೆ ಗೊತ್ತಾದ ಮೇಲೆ ಅವರು ಅಮ್ಮಾಳಿಗೆ ಸಹಾಯ ಮಾಡಿದ್ದಾರೆ.

ಕೊಯಿಮತ್ತೂರಿನ ಕಮಲಾಥಲ್ ಅಮ್ಮಾಳ ಮಾಹಿತಿ ಯಾರಾದರೂ ಕೋಡುತ್ತಿರಾ ಅಂತ ಟ್ವೀಟರ್ ನಲ್ಲಿ ಕೇಳಿದಾಗ ಅನೇಕರು ಅವಳ ಬಗ್ಗೆ ಮಾಹಿತಿ ನೀಡಿದ್ದಾರೆ. ಹೀಗೆ ವಿಕಾಸ್ ಅವರು ಟ್ವಿಟ್ಟರ್ ಮುಖಾಂತರ ಕಮಲಾಥಲ್ ಅಮ್ಮಾಳ ಮಾಹಿತಿ ಪಡೆದಿದ್ದಾರೆ. ನಂತರ ನನ್ನ ಕಡೆ 350 ಕಿಲೊಗ್ರಾಮ್ ಅಕ್ಕಿ ಇದ್ದು ಅದನ್ನು ಅಮ್ಮಾಳಿಗೆ ಮುಟ್ಟಿಸಬೇಕಿದೆ. ಅದಕ್ಕಾಗಿ ಅವಳಿಗೆ ಸಂಪರ್ಕ ಕಲ್ಪಿಸಲು ಸಹಾಯ ಮಾಡಿ ಎಂದಿದ್ದರು.

ಅಮ್ಮಾಳ ವರೆಗೆ ಅಕ್ಕಿಯನ್ನು ಮುಟ್ಟಿಸಲು ಅನೇಕರು ವಿಕಾಸ್ ಅವರಿಗೆ ಸಹಾಯ ಮಾಡಿದರು. ಸಹಾಯ ಮಾಡಿದ್ದನ್ನು ಸಹಿತ ವಿಕಾಸ್ ಅವರು ನಂತರ ಟ್ವಿಟ್ಟರ್ ನಲ್ಲಿ ನಮೂದಿಸಿದ್ದಾರೆ.

ಶೇಫ್ ವಿಕಾಸ್ ಖನ್ನಾ ಅವರು ಇದಕ್ಕೂ ಮೊದಲು ಭಾರತದಲ್ಲಿಯೇ 75 ಕ್ಕೂ ಹೆಚ್ಚು ಪಟ್ಟಣಗಳಲ್ಲಿ ಬಡವರಿಗಾಗಿ ದಿನಸಿ ವಸ್ತುಗಳನ್ನು ಹಂಚಿದ್ದಾರೆ. ಕಮಲಾಥಲ್ ಅವರ ಈ ಕೆಲಸಿನಿಂದ ಬರೀ ವಿಕಾಸ್ ಖನ್ನಾ ಮಾತ್ರವಲ್ಲ ಅಗ್ರಗಣ್ಯ ಉದ್ಯೋಗಪತಿಯಾದ ಆನಂದ್ ಮಹಿಂದ್ರಾ ಅವರು ಸಹಿತ ಪ್ರಭಾವಿತರಾಗಿದ್ದಾರೆ. ಆನಂದ್ ಮಹಿಂದ್ರಾ ಅವರು ಅಮ್ಮಾಳಿಗೆ ಗ್ಯಾಸ್ ಮತ್ತು ಸಿಲಿಂಡರ್ ಗಳ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ.