ಒಂದೇ AC ಯಿಂದ ಎರಡು ಕೋಣೆಗಳಿಗೆ ತಂಪಾದ ಹವೆ; ನಮ್ಮ ದೇಶದಿಂದ ಹೊರಗೆ ಹೋಗಬಾರದು ಈ ಟೆಕ್ನಿಕ್.

ಸೋಶಿಯಲ್ ಮೀಡಿಯಾದ ಜಗತ್ತು ತುಂಬಾ ಅದ್ಭುತವಾಗಿದೆ. ಇಲ್ಲಿ ಕಂಡು ಬರುವ ಸಾಕಷ್ಟು ವಿಷಯಗಳು ಕೆಲವೊಮ್ಮೆ ತುಂಬಾ ಗಮ್ಮತ್ತಿನಿಂದ ಕೂಡಿರುತ್ತವೆ. ಎಲ್ಲ ವರ್ಗದ ಜನರಿಗೆ ಇಲ್ಲಿ ಹರಿದಾಡುವ ವಿಶೇಷ ಸಂಗತಿಗಳು ತಮ್ಮತ್ತ ಸೆಳೆಯುತ್ತವೆ. ಸದ್ಯ ಮೋಜಿನ ಒಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಫೋಟೋ ನೋಡಲು ತುಂಬಾ ವಿಶೇಷವಾಗಿದೆ. ಇದರಲ್ಲಿ ಭಾರತೀಯರ ಜುಗಾಡ್ ಅಥವಾ ಟೆಕ್ನಿಕ್ ಇದೆ ಎಂದು ಹೇಳಬಹುದು. ವೈರಲ್ ಆಗುತ್ತಿರುವ ಈ ಫೋಟೋದಲ್ಲಿ ಸ್ಪ್ಲಿಟ್ AC ಎರಡು ಭಾಗಗಳಲ್ಲಿ ಭಾಗವಾಗಿದ್ದನ್ನು ನೋಡಬಹುದು. ಒಂದೇ AC ಯಿಂದ ಎರಡು ಕೋಣೆಗಳಲ್ಲಿ ತಂಪಾದ ಹವೆ ಪಸರಿಸುವ ಸಲುವಾಗಿ ಮಾಡಿದ ಸೂಪರ್ ಐಡಿಯಾ ಇಲ್ಲಿ ನೋಡಬಹುದು. ಪ್ರಸ್ತುತ ಈ ತಮಾಷೆಯ ಫೋಟೋವನ್ನು ಟ್ವಿಟರ್ ನಲ್ಲಿ ಅನುರಾಗ ವರ್ಮ ಹೆಸರಿನ ವ್ಯಕ್ತಿಯು ಶೇರ್ ಮಾಡಿದ್ದಾನೆ. ಇದರ ಜೊತೆಗೆ ಕ್ಯಾಪ್ಷನ್ ನಲ್ಲಿ, 2011ರ ಸಮಯದಲ್ಲಿ ನಾನು ಮುಂಬೈಯ ಹೋಟೆಲ್ ಒಂದರಲ್ಲಿ ಈ ರೂಮ್ ಬುಕ್ ಮಾಡಿದ್ದೆ. ಹೋಟೆಲ್ ಬುಕ್ ಮಾಡುವಾಗ ಮ್ಯಾನೇಜರ್ ನನ್ನ ಜೊತೆಗೆ ಸ್ಪ್ಲಿಟ್ AC ನೀಡುವ ಮಾತನ್ನು ಹೇಳಿದ್ದನು. ಆತ ಹೇಳಿದಂತೆ ನಡೆದುಕೊಂಡ ರೀತಿ ಹೀಗಿತ್ತು. ಇಲ್ಲಿ ಒಂದೇ ಒಂದು AC ಯ ಮುಖಾಂತರ ಎರಡು ಕೋಣೆಗಳಿಗೆ ತಂಪಾದ ಹವೆ ಪಸರಿಸುತ್ತಿತ್ತು.

ವೀಡಿಯೋ ನೋಡಿ.

ಅನುರಾಗ ಅವರು ಟ್ವೀಟ್ ಮಾಡಿದ ಪ್ರಕಾರ ಪ್ರಸ್ತುತ ಫೋಟೋ 2011 ರಲ್ಲಿಯದಿದೆ. ಈ ಟ್ವೀಟ್ ನೋಡಿದ ಜನರಿಗೆ ತುಂಬಾ ತಮಾಷೆ ಎನ್ನಿಸಿದೆ. ಈ ರೀತಿಯ ಐಡಿಯಾ ಅಥವಾ ಜುಗಾಡ್ ಬರೀ ಭಾರತದಲ್ಲಷ್ಟೇ ನೋಡಲು ಸಿಗುತ್ತದೆ ಎನ್ನುತ್ತಿದ್ದಾರೆ. ಫ್ರೆಂಡ್ಸ್, ಹೇಗಿದೆ ಈ ಐಡಿಯಾ?