ಒಮ್ಮೆ ನಕ್ಕು ಬಿಡಿ! ನಿಮಗಾಗಿ ಹಾಸ್ಯದ ವಿವಿಧ ಪಂಚ್ ಗಳು; ಇಲ್ಲಿವೆ ಮೂಡ್ ಫ್ರೆಶ್ ಮಾಡುವ ಸ್ಪೆಷಲ್ ಟ್ಯಾಬ್ ಲೆಟ್ಸ್ ಗಳು…

  • ಹೆಂಡತಿ – ರೀ ಇಲ್ಲಿ ಸ್ವಲ್ಪ ಕೇಳ್ತೀರಾ? ನಾನು ಮೊನ್ನೆ ಖರೀದಿಸಿದ ಡ್ರೆಸ್ ಹೊಸ ಡಿಟರ್ಜೆಂಟ್ ನಿಂದ ವಾಶ್ ಮಾಡಿದೆ, ಅದು ತುಂಬಾ ಟೈಟ್ ಆಗ್ತಿದೆ. ಎನ್ ಮಾಡ್ಲಿ? ಗಂಡ – ಈಗ ನೀನು ಸಹ ಅದೇ ಡಿಟರ್ಜೆಂಟ್ ನಿಂದ ಜಳಕ ಮಾಡು, ಅಂದ್ರೆ ಆ ಡ್ರೆಸ್ ಸರಿಯಾಗಿ ಬರುತ್ತೆ.
  • ಸುಂದರ ಭವ್ಯವಾದ ಹೋಟೆಲ್ ನಲ್ಲಿ ಮಹಿಳೆಯೊಬ್ಬಳು ಎಂಟ್ರಿ ಮಾಡುತ್ತಾಳೆ.
    ವೇಟರ್ – ಮೊದಲು ನೀವು ಏನು ತೆಗೆದುಕೊಳ್ಳುತ್ತೀರಾ?
    ಮಹಿಳೆ – ಮೊದಲು ನಾನು ಹತ್ತಾರು ಸೆಲ್ಫಿಗಳನ್ನು ತೆಗೆದುಕೊಳ್ಳುತ್ತೇನೆ. ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕ್ತೇನೆ, ನೀನು 15 ನಿಮಿಷ ಬಿಟ್ಟು ಬಾ.
  • ಹುಡುಗಿಯೊಬ್ಬಳು ತುಂಬಾ ಟೈಟ್ ಆದ ಚಪ್ಪಲಿ ಧರಿಸಿ ಹೇಗೋ ನಡೆಯುತ್ತಿದ್ದಳು.
    ಆಂಟಿಯೊಬ್ಬಳು ಆ ಹುಡುಗಿಗೆ ಕೇಳುತ್ತಾಳೆ….
    ಏನಮ್ಮಾ ಚಪ್ಪಲಿ ಆನ್ ಲೈನ್ ಖರೀದಿಸಿದಿಯಾ?
    ಹುಡುಗಿ – ಇಲ್ಲ, ಮರದಲ್ಲಿಂದ ಕಡಿದು ತಂದೆ.
    ಆಂಟಿ – ಅಯ್ಯೋ ಹುಡುಗಿ ಯಾಕಮ್ಮಾ ಇಷ್ಟು ಗಡಿಬಿಡಿ ಮಾಡಿದೆ? ಇನ್ನು ಒಂದೆರಡು ದಿನಗಳನ್ನು ಬಿಟ್ಟಿದ್ದರೆ ಚೆನ್ನಾಗಿ ಮರದಲ್ಲಿಯೇ ಪಕ್ವವಾಗುತ್ತಿದ್ದವಲ್ಲ.
    ಎಂದು ಆಂಟಿ ಹುಡುಗಿಗೆ ಟಾಂಟ್ ಹೊಡೆದಳು.
  • ಹುಡುಗ – ನಿಮ್ಮ ಮಗಳಿಗೆ ನಾನು 10 ವರ್ಷಗಳಿಂದ ಪ್ರೀತಿಸುತ್ತಿದ್ದೇನೆ.
    ಹುಡುಗಿಯ ತಂದೆ – ಮತ್ತೆ ಈಗೇನು? ಪೆನ್ಶನ್ ಕೇಳಲು ಬಂದಿರುವೆಯಾ?
  • ಅವಳು – ಸ್ತ್ರೀ ಮತ್ತು ಪುರುಷರಲ್ಲಿ ಯಾರು ಉತ್ತಮ?
    ಅವನು – ಪುರುಷ.
    ಅವಳು – ಹೇಗೆ
    ಅವನು – ನಾನು ಇಲ್ಲಿಯವರೆಗೆ ಯಾವುದೇ ಸ್ತ್ರೀಯ ಹೆಸರು ಉತ್ತಮ ಅಂತ ಕೇಳಿಯೇ ಇಲ್ಲ.
  • ಪತ್ನಿ – ರೀ ಮಾಸ್ಕ್ ಹಾಕ್ಕೊಳ್ಳಿ.
    ಪತಿ – ಯಾಕೆ?
    ಪತ್ನಿ – ಹಾಕ್ಕೊಳ್ಳಿ ಅಂತ ಹೇಳಿದ್ನಲ್ಲಾ ಆಯ್ತು, ಮಾಸ್ಕ್ ಹಾಕ್ಕೊಳ್ಳಿ.
    ಪತಿ – ಇದು ಒಳ್ಳೆ ಕಥೆ ಆಯ್ತಲ್ಲಾ, ಯಾಕೆ? ಈಗ ನಾನು ಮನೇಲೇ ಇದೀನಲ್ಲ?
    ಪತಿ – ಏನಿಲ್ಲ ನಿಮ್ಮ ಮುಖ ನೋಡಿ ನೋಡಿ ಸಾಕಾಗಿದೆ ಅದಕ್ಕೆ.