ಒಲಂಪಿಕ್ಸ್ ನಲ್ಲಿ ಕ್ರೀಡಾಪಟು ಗಳಿಗೆ ನೀಡಲಾಗುವ ಪದಕಗಳ ಅಸಲಿ ಮೌಲ್ಯ ಎಷ್ಟು?? ನಾವು ಇವುಗಳನ್ನು ಪಡೆಯಲು ಸಾಧ್ಯವೇ??
ಒಲಂಪಿಕ್ಸ್ ನ ಪ್ರತಿ ಸ್ಪರ್ಧೆಯಲ್ಲಿ ಅಗ್ರಸ್ಥಾನ ಪಡೆದವರಿಗೆ ಅನುಕ್ರಮವಾಗಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ನೀಡಿ ಗೌರವಿಸಲಾಗುತ್ತದೆ. ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರೀಡಾಕಾರರಿಗೆ ಪದಕಗಳನ್ನು ನೀಡಿ ಗೌರವಿಸುವ ಸಂಪ್ರದಾಯವು ಸೇಂಟ್ ಲೂಯಿಸ್ 1904 ರ ಒಲಂಪಿಕ್ಸ್ ನಿಂದ ಪ್ರಾರಂಭವಾಯಿತು. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನೀಡಲಾಗುವ ಪದಕಗಳನ್ನು ವಿನ್ಯಾಸಗೊಳಿಸುವುದು ಅತಿಥೇಯ ನಗರದ ಸಂಘಟನಾ ಸಮಿತಿಯ ಜವಾಬ್ದಾರಿಯಾಗಿರುತ್ತದೆ. ಕ್ರೀಡಾಕೂಟದ ಪ್ರತಿ ಆವೃತ್ತಿಯೊಂದಿಗೆ ಪದಕಗಳ ವಿನ್ಯಾಸವು ಸಹಾ ಬದಲಾಗುತ್ತಿರುತ್ತದೆ. ಟೋಕಿಯೋ ಒಲಿಂಪಿಕ್ಸ್ 2020 ಕೆಲವೇ ದಿನಗಳ ಹಿಂದಷ್ಟೇ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಈ ಬಾರಿ ಒಲಂಪಿಕ್ಸ್ ನಲ್ಲಿ ಅಮೆರಿಕ ಅತಿ ಹೆಚ್ಚು ಪದಕಗಳನ್ನು ಪಡೆದುಕೊಂಡ ದೇಶ ಎನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಅಮೇರಿಕಾ ಕೊಟ್ಟು 39 ಸ್ವರ್ಣ, 41 ಬೆಳ್ಳಿ ಹಾಗೂ 33 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಇದೇ ವೇಳೆ ಚೀನಾ ಎರಡನೇ ಸ್ಥಾನವನ್ನು ಹಾಗೂ ಜಪಾನ್ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಭಾರತವು ಈ ವರ್ಷ ಒಂದು ಸ್ವರ್ಣ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ 48ನೇ ಸ್ಥಾನವನ್ನು ಪಡೆದುಕೊಂಡಿದೆ. ಈ ವರ್ಷ ಒಲಂಪಿಕ್ಸ್ ನ ಪದಕಗಳನ್ನು ಜಪಾನಿನ ಜುನಿಚಿ ಕವಾನಿಶಿ ವಿನ್ಯಾಸಗೊಳಿಸಿದ್ದಾರೆ. ಒಲಂಪಿಕ್ಸ್ ನಲ್ಲಿ ಪದಕವನ್ನು ಗಳಿಸಿದ ಯಾವುದೇ ಕ್ರೀಡಾಕಾರನಿಗೇ ಆಗಲೀ ಆ ಪದಕವು ಅತ್ಯಮೂಲ್ಯವಾಗಿರುತ್ತದೆ.
ಹಾಗಾದರೆ ಒಲಿಂಪಿಕ್ಸ್ ನಲ್ಲಿ ನೀಡಲಾಗುವ ಈ ಪದಕಗಳ ನಿಜವಾದ ಮೌಲ್ಯ ಎಷ್ಟು?? ಅವುಗಳನ್ನು ನಾವು ಕೊಂಡುಕೊಳ್ಳಲು ಅವಕಾಶ ಇದೆಯೇ ?? ಎನ್ನುವುದಾದರೆ ಖಂಡಿತ ಇದೆ. ಈ ಲೇಖನದಲ್ಲಿ ಅದೇ ವಿಷಯವನ್ನು ನಾವು ತಿಳಿಯಲು ಹೊರಟಿದ್ದೇವೆ, ಒಲಂಪಿಕ್ ನ ಪದಕಗಳನ್ನು ಪಡೆದುಕೊಳ್ಳಲು ಒಬ್ಬ ಒಲಂಪಿಯನ್ ಆಗಬೇಕೆನ್ನುವ ಅವಶ್ಯಕತೆ ಏನಿಲ್ಲ. ಏಕೆಂದರೆ ಇವುಗಳನ್ನು ಗಿರವಿ ಅಂಗಡಿಗಳು ಹಾಗೂ ಹರಾಜು ಬ್ಲಾಕ್ ಗಳಿಂದ ಖರೀದಿಸುವ ಅವಕಾಶಗಳು ಇದೆ. ಇಲ್ಲಿ ಸಂಗ್ರಹಕಾರರು ಇವುಗಳನ್ನು ಅಪರೂಪದ ನಾಣ್ಯಗಳು, ಕಾಮಿಕ್ ಪುಸ್ತಕಗಳು ಅಥವಾ ಇತರೆ ಕ್ರೀಡಾ ಕಲಾಕೃತಿಗಳ ಹಾಗೆ ಸಂಗ್ರಹಿಸುತ್ತಾರೆ. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಶೂಟಿಂಗ್ ವಿಭಾಗದಲ್ಲಿ ಗೆದ್ದುಕೊಂಡಿದ್ದ ರಜತ ಪದಕವನ್ನು ಇತ್ತೀಚೆಗಷ್ಟೇ ಕೇವಲ ಸಾವಿರದ 283 ಡಾಲರ್ ಗಳಿಗೆ ಮಾರಾಟ ಮಾಡಲಾಗಿದೆ.

1956 ರ ಚಳಿಗಾಲದ ಕ್ರೀಡಾಕೂಟದಲ್ಲಿ ಗೆದ್ದ ಕಂಚಿನ ಪದಕವು $ 3,750 ಬೆಲೆಗೆ ಇಟಲಿಯ ಕಾರ್ಟಿನಾ ಡಿಯಂಪೇಜೋ ದಲ್ಲಿ ಮಾರಾಟವಾಗಿದೆ. ಈ ವರ್ಷದ ಒಲಿಂಪಿಕ್ಸ್ ಮುನ್ನಾ ದಿನದಂದು, ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ (1896) ಪ್ರಥಮ ಸ್ಥಾನ ಪಡೆದ ಬೆಳ್ಳಿ ಪದಕ ವಿಜೇತರು $ 180,111 ಕ್ಕೆ ಮಾರಾಟ ಮಾಡಿದ್ದಾರೆ. ಆ ಸಮಯದಲ್ಲಿ ಯಾವುದೇ ಚಿನ್ನದ ಪದಕಗಳು ಇರಲಿಲ್ಲ ಎನ್ನುವುದು ಗಮನಾರ್ಹ ವಿಚಾರವಾಗಿದೆ. ಬೋಸ್ಟನ್ ಮೂಲದ ಆರ್‌ಆರ್ ಹರಾಜು ಸಂಸ್ಥೆಯು ಈ ಎಲ್ಲಾ ಮೂರು ಪದಕಗಳನ್ನು ಮಾರಾಟ ಮಾಡಿದೆ. ಆರ್ ಆರ್ ಹರಾಜು ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಬಾಬಿ ಲಿವಿಂಗ್‌ಸ್ಟನ್ ರ ಪ್ರಕಾರ, “ಇದು ಒಂದು ವಿಶಿಷ್ಟವಾದ ಸಂಗ್ರಹವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆಗೆ ಬಂದಿರುವ ಯಾವುದೂ ಇಲ್ಲ” ಎಂದಿದ್ದಾರೆ.
ಮಾಜಿ ಒಲಿಂಪಿಯನ್‌ಗಳು ತಮ್ಮ ಪದಕಗಳನ್ನು ಆರ್ಥಿಕ ತೊಂದರೆಗಳ ಕಾರಣದಿಂದಲೋ ಅಥವಾ ಸಂಸ್ಥೆಗಳಿಗೆ ದಾನ ನೀಡುವುದಕ್ಕಾಗಿಯೋ ಹಣವನ್ನು ಸಂಗ್ರಹಿಸಲು ಮಾರಾಟ ಮಾಡಿದ್ದಾರೆ. ಯುಎಸ್ ಬ್ಯಾಸ್ಕೆಟ್ ಬಾಲ್ ತಂಡವನ್ನು ಮುನ್ನಡೆಸುತ್ತಿರುವ ಬಿಲ್ ರಸೆಲ್, ಈ ವರ್ಷದ ಹರಾಜಿನಲ್ಲಿ 1956 ರ ಒಲಿಂಪಿಕ್ಸ್ ನಿಂದ ಗೆದ್ದ ತನ್ನ ಚಿನ್ನದ ಪದಕವನ್ನು, ಇದರ ಜೊತೆಗೆ ಆತ ತನ್ನ ಎನ್.ಬಿ.ಎ. ಚಾಂಪಿಯನ್‌ಶಿಪ್ ಉಂಗುರಗಳು, ವಾರ್ಮ್ ಅಪ್ ಜಾಕೆಟ್ ಮತ್ತು ಇತರ ಸ್ಮರಣಿಕೆಗಳನ್ನು ಮಾರಾಟ ಮಾಡಲು ನಿರ್ಧಾರ ವನ್ನು ಮಾಡಿದ್ದಾರೆ.
ಅವರ ಈ ಪದಕಗಳು ಹಾಗೂ ಅನ್ಯ ವಸ್ತುಗಳ ಮಾರಾಟದಿಂದ ಸಂಗ್ರಹಿಸಲಾಗುವ ಮೊತ್ತವು MENTOR ಎನ್ನುವ ಸಂಸ್ಥೆಗೆ ಹೋಗುತ್ತದೆ. ಈ ಸಂಸ್ಥೆಯು ಯುವಕರಿಗೆ ಮಾರ್ಗದರ್ಶನ ನೀಡುತ್ತಾ, ಅವರಿಗೆ ಅವಕಾಶಗಳನ್ನು ಉತ್ತೇಜಿಸುತ್ತದೆ ಎನ್ನಲಾಗಿದೆ. ಜುಲೈ 22, 2021 ರಂದು, 1984 ಯುಎಸ್ ಬ್ಯಾಸ್ಕೆಟ್‌ಬಾಲ್ ತಂಡದ ಒಬ್ಬ ಅಜ್ಞಾತ ಸದಸ್ಯನು ಗೆದ್ದ ಚಿನ್ನದ ಪದಕ $ 83,188 ಗೆ ಮಾರಾಟವಾಯಿತು. ಅದು 1936 ರಲ್ಲಿ ಬರ್ಲಿನ್‌ನಲ್ಲಿ ನಡೆದ ಬೇಸಿಗೆ ಕ್ರೀಡಾಕೂಟದಲ್ಲಿ ಜೆಸ್ಸಿ ಓವೆನ್ಸ್ ಗೆದ್ದ ನಾಲ್ಕು ಚಿನ್ನದ ಪದಕಗಳಲ್ಲಿ ಒಂದಕ್ಕೆ 2019 ರಲ್ಲಿ ಸಂಗ್ರಾಹಕರೊಬ್ಬರು ಪಾವತಿಸಿದ್ದ ಸರಿಸುಮಾರು $ 1.5 ಮಿಲಿಯನ್‌ನ ಒಂದು ಭಾಗವಾಗಿತ್ತು. 1936 ರಲ್ಲಿ ಹಿಟ್ಲರ್ ಈ ಆಟಗಳನ್ನು ನೋಡಿದ್ದ ಎನ್ನುವುದು ಇತಿಹಾಸ.
ಹರಾಜು ತಜ್ಞರ ಪ್ರಕಾರ, ಅಥ್ಲೆಟಿಕ್ ಸಾಹಸಗಳು, ಅದಕ್ಕೆ ಸಂಬಂಧಿಸಿದ ಹೆಸರುಗಳು ಮತ್ತು ಸನ್ನಿವೇಶಗಳು ಮುಖ್ಯವಾಗಿರುತ್ತದೆ. ಆದಾಗ್ಯೂ, ಒಲಿಂಪಿಯನ್‌ಗಳ ಹೆಸರನ್ನು ಪದಕಗಳ ಮೇಲೆ ಕೆತ್ತಲಾಗಿಲ್ಲ. ಇದರ ಜೊತೆಗೆ ಯಾವುದೇ ಒಂದು ಪದಕದ ಮೂಲ ಮತ್ತು ಅವರ ಮಾಲೀಕತ್ವದ ಇತಿಹಾಸವು ಅದರ ಸ್ಥಿತಿಯನ್ನು ಹಾಗೂ ಬೆಲೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳುತ್ತಾರೆ.
ಗಮನಿಸಬೇಕಾದ ವಿಷಯ :
1- ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳು 85 ಮಿಮೀ ವ್ಯಾಸ ಮತ್ತು ಅವು ಸುಮಾರು 7.7 ಎಂಎಂ ನಿಂದ 12.1 ಮಿಮೀ ವರೆಗೆ ದಪ್ಪ ಇರುತ್ತದೆ.
2- ಚಿನ್ನದ ಪದಕವನ್ನು ಚಿನ್ನದ ಬಣ್ಣ ಲೇಪಿತ ಶುದ್ಧ ಬೆಳ್ಳಿಯಿಂದ ತಯಾರಿಸಲಾಗುತ್ತದೆ, ಇದು ಒಟ್ಟು 556 ಗ್ರಾಂ ತೂಕ ಹೊಂದಿದ್ದು, ಸುಮಾರು 6 ಗ್ರಾಂ ಚಿನ್ನವನ್ನು ಒಳಗೊಂಡಿರುತ್ತದೆ.