ಒಲಂಪಿಕ್ಸ್ ನಲ್ಲಿ ಬಂಗಾರ ಗೆದ್ದ ದೇಶದ ಹೆಮ್ಮೆ ನೀರಜ್ ಚೋಪ್ರಾ 2 ವರ್ಷದ ಹಿಂದೆ ಪ್ರಧಾನಿ ಮೋದಿ ಬಗ್ಗೆ ಮಾಡಿದ ಟ್ವೀಟ್ ಈಗ ವೈರಲ್
ಟೋಕಿಯೋ ಒಲಿಂಪಿಕ್ ನಲ್ಲಿ ಚಿನ್ನದ ಪದಕವನ್ನು ಬೇಟೆಯಾಡಿದ ಭಾರತದ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ ಅವರು ಭಾರತದ ಪತಾಕೆಯನ್ನು ಜಗತ್ತಿನ ಪಟಲದ ಮೇಲೆ ರಾರಾಜಿಸಿದರು. ಇವರು ಕೊನೆಯ ಸುತ್ತಿನಲ್ಲಿ 87.58 ಮೀಟರ್ ದೂರದ ಅಂತರದಲ್ಲಿ ಜಾವಲಿನ್ ಎಸೆದರು. ನೀರಜ್ ಅವರ ಈ ಪ್ರಯತ್ನದಿಂದ ಭಾರತ 13 ವರ್ಷಗಳ ನಂತರ ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನದ ಮೇಡಲ್ ಗೆದ್ದಿತು. ಈ ದಿಗ್ವಿಜಯದ ನಂತರ ಸೋಶಿಯಲ್ ಮೀಡಿಯಾದಲ್ಲಿ ನೀರಜ್ ಬಗ್ಗೆ ಇನ್ನಷ್ಟು ಮಾಹಿತಿ ಶೋಧಿಸಲು ಶುರುವಾಗಿದೆ.
ಆದರೆ ಈಗ ನೀರಜ್ ಚೋಪ್ರಾ ಅವರು 2 ವರ್ಷಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಮಾಡಿದ ಒಂದು ಟ್ವೀಟ್ ಸದ್ಯ ವೈರಲ್ ಆಗುತ್ತಿದೆ.

ಪ್ರಧಾನ ಮಂತ್ರಿ ಮೋದಿಯವರ ನೇತೃತ್ವದಲ್ಲಿ 2019 ರ ಮೇ ತಿಂಗಳಿನಲ್ಲಿ ಎರಡನೆಯ ಬಾರಿಗೆ ಲೋಕಸಭೆಯ ಎಲೆಕ್ಷನ್ ಗೆದ್ದ ನಂತರ ಇದೇ ಸಂದರ್ಭ ವಾಗಿ ಮೇ 24 ರಂದು ನೀರಜ್ ಒಂದು ಟ್ವೀಟ್ ಮಾಡಿದ್ದರು. ತಮ್ಮ ಟ್ವೀಟ್ ನಲ್ಲಿ ನೀರಜ್ ಅವರು, ‘ಈ ಐತಿಹಾಸಿಕ ಗೆಲುವಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ನಿಮಗೆ ಅಭಿನಂದನೆಗಳು. ನಿಮ್ಮ ನೇತೃತ್ವದಲ್ಲಿ ದೇಶವು ಹೊಸ ಶಿಖರಕ್ಕೆ ಮುಟ್ಟಲಿ ಎಂದು ಇಚ್ಚಿಸುತ್ತೇನೆ’ ಅಂತ ಹೇಳಿದ್ದರು.
2008 ರ ಬೀಜಿಂಗ್ ಒಲಪಿಂಕ್ ನಲ್ಲಿ ಶೂಟರ್ ಅಭಿನವ್ ಬಿಂದ್ರಾ ಭಾರತಕ್ಕಾಗಿ ಸುವರ್ಣವನ್ನು ಗೆದ್ದಿದ್ದರು. ಅದರ ನಂತರ ನೀರಜ್ ಚೋಪ್ರಾ ಅವರು ಈ ಸಾಧನೆ ಮಾಡಿದ್ದರಿಂದ ಸದ್ಯ ಅವರ ಮೇಲೆ ಪ್ರಶಂಸೆಯ ಸುರಿಮಳೆಯೇ ಸುರಿಯುತ್ತಿದೆ. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಮೋದಿ ಅವರು ಸಹ ನೀರಜ್ ಅವರ ಉತ್ಕೃಷ್ಟ ಆಟಕ್ಕಾಗಿ ಫೋನಿನಲ್ಲಿ ಮಾತನಾಡಿ ಅಭಿನಂದನೆಗಳನ್ನು ನೀಡಿದ್ದಾರೆ. ಭಾರತದ ಎಲ್ಲ ಆಟಗಾರರು ತೆಗೆದುಕೊಂಡ ಕಠೋರ ಪರಿಶ್ರಮ ಮತ್ತು ದೃಢತೆಯ ಬಗ್ಗೆ ಶ್ಲಾಘಿಸಿದ್ದಾರೆ. ಜೊತೆಗೆ ನಿರಜ್ ಉತ್ಕೃಷ್ಟವಾಗಿ ಆಟ ಆಡು ಮತ್ತು ಕ್ರೀಡಾ ಮನೋಭಾವನೆಯ ಪರಿಚಯವನ್ನು ನೀಡು ಹಾಗೂ ನಿಮ್ಮ ಮುಂದಿನ ಜೀವನಕ್ಕೆ ಶುಭ ಹಾರೈಸುತ್ತೇನೆ’ ಎಂದು ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ.

ನೀರಜ್ ಚೋಪ್ರಾ ಅವರಿಗೆ ಪ್ರಧಾನಮಂತ್ರಿಯ ಜೊತೆಗೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯದ ಮುಖ್ಯಮಂತ್ರಿ ಹಾಗೂ ಕೇಂದ್ರದ ಸಚಿವರು ಮತ್ತು ಇನ್ನೂ ಅನೇಕ ರಾಜಕೀಯ ಪಕ್ಷದ ಮುಖಂಡರು ಶುಭಹಾರೈಸಿದ್ದಾರೆ.