ಒಳ್ಳೆಯ ಕೆಲಸಕ್ಕೆ ಸಿಕ್ಕ ಪ್ರತಿಫಲ: ಸಲ್ಮಾನ್ ಖಾನ್ ನನ್ನು ತೆಗೆದು ಸೋನು ಸೂದ್ ಗೆ Brand Ambassador ಮಾಡಿದ ಕೋಲ್ಡ್ ಡ್ರಿಂಕ್ ಕಂಪನಿ!
ಮುಂಬಯಿ:- ಕೋರೊನಾ ವೈರಸ್ ಕಾರಣದಿಂದ ಸುಮಾರು ನಾಲ್ಕು ಹಂತಗಳ ಲಾಕ್ಡೌನ್ ಮುಗಿದ ನಂತರ ಸದ್ಯಕ್ಕೆ ಐದನೆಯ ಹಂತದ ಲಾಕ್ಡೌನ್ ಜಾರಿಯಲ್ಲಿದೆ. ಇದರಿಂದ ದೇಶದ ತುಂಬೆಲ್ಲಾ ಮಾರ್ಚ್ ತಿಂಗಳಿಂದ ಲಾಕ್ಡೌನ್ ಪ್ರಾರಂಭ ಮಾಡಿದ್ದಾರೆ. ಆದರೆ ಲಾಕ್ಡೌನ್ ದಿಂದ ದೇಶದ ವಲಸೆ ಕಾರ್ಮಿಕರಿಗೆ ತುಂಬಾ ಕಷ್ಟಕರವಾದ ಪರಸ್ಥಿತಿಗಳನ್ನು ಎದುರಿಸಬೇಕಾಯಿತು. ತಮ್ಮ ಮನೆಗಳನ್ನು ಬಿಟ್ಟು ಕೆಲಸ ಮಾಡಲು ಪಟ್ಟಣಕ್ಕೆ ಬಂದ ವಲಸೆ ಕಾರ್ಮಿಕರು ಮರಳಿ ತಮ್ಮ ಮನೆಗೆ ಹೋಗಲು ಸಮಸ್ಯೆ ನಿರ್ಮಾಣವಾದಾಗ ಬಾಲಿವುಡ್ ಖಳನಾಯಕ ಎಂದೇ ಪ್ರಸಿದ್ದಿ ಪಡೆದಿರುವ ಸೋನು ಸೂದ್ ವಲಸೆ ಕಾರ್ಮಿಕರನ್ನು ಅವರ ಊರಿಗೆ ತಲುಪಿಸುವ ಕಾರ್ಯ ಪ್ರಾರಂಭ ಮಾಡಿದರು. ಇದುವರೆಗೆ ಸುಮಾರು 20 ಸಾವಿರಕ್ಕಿಂತ ಹೆಚ್ಚು ವಲಸೆ ಕಾರ್ಮಿಕರನ್ನು ಅವರ ಮನೆಗೆ ಕಳುಹಿಸಿದ್ದಾರೆ.

ಈ ಒಂದು ಉತ್ತಮವಾದ ಸಮಾಜ ಕಾರ್ಯದಿಂದ ಸೋನು ಸೂದ್ ಅವರಿಗೆ ಒಂದು ದೊಡ್ಡ ಭಾಗ್ಯವೇ ಒಲಿದು ಬಂದಿದೆ. ಅದೇನೆಂದರೆ ಒಂದು ಕೋಲ್ಡ್ರಿಂಕ್ಸ್ ಕಂಪನಿಯು ಸೋನು ಸೂದ್ ಅವರಿಗೆ ತಮ್ಮ ಬ್ರಾಂಡ್ ಅಂಬೇಸಡರ್ ಮಾಡಿದೆ. ಇನ್ನು ಮುಂದೆ ಕೋಲ್ಡ್ರಿಂಕ್ಸ್ ಪ್ರಚಾರ ಸಲ್ಮಾನ್ ಖಾನ್ ಬದಲಾಗಿ ಸೋನು ಸೂದ್ ಅವರು ಮಾಡುವರು.

ಮೀಡಿಯಾ ರಿಪೋರ್ಟ್ ಪ್ರಕಾರ, ತಂಪು ಪಾನೀಯಗಳನ್ನು ( Cold drink company) ತಯಾರಿಸುವ ಕಂಪನಿಯ ಬ್ರಾಂಡ್ ಅಂಬೇಸಡರ್ ಮೊದಲು ಸಲ್ಮಾನ್ ಖಾನ್ ಇದ್ದರು ಆದರೀಗ ಈ ಕಂಪನಿಯು ತಮ್ಮ ಅಂಬೇಸಡರ್ ಆಗಿ ಸೋನು ಸೂದ್ ಅವರನ್ನು ಆಯ್ಕೆ ಮಾಡಿದ್ದಾರೆ.
ಸೋನುಸೂದ್ ಹಾಗೂ ಕೋಲ್ಡ್ರಿಂಕ್ ಕಂಪನಿಯ ನಡುವೆ ಈ ಡೀಲ್ ಕೇವಲ ಒಂದೇ ಹಂತಕ್ಕಾಗಿ ಆಗಿದೆ. ಅಲ್ಲದೆ ಕಂಪನಿಯು ವ್ಯವಸಾಯದ ಈ ಸಂಬಂಧವನ್ನು ಮುಂದುವರೆಸಲು ಸಹಿತ ನಿರಾಕರಿಸಿಲ್ಲ ಎಂದು ಸ್ಪಷ್ಟ ಪಡಿಸಿದೆ.