ಕಂಕುಳಲ್ಲಿ ಮಗುವನ್ನು ಎತ್ತಿಕೊಂಡು, ಕಾಲೇಜಿನಲ್ಲಿ ಉಪನ್ಯಾಸ ಮಾಡುವ ತಂದೆ: ಕಾರಣ ತಿಳಿದರೆ ಕಣ್ಣೀರು ಬರುತ್ತದೆ!
ಮಗು ಹುಟ್ಟಿನಿಂದಲೇ ತನ್ನ ತಾಯಿಯ ನೆರಳಲ್ಲಿ ಬೆಳೆಯುತ್ತದೆ. ಚಿಕ್ಕ ಮಗುವಿಗೆ ಕ್ಷಣ ಕ್ಷಣಕ್ಕೆ ಏನಾದರೂ ಅವಶ್ಯಕತೆ ಮತ್ತು ಪಾಲನೆ ಪೋಷಣೆಯ ಅವಶ್ಯಕತೆ ಇರುತ್ತದೆ. ಅದನ್ನು ತಾಯಿಯು ಸಲ್ಪವೂ ಬೇಸರಗೊಳ್ಳದೆ ಪೂರೈಕೆ ಮಾಡುತ್ತಾಳೆ. ಆದರೆ ಇದನ್ನೇ ತಂದೆಗೆ ಹೋಲಿಸಿದಾಗ ಮಗುವಿನ ಆರೈಕೆಯಲ್ಲಿ ಅಷ್ಟೊಂದು ಹೆಚ್ಚು ತತ್ಪರತೆ ತೋರುವುದಿಲ್ಲ. ತಂದೆ ಮಾತ್ರ ತನಗೆ ಸಮಯ ಸಿಕ್ಕಾಗ ಮಗುವಿನ ಕಡೆಗೆ ಗಮನ ನೀಡುತ್ತಾನೆ. ಆದರಿಲ್ಲಿ ದಿನದ 24 ಗಂಟೆಗಳವರೆಗೆ ಬಿಡದೆ ಮಗುವಿನ ಕಾಳಜಿ ತೆಗೆದುಕೊಳ್ಳುವ ತಂದೆಯ ಬಗ್ಗೆ ಹೇಳುವವರಿದ್ದೇವೆ. ಈ ತಂದೆ ಮಗುವಿನ ಪ್ರತಿಯೊಂದು ಬೇಕು-ಬೇಡಗಳನ್ನು ನಿಮಿಷ ನಿಮಿಷಕ್ಕೂ ಪೂರೈಸುತ್ತಿದ್ದಾನೆ.
ಈ ಮಗುವಿನ ತಂದೆ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ತನ್ನ ಮಗುವಿನ ಜೊತೆಗೆ ಕಾಲೇಜ್ ಮಕ್ಕಳ ಭವಿಷ್ಯವನ್ನು ಸಹ ಗಮನಿಸಬೇಕಾಗಿದೆ. ಸಾಮಾನ್ಯವಾಗಿ ತಾಯಂದಿರು ತಮ್ಮ ಮಕ್ಕಳನ್ನು ತಾವು ಉದ್ಯೋಗ ಮಾಡುವ ಸ್ಥಳಕ್ಕೆ ಜೊತೆಯಲ್ಲಿ ಕರೆದುಕೊಂಡು ಹೋಗುವುದನ್ನು ನೋಡಿದ್ದೇವೆ. ಆದರಿಲ್ಲಿ ದಿನಂಪ್ರತಿ ತಂದೆ ತಾನು ನೌಕರಿ ಮಾಡುವ ಸ್ಥಳಕ್ಕೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾನೆ. ಹೀಗಾಗಿ ತಾಯಿಯು ಮಾಡುವ ಕೆಲಸವನ್ನು ಈ ತಂದೆಯು ಸಂಪೂರ್ಣ ಜವಾಬ್ದಾರಿಯಿಂದ ಮಾಡುತ್ತಿದ್ದಾನೆ.
ಈ ತಂದೆಯ ಪ್ರೀತಿ ಮತ್ತು ಜವಾಬ್ದಾರಿಯನ್ನು ನೋಡಿ ಸೋಶಿಯಲ್ ಮೀಡಿಯಾದಲ್ಲಿಯ ನೆಟ್ಟಿಗರು ತುಂಬಾ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ. ಮಗುವಿನ ಜೊತೆಗೆ ಕಾಲೇಜ್ನಲ್ಲಿ ಶಿಕ್ಷಣವನ್ನು ನೀಡುತ್ತಿರುವ ಈ ಪ್ರಾಧ್ಯಾಪಕರ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಚಿತ್ರದ ಹಿಂದೆ ಮನಕಲಕುವ ಕಥೆಯೇ ಇದೆ. ಈ ಮಗುವಿನ ತಾಯಿ ಸದ್ಯ ಈ ಜಗತ್ತಿನಲ್ಲಿಲ್ಲ. ಈ ಮಗು ಹುಟ್ಟುತ್ತಲೇ ತಾಯಿಯ ನಿಧನವಾಗಿದೆ. ಈ ಕಾರಣದಿಂದಾಗಿ ತಂದೆಯು ತನ್ನ ಕರ್ತವ್ಯವನ್ನು ಜವಾಬ್ದಾರಿಯಿಂದ ಅಷ್ಟೇ ಕಾಳಜಿಯಿಂದ ನಿಭಾಯಿಸುತ್ತಿದ್ದಾನೆ. ತನ್ನ ನೌಕರಿಯ ಜೊತೆಗೆ ಮಗುವಿನ ಸಂಗೋಪನೆಯನ್ನು ಸಹ ಮಾಡುತ್ತಿದ್ದಾನೆ.
ಈ ಸುಂದರವಾದ ಫೋಟೋವನ್ನು ಐಎಎಸ್ ಅಧಿಕಾರಿ ಅವನೀಷ್ ಶರಣ್ ಅವರು ತಮ್ಮ ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಿ ಕ್ಯಾಪ್ಶನ್ ನಲ್ಲಿ “ಮಗುವಿಗೆ ಜನ್ಮ ನೀಡುತ್ತಲೇ ತಾಯಿಯ ನಿಧನವಾಯಿತು. ಇಂಥ ಪರಿಸ್ಥಿತಿಯಲ್ಲಿ ತಂದೆಯು ತನ್ನ ಮಗುವಿನ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ, ಅದರ ಜೊತೆಗೆ ಕಾಲೇಜ್ ಮಕ್ಕಳ ಅಭ್ಯಾಸ ಸಹ ತೆಗೆದುಕೊಳ್ಳುತ್ತಿದ್ದಾರೆ” ಎಂದು ಬರೆದಿದ್ದಾರೆ.
ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸಂಚಲನ ಮೂಡಿಸಿದೆ. ಜನರು ಈ ತಂದೆಗೆ ‘ರಿಯಲ್ ಲೈಫ್’ ಹೀರೋ ಎಂದು ಸಂಬೋಧಿಸುತ್ತಿದ್ದಾರೆ. ಈ ತಂದೆಯ ಪರಿಸ್ಥಿತಿಯನ್ನು ನೋಡಿ ಎಷ್ಟೋ ನೆಟ್ಟಿಗರಿಗೆ ಕಣ್ಣಲ್ಲಿ ನೀರೂ ಬಂದಿದೆ.