ಕಂಗನಾ ರಾಣಾವತ್ ಗೆ ಕೊಟ್ಟ Y+ ಸೆಕ್ಯುರಿಟಿಯಿಂದ ಪ್ರತಿ ತಿಂಗಳು ಕೇಂದ್ರ ಸರಕಾರಕ್ಕೆ ಬರುವ ಖರ್ಚು ಎಷ್ಟು ಗೊತ್ತಾ? ಅಚ್ಚರಿ ಪಡುವಿರಿ!

ಬಾಲಿವುಡ್ ದ ಉದಯೋನ್ಮುಖ ನಟನಾದ ಸುಶಾಂತ್ ಸಿಂಗ್ ರಾಜಪೂತ್ ಅವರ ಅಕಾಲಿಕ ನಿರ್ಗಮನದ ಪ್ರಕರಣದಿಂದಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ವಿರೋಧಪಕ್ಷವಾದ ಬಿಜೆಪಿಯು ಅಡಕತ್ತರಿಯಲ್ಲಿ ಸಿಲುಕಿಸಿದೆ. ಇದೇ ಪ್ರಕರಣದಿಂದಾಗಿ ಬಾಲಿವುಡ್ ನಟಿಯಾದ ಕಂಗನಾ ರಣಾವತ್ ಅವರೂ ಈ ಆರೋಪ-ಪ್ರತ್ಯಾರೋಪಗಳಲ್ಲಿ ಭಾಗಿಯಾದರು. ಈ ವಾದ ಮುಂದೆ ಮಹಾರಾಷ್ಟ್ರ ಸರ್ಕಾರದ ಮುಖ್ಯಮಂತ್ರಿ ಮತ್ತು ಶಿವಸೇನೆಯ ಜೊತೆಗೆ ಅತಿರೇಕಕ್ಕೆ ಹೋಯಿತು. ಒಬ್ಬರಿಗೊಬ್ಬರು ದೂಷಿಸುವ ಭರದಲ್ಲಿ ಕಂಗನಾ ಮುಂಬಯಿಯ ತುಲನೆ POK ಅಂದರೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದರು.

ಈ ಮಾತುಗಳಿಂದ ರೊಚ್ಚಿಗೆದ್ದ ಶಿವಸೇನೆಯು ಸಹಿತ ತನ್ನ ಎಲ್ಲೆ ಮೀರಿ ಕಂಗನಾಳ ಮೇಲೆ ಬಾಯಿಯನ್ನು ಹರಿಬಿಟ್ಟತು. ಈ ವಿಷಯದಿಂದ ಕಂಗನಾ ರಣಾವತ್ ಅವರು ನನಗೆ ಮುಂಬೈಯಲ್ಲಿ ವಾಸ್ತವ್ಯ ಮಾಡಲು ಅಸುರಕ್ಷಿತವೆನಿಸುತ್ತಿದೆ ಎಂದು ಹೇಳಿಕೊಂಡಿದ್ದರು. ಈ ಕಾರಣದಿಂದ ಕೇಂದ್ರ ಸರ್ಕಾರವು ಕಂಗನಾ ರಣಾವತ್ ಅವರಿಗೆ Y+ ಸಂರಕ್ಷಣೆಯನ್ನು ಕಲ್ಪಿಸಿಕೊಟ್ಟರು. ಕೇಂದ್ರವು ಕಂಗನಾಳಿಗೆ ಕೊಟ್ಟ ಈ ಸುರಕ್ಷೆ ಯಿಂದಲೂ ಶಿವಸೇನೆಯು ಕೇಂದ್ರದ ಮೇಲೆ ಕಿಡಿ ಕಾರಿತು.

ಇದರ ನಂತರ ಕಂಗನಾಳು ನಾನು ಮುಂಬೈಗೆ ಬಂದೇ ಬರುತ್ತೇನೆ ಎಂದು ಶಿವಸೇನೆಗೆ ಚಾಲೆಂಜ್ ಮಾಡಿ ತಾನು ಬರುವ ದಿನಾಂಕವನ್ನು ಸಹಿತ ಜಾಹೀರು ಮಾಡಿ ಮುಂಬೈಗೆ ಬಂದೇಬಿಟ್ಟರು. ಈ ಸಂದರ್ಭದಲ್ಲಿ ಕಂಗನಾ ರಣಾವತ್ ಗೆ ಮುಂಬೈಯಲ್ಲಿ ಮುಂಬೈ ಪೊಲೀಸರಿಂದ ಬಿಗಿ ಭದ್ರತೆಯನ್ನು ಒದಗಿಸಲಾಯಿತು. ಇದನ್ನು ವಿರೋಧಿಸಲು ಶಿವಸೇನೆಯ ಕಾರ್ಯಕರ್ತರು ತುಂಬಾ ಪ್ರಮಾಣದಲ್ಲಿ ಹಾಜರಾಗಿದ್ದರು.

ಇದರ ಹಿನ್ನೆಲೆಯಲ್ಲಿ ಕಂಗನಾ ರಣಾವತ್ ಮಾಡಿದ ತೀಕ್ಷ್ಣವಾದ ಮಾತುಗಳಿಂದ ಸಿಟ್ಟಿಗೆದ್ದು ಮುಂಬೈ ಮಹಾನಗರ ಪಾಲಿಕೆಯು ಪ್ರಶಾಸನವು ಕಂಗನಾಳ ಮುಂಬೈಯಲ್ಲಿಯ ಅನಧಿಕೃತ ಕಟ್ಟಡವನ್ನು ನೆಲಸಮ ಮಾಡಿದ್ದರು. ಇದನ್ನು ನೋಡಿ ಬಾಲಿವುಡ್ ದ ಈ ಬೆಡಗಿ ನೆಲಸಮಗೊಂಡ ತನ್ನ ಆಫೀಸ್ ರಾಮಮಂದಿರಕ್ಕೆ ಮತ್ತು ಆಫೀಸನ್ನು ಕೆಡವಿದ BMC ಯ ಕೆಲಸಗಾರರಿಗೆ ಬಾಬರ್ ನ ಸೈನ್ಯಕ್ಕೆ ಹೋಲಿಸಿದ್ದರು.

ಈ ಎಲ್ಲಾ ಘಟನೆಗಳಿಂದ ವಾದವು ಮತ್ತಷ್ಟು ತಾರಕಕ್ಕೇರಿ ಏನಾದರೂ ಅಘಟಿತ ಘಟನೆ ಘಟಿಸಬಾರದೆಂದು ಕಂಗನಾ ರಣಾವತ್ ಗೆ Y+ ಭದ್ರತೆಯನ್ನು ನೀಡಲಾಗಿದೆ. ಈಗ ಕೇಂದ್ರ ಸರ್ಕಾರವು ಕಂಗನಾಳಿಗೆ ನೀಡಿದ ಈ ಭದ್ರತೆಯ ಖರ್ಚಿಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ಜನ ಪ್ರಶ್ನೆಯನ್ನು ಹಾಕುತ್ತಿದ್ದಾರೆ. ಸರ್ವೋಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆಸಲ್ಲಿಸುತ್ತಿರುವ ಬ್ರಿಜೇಶ್ ಕಲ್ಲಪ್ಪ ಅವರು ಈ ಪ್ರಶ್ನೆಯನ್ನು ಎತ್ತಿದ್ದಾರೆ. ವ್ಯಕ್ತಿಯೊಬ್ಬನಿಗೆ Y+ ಭದ್ರತೆಯನ್ನು ಒದಗಿಸಲು ಕೇಂದ್ರ ಸರ್ಕಾರಕ್ಕೆ ತಿಂಗಳಿಗೆ ಸುಮಾರು 10 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಈ ಹಣ ದೇಶಕ್ಕೆ ಕರ ತುಂಬುವ ಸಾಮಾನ್ಯ ಜನರ ಹಣ ವಾಗಿದೆ. ಮತ್ತು ಭದ್ರತೆಯ ಹೆಸರಿನಲ್ಲಿ ಕಂಗನಾ ರಣಾವತ್ ಗೆ ಖರ್ಚು ಮಾಡುತ್ತಿರುವ ಈ ಹಣ ತುಂಬಾ ವ್ಯರ್ಥ ರೂಪದಲ್ಲಿ ಖರ್ಚಾಗುತ್ತಿದೆ, ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಸದ್ಯಕ್ಕಂತೂ ಕಂಗನಾ ತನ್ನ ರಾಜ್ಯವಾದ ಹಿಮಾಚಲ ಪ್ರದೇಶದಲ್ಲಿಯೇ ಇದ್ದಾರೆ.